ಉಡುಪಿ: ಆಶ್ರಯದಾತ ಆಟೋ ಯೂನಿಯನ್ ವತಿಯಿಂದ ಕಿಟ್ ವಿತರಣೆ

ಉಡುಪಿ: ಆಶ್ರಯದಾತ ಆಟೋ ಯೂನಿಯನ್ ಉಡುಪಿ ಜಿಲ್ಲೆ ಹಾಗೂ ದಾನಿಗಳ ಸಹಕಾರದೊಂದಿಗೆ ಬ್ರಹ್ಮಾವರ ತಾಲೂಕಿನ ಬೈಕಾಡಿ ಗ್ರಾಮದ 5 ಕೊವಿಡ್ ಸಂತ್ರಸ್ತ ಕುಟುಂಬಕ್ಕೆ ಹಾಗೂ ಉಡುಪಿ ಅಂಬಾಗಿಲಿನ 5 ಕುಟುಂಬಗಳಿಗೆ ಇಂದು ಆಹಾರ ಕಿಟ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷರಾದ ಯುವರಾಜ್ ಪುತ್ತೂರು, ಚೇತನ್ ಹನುಮಂತನಗರ, ಆಶ್ರಯದಾತ ಆಟೋ ಯೂನಿಯನ್ ಉಡುಪಿ ತಾಲೂಕು ಅಧ್ಯಕ್ಷರಾದ ಸಾಧಿಕ್ ಮಿಷನ್ ಕಂಪೌಂಡ್, ಗೌರವಾಧ್ಯಕ್ಷರಾದ ಶೇಖರ್ ಜತ್ತನ್ ಹೇರೂರ್, ಸದಸ್ಯರಾದ ಉಮೇಶ್ ಶೆಟ್ಟಿ ಅಂಬಾಗಿಲು. ಕಚೇರಿ […]

ಉಡುಪಿ: ಇಂದಿನ ಕೊರೊನಾ ಪ್ರಕರಣಗಳ ವಿವರ ಹೀಗಿದೆ

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆ ಹಾದಿಯಲ್ಲಿ ಸಾಗುತ್ತಿದ್ದು, ಇಂದು 766 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಉಡುಪಿ ತಾಲೂಕಿನಲ್ಲಿ 285, ಕುಂದಾಪುರ ತಾಲೂಕಿನಲ್ಲಿ 293, ಕಾರ್ಕಳ ತಾಲೂಕಿನಲ್ಲಿ‌ 186 ಹಾಗೂ ಹೊರ ಜಿಲ್ಲೆಯ 2 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 5942 ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಂದು ಕೂಡ ನಾಲ್ಕು ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಉಡುಪಿ ತಾಲೂಕಿನ 40, 57 ಮತ್ತು 62 ವರ್ಷದ ಮಹಿಳೆಯರು ಹಾಗೂ ಕುಂದಾಪುರ […]

ಉಡುಪಿ: ಹೂವು, ಹಣ್ಣು , ತರಕಾರಿ ಬೆಳೆಗಾರರಿಗೆ ಪರಿಹಾರ..

ಉಡುಪಿ ಮೇ 28: ಕೋವಿಡ್-19 ರ ಎರಡನೆ ಅಲೆ ಕಾರಣ ರಾಜ್ಯದಲ್ಲಿ ವಿಧಿಸಿರುವ ಜನತಾ ಕರ್ಪ್ಯೂ ಅವಧಿಯಲ್ಲಿ ಹೂವು, ಹಣ್ಣು ಹಾಗೂ ತರಕಾರಿ ಬೆಳೆಗಾರರಿಗೆ ಉಂಟಾದ ನಷ್ಟಕ್ಕೆ ಹೆಕ್ಟೇರ್ ರೂ.10,000 ಪರಿಹಾರವನ್ನು ಗರಿಷ್ಟ 1 ಹೆಕ್ಟೇರ್ ಗೆ ಹಾಗೂ ಕನಿಷ್ಟ ರೂ.2000 ಕ್ಕೆ ಮಿತಿಗೊಳಿಸಿ ವಿತರಿಸಲಾಗುವುದು. ವಾರ್ಷಿಕ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಳಿಗೆ 2021-22 ನೇ ಸಾಲಿನ ಬೇಸಿಗೆ ಬೆಳೆ ಸಮೀಕ್ಷೆ ಹಾಗೂ ಬಹುವಾರ್ಷಿಕ ಬೆಳೆಗಳಿಗೆ 2021-22 ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಮಾಹಿತಿಯ […]

ಉಡುಪಿ: ಗುತ್ತಿಗೆ ಆಧಾರದಲ್ಲಿ ಆರೋಗ್ಯ ಮಿತ್ರರ ನೇಮಕ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಚಿಕಿತ್ಸೆ ನೀಡುತ್ತಿರುವ ಸರಕಾರಿ ಹಾಗೂ ಖಾಸಗಿ ನೋಂದಾಯಿತ ಆಸ್ಪತ್ರೆಗಳಿಗೆ ಆರೋಗ್ಯ ಮಿತ್ರರನ್ನು ತಾತ್ಕಾಲಿಕ ನೆಲೆಯಲ್ಲಿ( ಸುಮಾರು 3 ತಿಂಗಳ ಅವಧಿಗೆ) ಒಟ್ಟು 14 ಹುದ್ದೆಗಳಿಗೆ ( ಉಡುಪಿ-9, ಬ್ರಹ್ಮಾವರ-1, ಕುಂದಾಪುರ-3, ಕಾರ್ಕಳ-1) ನೇಮಕಾತಿಗೊಳಿಸುವ ಬಗ್ಗೆ ಸ್ಥಳೀಯ ಅರ್ಹ ಅಭ್ಯರ್ಥಿಗಳಿಗೆ ದಿನಾಂಕ ಮೇ 29 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ, ರಜತಾದ್ರಿ ಮಣಿಪಾಲ ಉಡುಪಿ ಇಲ್ಲಿ ಅಭ್ಯರ್ಥಿಗಳ ನೇರ ಸಂದರ್ಶನ ನಡೆಸಲಾಗುವುದು. ಅಂಗೀಕೃತ ವಿಶ್ವ ವಿದ್ಯಾನಿಲಯದಿಂದ ಯಾವುದೇ ಪದವಿ, ಕಂಪ್ಯೂಟರ್ ನಲ್ಲಿ […]

ಉಡುಪಿ: ಸಾಲ ಮರುಪಾವತಿಗೆ ಒತ್ತಡ ಹೇರುವಂತಿಲ್ಲ; ಜಿಲ್ಲಾಧಿಕಾರಿ ಜಿ. ಜಗದೀಶ್

ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ತಡೆಗಟ್ಟಲು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದನ್ನು ತಡೆಯುವುದು ಅವಶ್ಯವಕವಾಗಿದ್ದು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ ಅವಶ್ಯಕ ಚಟುವಟಿಕೆಗಳನ್ನು ಹೊರತುಪಡಿಸಿ, ಇತರೆ ಉದ್ದೇಶಗಳಿಗೆ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ. ಈ ಸಂದರ್ಭದಲ್ಲಿ ಯಾವುದೇ ಮೈಕ್ರೋಫೈನಾನ್ಸ್ಗಳು/ಸಹಕಾರಿ ಸಂಘಗಳು/ ಇತರೆ ಹಣಕಾಸು ಸಂಸ್ಥೆಗಳ ಸಾಲ ವಸೂಲಾತಿದಾರರು, ಮನೆ ಮನೆಗೆ ಭೇಟಿ ನೀಡುವುದನ್ನು ಜೂನ್ 6 ರವರೆಗೆ ನಿರ್ಬಂಧಿಸಲಾಗಿದೆ. ಯಾವುದೇ ಮೈಕ್ರೋಫೈನಾನ್ಸ್ಗಳು/ ಸಹಕಾರಿ ಸಂಘಗಳು/ ಇತರೆ ಹಣಕಾಸು ಸಂಸ್ಥೆಗಳು ಸಾಲಗಾರರಿಗೆ ಸಾಲ ಮರು ಪಾವತಿ ಮಾಡಲು ಒತ್ತಡ […]