ಉಡುಪಿ ಜಿಲ್ಲೆ:ಎಲ್ಲೆಲ್ಲಿ ಲಭ್ಯವಿರಲಿದೆ ಗರೀಬ್ ಕಲ್ಯಾಣ ಅನ್ನ ಯೋಜನೆಯ ಆಹಾರಧಾನ್ಯ?

ಉಡುಪಿ : ಜಿಲ್ಲೆಯಲ್ಲಿ ಕೋವಿಡ್ -19 ಹರಡುತ್ತಿರುವ ಹಿನ್ನೆಲೆಯಲ್ಲಿ ಎನ್.ಎಫ್.ಎಸ್.ಎ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಬಿಡುಗಡೆಯಾದ ಆಹಾರಧಾನ್ಯವನ್ನು ಪ್ರಸಕ್ತ ಸಾಲಿನ ಮೇ ಮತ್ತು ಜೂನ್ ತಿಂಗಳಲ್ಲಿ ಫಲಾನುಭವಿಗಳಿಗೆ ಸಾರ್ವಜನಿಕ ವಿತರಣಾ ಪದ್ಧತಿಯಡಿ ಪಡಿತರ ವಿತರಿಸುವ ಪ್ರಮಾಣದ ವಿವರ ಹೀಗಿದೆ. ಜಿಲ್ಲೆಯಲ್ಲಿರುವ ಅಂತ್ಯೋದಯ (ಎ.ಎ.ವೈ) ಯೋಜನೆಯ 28,422 ಪಡಿತರ ಚೀಟಿದಾರರಿಗೆ ಉಚಿತವಾಗಿ ಪ್ರತಿ ಪಡಿತರ ಚೀಟಿಗೆ 35 ಕೆ.ಜಿ ಅಕ್ಕಿಯ ಜೊತೆಗೆ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿಯನ್ನು ಪ್ರತಿ ಸದಸ್ಯರಿಗೆ ವಿತರಿಸಲಾಗುತ್ತದೆ. ಆದ್ಯತಾ (ಬಿ.ಪಿ.ಎಲ್) […]

ಉಡುಪಿ ಜಿಲ್ಲೆ:ನಾಳೆಯಿಂದ ಕೋವ್ಯಾಕ್ಸಿನ್ 2 ನೇ ಡೋಸ್ ಲಸಿಕೆ ಲಭ್ಯ

ಉಡುಪಿ : ಜಿಲ್ಲೆಯಲ್ಲಿ ಮೇ 19 ರಂದು ಯಾವುದೇ ಕೋವಿಡ್ ಲಸಿಕೆ ಪ್ರಥಮ ಡೋಸ್ ನೀಡಲಾಗುವುದಿಲ್ಲ. ಉಡುಪಿ ನಗರ ಪ್ರದೇಶದಲ್ಲಿ ಮಾರ್ಚ್ 25 ಅಥವಾ ಅದಕ್ಕಿಂತ ಮೊದಲು 1 ನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡು 2 ನೇ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರಿಗೆ ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 30 ಡೋಸ್, ಮಣಿಪಾಲ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 40 ಡೋಸ್ ಲಭ್ಯವಿದ್ದು, ಅದನ್ನು ಮೇ 19 ರಂದು ನೀಡಲಾಗುವುದು. ಮಾರ್ಚ್ 25 […]

ರೈತರ ಮೊಗದಲ್ಲಿ ಹರ್ಷ ತರಲಿದೆ ಈ ಸಲದ ಮುಂಗಾರು:ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ಒಂದೆಡೆ ಕೊರೊನಾ ಮತ್ತೊಂದೆಡೆ  ಚಂಡಮಾರುತದ ಹಾನಿಯ ನಡುವೆಯೂ ರಾಜ್ಯದ ರೈತರ ಮೊಗದಲ್ಲಿ ಹರ್ಷ ತರುವ ಸುದ್ದಿಯೊಂದು ಬಂದಿದೆ. ಮುಂಗಾರು ಮಳೆ ಬರಲು ಕೇವಲ ಎರಡು ವಾರಗಳು ಬಾಕಿ ಇರುವಾಗ, ಕರ್ನಾಟಕ ಹವಾಮಾನ ಇಲಾಖೆಯ ಪ್ರಕಾರ, ರಾಜ್ಯದ ಕೆಲ ಭಾಗಗಳಲ್ಲಿ ಸಾಮಾನ್ಯ ಮತ್ತು ಇನ್ನುಳಿದ ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದ್ದು ಈ ಸಲದ ರೈತರಿಗೆ ಮಳೆ ಮೋಸ ಮಾಡದು ಎಂದಿದೆ. ನೈರುತ್ಯ ಮಾನ್ಸೂನ್ ಜೂನ್ 1 ರೊಳಗೆ ಕೇರಳಕ್ಕೆ ಅಪ್ಪಳಿಸಲಿದೆ ಮತ್ತು […]

ಏಳು ತಿಂಗಳ ಗರ್ಭಿಣಿಯಾಗಿದ್ದ ಪ್ರೊಬೆಷನರಿ ಪಿಎಸ್ ಐ ಕೋವಿಡ್ ಗೆ ಬಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಪಿ ಕಚೇರಿಯಲ್ಲಿ ಪ್ರೊಬೆಷನರಿ ಪಿಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವತಿ ಶಾಮಿಲಿ (24) ಕೋವಿಡ್ ಗೆ ಬಲಿಯಾಗಿದ್ದಾರೆ. ಈ ಬಗ್ಗೆ ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. 24 ವರ್ಷದ ಪ್ರೊಬೆಷನರಿ ಪಿಎಸ್ ಐ ಶಾಮಿಲಿ ಮೂಲತಃ ಕೋಲಾರದವರು. ಜನವರಿ 11 ರಂದು ಮಂಗಳೂರು ಎಸ್ ಪಿ ಕಚೇರಿಯಲ್ಲಿ ಸೇವೆ ಆರಂಭಿಸಿದ್ದರು. 7 ತಿಂಗಳ ಗರ್ಭಿಣಿಯಾಗಿದ್ದ ಅವರು, ರಜೆ ತೆಗೆದುಕೊಂಡು ತಮ್ಮ […]

ಕಾರ್ಕಳ ರಾಜಾಪುರ ಸೊಸೈಟಿಯಿಂದ ಕೋವಿಡ್ ನಿರ್ವಹಣೆಗೆ ರೂ.7 ಲಕ್ಷ ಕೊಡುಗೆ

ಕಾರ್ಕಳ: ಕಾರ್ಕಳ ಶಾಸಕರ ಮುತುವರ್ಜಿಯಲ್ಲಿ ಕಾರ್ಕಳ ಮತ್ತು ಹೆಬ್ರಿ ಸರ್ಕಾರಿ ಆಸ್ಪತ್ರೆಯಲ್ಲಿ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಿರ್ಮಾಣವಾಗಲಿರುವ ಆಕ್ಸಿಜನ್ ಉತ್ಪಾದನಾ ಘಟಕ ಮತ್ತು ಇತರ ಸೌಲಭ್ಯದ ಬಗ್ಗೆ ಕಾರ್ಕಳ ರಾಜಾಪುರ ಸಾರಸ್ವತ ಸೊಸೈಟಿಯು ಕೊಡುಗೆಯಾಗಿ ರೂ. 7,00,000 ಚೆಕ್ ಅನ್ನು ಶಾಸಕ ವಿ. ಸುನೀಲ್ ಕುಮಾರ್ ಹಾಗೂ ತಹಶೀಲ್ದಾರ್  ಪುರಂದರ ಹೆಗ್ಡೆ ಅವರ ಉಪಸ್ಥಿತಿಯಲ್ಲಿ ತಾಲೂಕು ವೈದ್ಯಾಧಿಕಾರಿ ಕೃಷ್ಣಾನಂದ ಶೆಟ್ಟಿ ಅವರಿಗೆ ಸೊಸೈಟಿಯ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ಅವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪ್ರಧಾನ ವ್ಯವಸ್ಥಾಪಕ  […]