ಅಮೇರಿಕಾ ಅಧ್ಯಕ್ಷ ಜೋ ಬೈಡನ್‌ ಹಿರಿಯ ಸಲಹೆಗಾರರಾಗಿ ಭಾರತೀಯ ಮೂಲದ ನೀರಾ ತಂಡನ್‌

ವಾಷಿಂಗ್ಟನ್:  ಭಾರತ ಮೂಲದ ಸಂಜಾತೆ ನೀರಾ ತಂಡನ್‌ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ಹಿರಿಯ ಸಲಹೆಗಾರರಾಗಿ ನೇಮಕವಾಗಿದ್ದಾರೆ. ರಿಪಬ್ಲಿಕನ್‌ ಸೆನೆಟರ್‌ಗಳ ತೀವ್ರ ವಿರೋಧದಿಂದಾಗಿ ಎರಡು ತಿಂಗಳ ಹಿಂದೆಯಷ್ಟೇ ಶ್ವೇತ ಭವನದ ಬಜೆಟ್‌ ನಿರ್ವಹಣಾ ಕಚೇರಿಯ ನಿರ್ದೇಶಕಿ ಸ್ಥಾನದ ನಾಮ ನಿರ್ದೇಶವನ್ನು ನೀರಾ ತಂಡನ್‌  ಹಿಂಪಡೆದಿದ್ದರು. ತಂಡನ್‌ ಅವರಿಗೆ ಎರಡು ಹೊಣೆಗಾರಿಕೆ ನೀಡಲಾಗಿದೆ. ಮೊದಲನೆಯದು ಅಮೆರಿಕದ ಡಿಜಿಟಲ್ ಸೇವೆಯ ಪರಿಶೀಲನೆ ನಡೆಸುವುದು. ಎರಡನೆಯದು ‘ಅಫೋರ್ಡಬಲ್ ಕೇರ್‌ ಆ್ಯಕ್ಟ್’ ಅನ್ನು ರದ್ದುಪಡಿಸಬೇಕೆಂದು ಕೋರಿ ರಿಪಬ್ಲಿಕನ್ ಪಕ್ಷದವರಿಂದ ಸಲ್ಲಿಕೆಯಾಗುವ […]

ಕಾರ್ಕಳ ತಾಲೂಕಿನ ಆರ್. ಎಸ್.ಬಿ ಸಮಾಜ ಬಾಂಧವರಿಗೆ ನೆರವು ನೀಡಲು ಮನವಿ

ಕಾರ್ಕಳ: ತಾಲೂಕಿನ  ರಾಜಪುರ ಸಾರಸ್ವತ ಬ್ರಾಹ್ಮಣ ಸಮಾಜದ ತೀರಾ ಬಡ ಕುಟುಂಬದವರು, ದಿನಗೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದು, ಇದೀಗ ಕರೋನ ಸಂಕಷ್ಟ ಕಾಲದಲ್ಲಿ ಕೆಲಸಕ್ಕೆ ಹೋಗಲು ಆಗದೆ ಜೀವನ ನಿರ್ವಹಣೆ ಸಾಧ್ಯವಾಗದೆ ತೀರಾ ಕಷ್ಟದಲ್ಲಿ ಇದ್ದವರಿಗೆ, ಹಾಗೂ ತೀರಾ ಅವಶ್ಯಕವಾದ ಔಷಧಗಳ ಅವಶ್ಯಕತೆ ಇದ್ದವರಿಗೆ ಸಹಾಯ ಮಾಡಬೇಕೆಂದು ತೀರ್ಮಾನಿಸಿದ್ದು ಈ ಬಗ್ಗೆ ಧನ ಸಹಾಯ ಮಾಡಲಿಚ್ಚಿಸುವವರು ಕೆಳಗೆ ನಮೂದಿಸಿರುವ ಖಾತೆಗೆ ಜಮಾ ಮಾಡಿ ತಿಳಿಸುವಂತೆ ಶ್ರೀ ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನ ಲಕ್ಷ್ಮೀಪುರ ಆಡಳಿತ ಮೊಕ್ತೇಸರರಾದ ಅಶೋಕ್ […]