ಲಸಿಕೆ ಅಭಿಯಾನ: ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್

ನವದೆಹಲಿ: ಕೊರೊನಾ ಲಸಿಕೆ ನೀತಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. 2021ರ ಅಂತ್ಯಕ್ಕೆ ಎಲ್ಲರಿಗೂ ಲಸಿಕೆ ನೀಡುವ ಕೇಂದ್ರದ ಘೋಷಣೆಗೆ ತಕ್ಕಂತೆ ಯಾವುದೇ ಪೂರಕ ತಯಾರಿ ಇಲ್ಲ ಎಂದು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಕೋವಿನ್‌ ಆ್ಯಪ್ ಸಮಸ್ಯೆ, ಲಸಿಕೆ ದರದಲ್ಲಿ ತಾರತಮ್ಯ, ಲಸಿಕೆ ಕೊರತೆ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದ ನ್ಯಾಯಾಲಯ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ಖಡಕ್ ಸೂಚನೆಕೊಟ್ಟಿದೆ. ಇನ್ನು ಲಸಿಕೆಗಳಿಗೆ ಏಕರೂಪದ ಬೆಲೆ ನಿಗದಿಪಡಿಸುವಂತೆ ಸೂಚಿಸಿದ್ದು, ಲಸಿಕೆ ಖರೀದಿ ನೀತಿ […]

ದೇಶದಲ್ಲಿ ಕೊರೊನಾ ಮತ್ತಷ್ಟು ಇಳಿಕೆ: ಕಳೆದ 24 ಗಂಟೆಗಳಲ್ಲಿ ದಾಖಲಾದ ಕೊರೊನಾ ಪ್ರಕರಣಗಳ ಸಂಖ್ಯೆ, ಡಿಸ್ಚಾರ್ಜ್ ವಿವರ ಹೀಗಿದೆ

ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದೆ. ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 1,27,510 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 2,795 ಮಂದಿ ಮೃತಪಟ್ಟಿದ್ದಾರೆ. 2,55,287 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಸದ್ಯ 18,95,520 ಆ್ಯಕ್ಟಿವ್ ಕೇಸ್​ಗಳಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ದೇಶದಲ್ಲಿ ಈವರೆಗೆ ಕೊರೊನಾ ಸೋಂಕಿಗೊಳಗಾದವರ ಒಟ್ಟು ಸಂಖ್ಯೆ 2,81,75,044 ಹಾಗೂ ಈವರೆಗೆ ಡಿಸ್ಚಾರ್ಜ್ ಆದವರ ಸಂಖ್ಯೆ 2,59,47,629. ಒಟ್ಟು 3,31,895 ಮಂದಿ ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.  ಇನ್ನು ಈವರೆಗೆ ದೇಶದಲ್ಲಿ21,60,46,638 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ […]

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಚಾರಿಟೇಬಲ್ ಟ್ರಸ್ಟ್ ನಿಂದ ರಾಜೀವನಗರದ ಬಡಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

ಮಣಿಪಾಲ: ಕೋವಿಡ್ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ರಾಜೀವನಗರದ ಆಸುಪಾಸಿನ ಹಲವಾರು ಬಡ ಕುಟುಂಬಗಳಿಗೆ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಚಾರಿಟೇಬಲ್ ಟ್ರಸ್ಟ್ ಉಡುಪಿ ಇದರ ವತಿಯಿಂದ ಸೋಮವಾರ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು. ಮಲಬಾರ್ ಗೋಲ್ಡ್ ನ ತಂಝೀಮ್ ಶಿರ್ವಾ, ಇರ್ಷಾದ್ ಮತ್ತು ನಿತೀನ್ ಶೇಟ್ ತಂಡದವರ ಸಂಪೂರ್ಣ ಸಹಕಾರದೊಂದಿಗೆ ಬಡಕುಟುಂಬಗಳಿಗೆ ಕಿಟ್ ಹಂಚಲಾಯಿತು. ರೇವತಿ, ಸುನೀತಾ, ಭೋಜ, ಅಶೋಕ್ , ಮಾಧವ, ಸೆಂಥಿಲ್, ಸುರೇಶ್, ಜಾನಕಿ, ಪ್ರದೀಪ್, ಗೌರಿ ಚಂದ್ರ, ದಿನೇಶ್ ಪಾಣರ, ಗೀತಾ […]