HomeTrendingಉಡುಪಿ: ಆಶ್ರಯದಾತ ಆಟೋ ಯೂನಿಯನ್ ವತಿಯಿಂದ ಕಿಟ್ ವಿತರಣೆ

ಉಡುಪಿ: ಆಶ್ರಯದಾತ ಆಟೋ ಯೂನಿಯನ್ ವತಿಯಿಂದ ಕಿಟ್ ವಿತರಣೆ

ಉಡುಪಿ: ಆಶ್ರಯದಾತ ಆಟೋ ಯೂನಿಯನ್ ಉಡುಪಿ ಜಿಲ್ಲೆ ಹಾಗೂ ದಾನಿಗಳ ಸಹಕಾರದೊಂದಿಗೆ ಬ್ರಹ್ಮಾವರ ತಾಲೂಕಿನ ಬೈಕಾಡಿ ಗ್ರಾಮದ 5 ಕೊವಿಡ್ ಸಂತ್ರಸ್ತ ಕುಟುಂಬಕ್ಕೆ ಹಾಗೂ ಉಡುಪಿ ಅಂಬಾಗಿಲಿನ 5 ಕುಟುಂಬಗಳಿಗೆ ಇಂದು ಆಹಾರ ಕಿಟ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷರಾದ ಯುವರಾಜ್ ಪುತ್ತೂರು, ಚೇತನ್ ಹನುಮಂತನಗರ, ಆಶ್ರಯದಾತ ಆಟೋ ಯೂನಿಯನ್ ಉಡುಪಿ ತಾಲೂಕು ಅಧ್ಯಕ್ಷರಾದ ಸಾಧಿಕ್ ಮಿಷನ್ ಕಂಪೌಂಡ್, ಗೌರವಾಧ್ಯಕ್ಷರಾದ ಶೇಖರ್ ಜತ್ತನ್ ಹೇರೂರ್, ಸದಸ್ಯರಾದ ಉಮೇಶ್ ಶೆಟ್ಟಿ ಅಂಬಾಗಿಲು.

ಕಚೇರಿ ಮೇಲ್ವಿಚಾರಕರಾದ ಸುಮಾ ಕಿಶೋರ್ ಕೋಟ್ಯಾನ್ ಕೋಡಿಬೆಂಗ್ರೆ , ಬ್ರಹ್ಮಾವರ ತಾಲೂಕು ಅಧ್ಯಕ್ಷರಾದ ರವೀಂದ್ರ ಕೆ ಬೈಕಾಡಿ ,ಬೈಕಾಡಿ ಆಟೋ ನಿಲ್ದಾಣದ ಅಧ್ಯಕ್ಷರಾದ ಸದಾನಂದ ಅಮೀನ್, ಭಾಸ್ಕರ್ ಕಾಂಚನ್, ಸದಾಶಿವ ಪೂಜಾರಿ, ಸುರೇಶ್ ಕುಂದರ್, ರೋನಿ ಲೋಬೊ ಹಾಗೂ ಆಶ್ರಯದಾತ ಆಟೋ ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡಬೆಟ್ಟು ಉಪಸ್ಥಿತರಿದ್ದರು.

error: Content is protected !!