ಕಾರ್ಕಳ ರಾಜಾಪುರ ಸೊಸೈಟಿಯಿಂದ ಕೋವಿಡ್ ನಿರ್ವಹಣೆಗೆ ರೂ.7 ಲಕ್ಷ ಕೊಡುಗೆ

ಕಾರ್ಕಳ: ಕಾರ್ಕಳ ಶಾಸಕರ ಮುತುವರ್ಜಿಯಲ್ಲಿ ಕಾರ್ಕಳ ಮತ್ತು ಹೆಬ್ರಿ ಸರ್ಕಾರಿ ಆಸ್ಪತ್ರೆಯಲ್ಲಿ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಿರ್ಮಾಣವಾಗಲಿರುವ ಆಕ್ಸಿಜನ್ ಉತ್ಪಾದನಾ ಘಟಕ ಮತ್ತು ಇತರ ಸೌಲಭ್ಯದ ಬಗ್ಗೆ ಕಾರ್ಕಳ ರಾಜಾಪುರ ಸಾರಸ್ವತ ಸೊಸೈಟಿಯು ಕೊಡುಗೆಯಾಗಿ ರೂ. 7,00,000 ಚೆಕ್ ಅನ್ನು ಶಾಸಕ ವಿ. ಸುನೀಲ್ ಕುಮಾರ್ ಹಾಗೂ ತಹಶೀಲ್ದಾರ್  ಪುರಂದರ ಹೆಗ್ಡೆ ಅವರ ಉಪಸ್ಥಿತಿಯಲ್ಲಿ ತಾಲೂಕು ವೈದ್ಯಾಧಿಕಾರಿ ಕೃಷ್ಣಾನಂದ ಶೆಟ್ಟಿ ಅವರಿಗೆ ಸೊಸೈಟಿಯ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ಅವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ವ್ಯವಸ್ಥಾಪಕ  ಸುರೇಂದ್ರ ನಾಯಕ್ ಹಾಗೂ ನಿರ್ದೇಶಕ ಹರೀಶ್ ನಾಯಕ್ ಅಜೆಕಾರು, ಹರೀಶ್ಚoದ್ರ ತೆಂಡುಲ್ಕರ್ ಮಾಳ, ಸಚ್ಚಿದಾನಂದ ಪ್ರಭು ಕಣಂಜಾರು, ಮಂಜುನಾಥ್ ಪ್ರಭು ಹೆಬ್ರಿ ಉಪಸ್ಥಿತರಿದ್ದರು.