ನೀವು ಆನ್ ಲೈನ್ ನಲ್ಲಿ ಇಲ್ಲದಿದ್ದರೂ ಈ ಟ್ರಿಕ್ ಬಳಸಿ ಯಾರ್ಯಾರು ಆನ್ ಲೈನ್ ನಲ್ಲಿದ್ದಾರೆ ಎನ್ನುವುದನ್ನು ತಿಳೀರಿ

ಕೆಲವರು ಬ್ಯುಸಿ ಇದ್ದ ಸಂದರ್ಭದಲ್ಲಿ ಆನ್ ಲೈನ್ ನಲ್ಲಿ ಇರಲು ಬಯಸುವುದಿಲ್ಲ. ಆದರೆ, ಈ ವೇಳೆ ಬೇರೆ ಯಾರು ಯಾರು ಆನ್ಲೈನ್ ಇದ್ದಾರೆ ಎಂಬ ಕುತೂಹಲ ಮೂಡುವುದು ಸಹಜ. ಅದನ್ನು ನೋಡಲು ಈ ಟ್ರಿಕ್ ವೊಂದನ್ನು ಬಳಸಿ, ನಿಮ್ಮ ವಾಟ್ಸ್ಆ್ಯಪ್ ಖಾತೆಯಲ್ಲಿ ಯಾರ್ಯಾರು ಆಕ್ಟಿವ್ ಆಗಿದ್ದಾರೆ ಎಂದು ತಿಳಿಯಬಹುದಾಗಿದೆ.  ಈ ಸೌಲಭ್ಯ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ನೀಡಲ್ಲ. ಹಾಗಾಗಿ ನೀವು ಥರ್ಡ್ ಪಾರ್ಟಿ ಆ್ಯಪ್ ಮೊರೆಹೋಗಬೇಕು. ಇದರ ಸಹಾಯದಿಂದ ನೀವು ನಿಮ್ಮ ವಾಟ್ಸ್ಆ್ಯಪ್ ಖಾತೆಯನ್ನು ತೆರೆಯದೆಯೇ ಯಾರ್ಯಾರು […]

ಶಿರ್ವ ಸಂತ ಮೇರಿ ಕಾಲೇಜಿನ ವಿದ್ಯಾರ್ಥಿ ಸತ್ಯಸುಬ್ರಹ್ಮಣ್ಯ ವಿ.ಎಸ್. ಗೆ ನಾಲ್ಕನೇ ರ‍್ಯಾಂಕ್

ಶಿರ್ವ: ಮಂಗಳೂರು ವಿಶ್ವವಿದ್ಯಾನಿಲಯ 2020ರ ಸಪ್ಟೆಂಬರ್ ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಶಿರ್ವ ಸಂತ ಮೇರಿ ಕಾಲೇಜಿನ ಬಿಸಿಎ (ಗಣಕ ವಿಜ್ಞಾನ ವಿಭಾಗ) ವಿದ್ಯಾರ್ಥಿ ಸತ್ಯಸುಬ್ರಹ್ಮಣ್ಯ ವಿ.ಎಸ್. ಅವರು ಶೇ. 95.72 ಅಂಕಗಳೊಂದಿಗೆ ನಾಲ್ಕನೇ ರ‍್ಯಾಂಕ್ ಪಡೆದಿದ್ದಾರೆ. ಇವರು ಕಾಸರಗೋಡಿನ ವೆಂಕಟೇಶ್ವರ ಭಟ್ ಮತ್ತು ಶ್ರೀಗೌರಿ ದಂಪತಿಯ ಪುತ್ರ. ಕಾಲೇಜಿನ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಪ್ರಾಚಾರ್ಯರು, ಪ್ರಾಧ್ಯಾಪಕರು ಮತ್ತು ಆಡಳಿತಾತ್ಮಕ ಸಿಬ್ಬಂದಿ, ರಕ್ಷಕ ಶಿಕ್ಷಕ ಸಂಘ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

ಉಡುಪಿಯಲ್ಲಿ ಮತ್ತೆ ಕೊರೊನಾ ಆರ್ಭಟ: ಇಂದು 145 ಮಂದಿಗೆ ಕೊರೊನಾ ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ ಇಂದು ಮತ್ತೆ 145 ಮಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಆ ಪೈಕಿ ಮಣಿಪಾಲದ ಎಂಐಟಿ ಕ್ಯಾಂಪಸ್ ನಲ್ಲಿ 111ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಚೂಡಾ ತಿಳಿಸಿದ್ದಾರೆ. ಮಾರ್ಚ್ 15ರಿಂದ ಈವರೆಗೆ ಎಂಐಟಿ ಕ್ಯಾಂಪಸ್ ನಲ್ಲಿ 586 ಕೊರೊನಾ ಕೇಸ್ ಗಳು ಕಂಡುಬಂದಿದೆ. ತಾಲ್ಲೂಕುವಾರು ಕೊರೊನಾ ಕೇಸ್ ಗಳನ್ನು ಗಮನಿಸಿದರೆ, ಉಡುಪಿ ತಾಲ್ಲೂಕಿನಲ್ಲಿ ಅತೀ ಹೆಚ್ಚು ಶೇ. 50ರಷ್ಟು ಕೊರೊನಾ ಕೇಸ್ ದಾಖಲಾಗಿದ್ದು, ಉಳಿದಂತೆ […]

ರಸ್ತೆ ಬದಿ ತ್ಯಾಜ್ಯ ಎಸೆದ ವ್ಯಕ್ತಿಗೆ ₹5 ಸಾವಿರ ದಂಡ ವಿಧಿಸಿದ ಕಾರ್ಕಳ ಪೊಲೀಸರು; ಸಾರ್ವಜನಿಕರಿಂದ ಪ್ರಶಂಸೆ

ಕಾರ್ಕಳ: ಇಲ್ಲಿನ ಕರಿಯಕಲ್ಲು ಎಂಬಲ್ಲಿ ಆಟೋ ರಿಕ್ಷಾದಲ್ಲಿ ಬಂದು ತ್ಯಾಜ್ಯ ಎಸೆದ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಕಾರ್ಕಳ ನಗರ ಠಾಣೆ ಪೊಲೀಸರು ಐದು ಸಾವಿರ ದಂಡ ವಿಧಿಸಿದ ಘಟನೆ ನಡೆದಿದೆ. ಕರಿಯಕಲ್ಲು ನಿವಾಸಿ ಕಥಲ್‌ ಸಾಹೇಬ್‌ ಎಂಬವರು ಮಾ. 23ರ ಬೆಳಿಗ್ಗೆ ಕಸ ಬಿಸಾಡಿದ್ದರು. ಅದನ್ನು ನೋಡಿದ ಸ್ವಚ್ಛ ಬ್ರಿಗೇಡ್ ಸದಸ್ಯರು ಕಾರ್ಕಳ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಅದರಂತೆ ಇಂದು (ಮಾ. 25) ಕಥಲ್‌ ಅವರನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ ಪೊಲೀಸರು ಆತನಿಂದ […]

ಮಾ. 27ಕ್ಕೆ ಸಿಗ್ನಾ ಪ್ರೋಹೆಲ್ತ್ ಇನ್ಶ್ಯೂರೆನ್ಸ್ ಕಾರ್ಡ್, ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ: ಯಶ್‍ಪಾಲ್ ಸುವರ್ಣ

ಉಡುಪಿ: ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಮಂಗಳೂರು ವತಿಯಿಂದ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಉಡುಪಿ, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಮತ್ತು ಮಣಿಪಾಲ್ ಸಿಗ್ನಾ ಪ್ರೋಹೆಲ್ತ್ ಇನ್ಶ್ಯೂರೆನ್ಸ್ ಪಾಲಿಸಿ ಇವರ ಸಹೋಗದೊಂದಿಗೆ ಸದಸ್ಯರಿಗೆ ಉಚಿತ ಮಣಿಪಾಲ್ ಸಿಗ್ನಾ ಪ್ರೋಹೆಲ್ತ್ ಇನ್ಶ್ಯೂರೆನ್ಸ್ ಕಾರ್ಡ್ ಹಾಗೂ ಫೆಡರೇಷನ್ ವತಿಯಿಂದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಮಾರ್ಚ್ 27ರಂದು ಶನಿವಾರ ಮಧ್ಯಾಹ್ನ 3 ಗಂಟೆಗೆ ಮಂಗಳೂರು ಮುಳಿಹಿತ್ಲುವಿನ ಫೆಡರೇಷನ್ ಪ್ರಧಾನ […]