ಉಡುಪಿ: ಸೆಲೂನ್ ಮಾಲೀಕ ಕೋವಿಡ್ ಸೋಂಕಿನಿಂದ ನಿಧನ
ಉಡುಪಿ: ಇಲ್ಲಿನ ಚಿತ್ತರಂಜನ್ ಸರ್ಕಲ್ ನಲ್ಲಿರುವ ನೂತನ ಹೇರ್ ಡ್ರೆಸ್ಸೆಸ್ ನ ಮಾಲೀಕ ಬನ್ನಂಜೆ ನಿವಾಸಿ ಅಶೋಕ್ ಭಂಡಾರಿ ಅವರು ಸೋಮವಾರ ಕೋವಿಡ್ ಸೋಂಕಿನಿಂದ ನಿಧನ ಹೊಂದಿದರು. ಇವರು ಗೆಳೆಯರ ಬಳಗ ಮಾರುತಿ ವೀಥೀಕಾ ಟೀಮ್ ನ ಸದಸ್ಯರಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಲಾಕ್ ಡೌನ್ ಮುಂದುವರಿಕೆ ಅನಿವಾರ್ಯವಾಗಲಿದೆ:ಮುರುಗೇಶ್ ನಿರಾಣಿ
ಕಲಬುರಗಿ:ಲಾಕ್ ಡೌನ್ ಮುಂದುವರಿಕೆ ಅನಿವಾರ್ಯವಾಗಲಿದೆ ಎಂದು ಸಚಿವ ಮುರುಗೇಶ್ ನಿರಾಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಕೊರೋನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಈಗಾಗಲೇ ಮೇ 24ರವರೆಗೆ ಲಾಕ್ ಡೌನ್ ಜಾರಿಯಲ್ಲಿದ್ದು ಈ ನಡುವೆ ಕೋವಿಡ್ ತಡೆಗಾಗಿ ಲಾಕ್ ಡೌನ್ ವಿಸ್ತರಣೆ ಮಾಡಿದರೇ ಒಳ್ಳೆಯದು ಎಂದವರು ಹೇಳಿದ್ದಾರೆ. ಕಲ್ಬುರ್ಗಿಯಲ್ಲಿ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ, ಕೊರೋನಾ ತಡೆಗೆ 10 ದಿನಗಳ ಕಾಲ ಲಾಕ್ ಡೌನ್ ಮಾಡಿದರೇ ಉತ್ತಮ. ಈ ಬಗ್ಗೆ ಸಿಎಂಗೆ ತಿಳಿಸಿದ್ದೇವೆ. ಆದರೆ ಸರ್ಕಾರ ಕೈಗೊಳ್ಳುವ ನಿರ್ಧಾರ […]
ಆಧಾರ್ ಕಾರ್ಡ್ ಇಲ್ಲದ ಹಿರಿಯ ನಾಗರಿಕರಿಗೂ ಸಿಗಲಿದೆ ಕೊರೋನಾ ಲಸಿಕೆ
ಬೆಂಗಳೂರು: ಆಧಾರ್ ಕಾರ್ಡ್ ಇಲ್ಲದೆ ಇರುವ ಹಿರಿಯ ನಾಗರಿಕರಿಗೆ ಆದ್ಯತೆಯ ಮೇರೆಗೆ ಕೋವಿಡ್ ಲಸಿಕೆಯನ್ನು ನೀಡಲು ಆರೋಗ್ಯ ಸಚಿವರಿಗೆ ಮನವಿ ಮಾಡಲಾಗಿದ್ದು ಶ್ರೀಘ್ರವೇ ಲಸಿಕೆ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಅವರು ಆರೋಗ್ಯ ಸಚಿವ ಡಾ. ಸುಧಾಕರ್ ಅವರನ್ನು ಭೇಟಿ ಮಾಡಿದ ಶಶಿಕಲಾ ಜೊಲ್ಲೆ, ಸಮಗ್ರ ಮಕ್ಕಳ ರಕ್ಷಣಾ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರನ್ನು ಕೊರೋನಾ ಸೇನಾನಿಗಳೆಂದು ಭಾವಿಸಿ ಅವರಿಗೂ ಲಸಿಕೆ ನೀಡಬೇಕು. ಹೈಕೋರ್ಟ್ ಆದೇಶದಂತೆ ಹಿರಿಯ ನಾಗರಿಕರಿಗೆ ಹಾಗೂ ವಿಕಲ […]
ಸಣ್ಣ ಉದ್ದಿಮೆದಾರರಿಗೆ ಮಹಾಲಕ್ಷ್ಮೀ ಸ್ವಾವಲಂಬನಾ ಶಕ್ತಿ ಕೋವಿಡ್ ಸಾಲ ಯೋಜನೆ: ಯಶ್ಪಾಲ್ ಸುವರ್ಣ
ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಕೊರೊನಾ ಹಿನ್ನೆಲೆಯಲ್ಲಿ ವ್ಯವಹಾರಿಕವಾಗಿ ಆರ್ಥಿಕ ಸಂಕಷ್ಟಕ್ಕೀಡಾಗಿರುವ ಸಣ್ಣ ಉದ್ದಿಮೆದಾರರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಹಾಲಕ್ಷ್ಮೀ ಸ್ವಾವಲಂಬನಾ ಶಕ್ತಿ ಕೋವಿಡ್ ಸಾಲ ಯೋಜನೆಯನ್ನು ಆರಂಭಿಸಿರುವುದಾಗಿ ಬ್ಯಾಂಕಿನ ಅಧ್ಯಕ್ಷ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ. ಸಣ್ಣ ಉದ್ದಿಮದಾರರು, ಸ್ವ ಉದ್ಯೋಗಿಗಳು, ಮೀನುಗಾರರು, ಕೃಷಿಕರು, ಕ್ಷೌರಿಕರು, ಬೀದಿ ಬದಿ ವ್ಯಾಪಾರಸ್ಥರು, ಗೂಡಾಂಗಡಿ, ಹೊಟೇಲ್ ಉದ್ಯಮಿಗಳು ರಿಕ್ಷಾ ಹಾಗೂ ವಾಹನ ಚಾಲಕರಿಗಾಗಿ ಮಹಾಲಕ್ಷ್ಮೀ ಸ್ವಾವಲಂಬನಾ ಶಕ್ತಿ ಕೋವಿಡ್ ಸಾಲ ಯೋಜನೆಯನ್ನು ರೂಪಿಸಿದ್ದು, ಗರಿಷ್ಠ ₹2 ಲಕ್ಷ ಸಾಲವನ್ನು […]
ರುಚಿ ರುಚಿ ಕರ್ನಾಟಕ ಸ್ಟೈಲ್ ಬಿರಿಯಾನಿ ಮಾಡೋದು ಹೀಗೆ
ರುಚಿಕರ ಬಿರಿಯಾನಿ.ಪಕ್ಕಾ ಕರ್ನಾಟಕ ಶೈಲಿಯಲ್ಲಿ ಮಾಡೋದು ಹೇಗೆ ಅಂತ ನೋಡೋಣ ಬನ್ನಿ. ಬೇಕಾಗುವ ಪದಾರ್ಥಗಳು ಎಣ್ಣೆ- 1 ಬಟ್ಟಲು ಕೋಳಿ ಮಾಂಸ- ಅರ್ಧ ಕೆಜಿ ಹಸಿಮೆಣಸಿನ ಕಾಯಿ- 5 ಈರುಳ್ಳಿ- ಉದ್ದಕ್ಕೆ ಹೆಚ್ಚಿದ್ದು ಸ್ವಲ್ಪ ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ ಟೊಮ್ಯಾಟೋ- ಸಣ್ಣಗೆ ಕತ್ತರಿಸಿದ್ದು 2 ಅಚ್ಚ ಖಾರದ ಪುಡಿ- 1 ಚಮಚ ಗರಂ ಮಸಾಲೆ ಪುಡಿ – ಅರ್ಧ ಚಮಚ ಅಕ್ಕಿ- 1 ಬಟ್ಟಲು (ನೆನೆಸಿದ್ದು) ನಿಂಬೆಹಣ್ಣು- […]