ಐಪಿಎಲ್ ಉಳಿದ ಪಂದ್ಯಗಳನ್ನು ಮುಂದುವರಿಸುವ ಬಗ್ಗೆ ನಾಳೆ ನಿರ್ಧಾರ ಸಾಧ್ಯತೆ

ನವದೆಹಲಿ: ದೇಶದಲ್ಲಿ ಕೊವೀಡ್ ನಿಂದ ಮುಂದೂಡಿರುವ ಐಪಿಎಲ್‌ ಕ್ರಿಕೆಟ್ ಟೂರ್ನಿಯನ್ನು ಯುಎಇಯಲ್ಲಿ ಮುಂದುವರಿಸುವ ಬಗ್ಗೆ ಮೇ 29ರಂದು ನಿರ್ಧಾರವಾಗಲಿದ್ದು, ಬಿಸಿಸಿಐ ಈ ಕುರಿತು ವಿಶೇಷ ಚರ್ಚೆ ನಡೆಯಲಿದೆ. ಬಿಸಿಸಿಐಯು ಅಂತರರಾಷ್ಟ್ರೀಯ ಟೂರ್ನಿಗಳ ನಡುವೆ ಸೆ.15ರಿಂದ ಅ.15ರ ಅವಧಿಯ ನಡುವೆ ಸಿಗುವ ಸಮಯಾವಕಾಶದಲ್ಲಿ ಉಳಿದಿರುವ ಪಂದ್ಯಗಳನ್ನು ಆಯೋಜಿಸಲು ಚಿಂತನೆ ನಡೆಸಿವೆ. ನಾಳೆ ನಡೆಯಲಿರುವ ಸಭೆಯಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಮತ್ತು ಕೋವಿಡ್ ನ ಸ್ಥಿತಿಯನ್ನು ಪರಿಶೀಲಿಸಿ ಅಂತಿಮ ನಿರ್ಧಾರ […]

ಉಡುಪಿ: ಕಟ್ಟಡ ಕಾರ್ಮಿಕರಿಗೆ ಕೋವಿಡ್ ಲಸಿಕೆ

ಉಡುಪಿ: ಸರ್ಕಾರವು ಕಟ್ಟಡಕಾರ್ಮಿರನ್ನು ಸಹ ಆಧ್ಯತಾ ವರ್ಗವೆಂದು ಸರ್ಕಾರ ಪರಿಗಣಿಸಿ 1 ನೇ ಡೋಸ್ ಲಸಿಕೆಯನ್ನು ನೀಡಲಿದೆ. ಆದ್ದರಿಂದ ಉಡುಪಿ ಜಿಲ್ಲೆಯಎಲ್ಲಕಟ್ಟಡ ನಿರ್ಮಾಣ ಸಂಸ್ಥೆಯ ಮಾಲೀಕರು/ಗುತ್ತಿಗೆದಾರರು/ಕ್ರೇಡಾಯ್ ಸದಸ್ಯರುತಮ್ಮತಮ್ಮಕಟ್ಟಡಕಾರ್ಮಿಕರ ವಿವರವನ್ನುಜಿಲ್ಲೆಯ ತಾಲೂಕುಗಳಲ್ಲಿರುವ ಕಾರ್ಮಿಕ ನಿರೀಕ್ಷಕರ ಕಛೇರಿಗೆ ಸಲ್ಲಿಸಿ , 18 ರಿಂದ 44 ವರ್ಷದೊಳಗಿನ ಎಲ್ಲಾ ಕಟ್ಟಡಕಾರ್ಮಿಕರಿಗೆ ಲಸಿಕೆಯನ್ನು ಹಾಕಿಸುವಂತೆ ಮತ್ತು 45 ವರ್ಷ ಮೇಲ್ಪಟ್ಟ 1 ನೇ ಡೋಸ್ ಲಸಿಕೆ ಪಡೆಯದ ಕಾರ್ಮಿಕರ ಮಾಹಿತಿಯನ್ನು ಕಾರ್ಮಿಕ ಇಲಾಖೆಗೆ ನೀಡುವಂತೆ ಕೋರಿದೆ. ನೋಂದಾಯಿತ ಕಟ್ಟಡ ಕಾರ್ಮಿಕರು ತಮ್ಮ ಹತ್ತಿರದ […]

ಮಂಗಳೂರು: ಸಾಲದ ಕಂತು ಮರುಪಾವತಿಗೆ ಒತ್ತಡ ಹೇರಿದರೆ ಕ್ರಮ; ಜಿಲ್ಲಾಧಿಕಾರಿ ಡಾ. ರಾಜೇಂದ್ರ

ಮಂಗಳೂರು: ಕೊರೊನಾ ಲಾಕ್ ಡೌನ್ ನಿಂದ ಜನಸಾಮಾನ್ಯರಿಗೆ ಸರಿಯಾಗಿ ಕೆಲಸವಿಲ್ಲ. ಸಾಲದ ಕಂತು ಮರು ಪಾವತಿಸಲು ಕಷ್ಟ ಸಾಧ್ಯವಾಗಿದೆ. ಹೀಗಾಗಿ ಸಾಲ ನೀಡಿರುವ ಹಣಕಾಸು ಸಂಸ್ಥೆಗಳು, ಫೈನಾನ್ಸ್ ಗಳು, ಮೈಕ್ರೋ ಫೈನಾನ್ಸ್ ಗಳು ಸಾಲದ ಕಂತು ಪಾವತಿಸುವಂತೆ ಒತ್ತಡ ಹೇರಬಾರದು ಎಂದು ದ. ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ನೀಡಿದ್ದಾರೆ. ಲಾಕ್ ಡೌನ್ ವೇಳೆಯಲ್ಲಿ ಸಾಲ ನೀಡಿರುವ ಯಾವುದೇ ಸಂಸ್ಥೆಗಳು ಸಾರ್ವಜನಿಕರಿಗೆ ಸಾಲ ಮರುಪಾವತಿಸುವಂತೆ ಒತ್ತಡ ಹೇರಿದ್ದಲ್ಲಿ, ಅಂತಹ ಸಂದರ್ಭದಲ್ಲಿ ಸಂಸ್ಥೆ ವಿರುದ್ಧ ದೂರು […]