ನೀವು ಆನ್ ಲೈನ್ ನಲ್ಲಿ ಇಲ್ಲದಿದ್ದರೂ ಈ ಟ್ರಿಕ್ ಬಳಸಿ ಯಾರ್ಯಾರು ಆನ್ ಲೈನ್ ನಲ್ಲಿದ್ದಾರೆ ಎನ್ನುವುದನ್ನು ತಿಳೀರಿ

ಕೆಲವರು ಬ್ಯುಸಿ ಇದ್ದ ಸಂದರ್ಭದಲ್ಲಿ ಆನ್ ಲೈನ್ ನಲ್ಲಿ ಇರಲು ಬಯಸುವುದಿಲ್ಲ. ಆದರೆ, ಈ ವೇಳೆ ಬೇರೆ ಯಾರು ಯಾರು ಆನ್ಲೈನ್ ಇದ್ದಾರೆ ಎಂಬ ಕುತೂಹಲ ಮೂಡುವುದು ಸಹಜ. ಅದನ್ನು ನೋಡಲು ಈ ಟ್ರಿಕ್ ವೊಂದನ್ನು ಬಳಸಿ, ನಿಮ್ಮ ವಾಟ್ಸ್ಆ್ಯಪ್ ಖಾತೆಯಲ್ಲಿ ಯಾರ್ಯಾರು ಆಕ್ಟಿವ್ ಆಗಿದ್ದಾರೆ ಎಂದು ತಿಳಿಯಬಹುದಾಗಿದೆ. 

ಈ ಸೌಲಭ್ಯ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ನೀಡಲ್ಲ. ಹಾಗಾಗಿ ನೀವು ಥರ್ಡ್ ಪಾರ್ಟಿ ಆ್ಯಪ್ ಮೊರೆಹೋಗಬೇಕು. ಇದರ ಸಹಾಯದಿಂದ ನೀವು ನಿಮ್ಮ ವಾಟ್ಸ್ಆ್ಯಪ್ ಖಾತೆಯನ್ನು ತೆರೆಯದೆಯೇ ಯಾರ್ಯಾರು ಆಕ್ಟಿವ್ ಆಗಿದ್ದಾರೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

ಅದಕ್ಕಾಗಿ ನೀವು GBWhatsApp ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಇದಕ್ಕಾಗಿ ನೀವು ಆ್ಯಪ್ ಸ್ಟೋರ್‌ಗೆ ಭೇಟಿ ನೀಡಿ ಮತ್ತು GBWhatsApp ಗಾಗಿ ಹುಡುಕಾಟ ನಡೆಸಿ. ನಂತರ ಅದನ್ನು ಡೌನ್‌ಲೋಡ್ ಮಾಡಿ. ಇದು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿರುವ ಅಪ್ಲಿಕೇಶನ್ ಆಗಿದೆ. ಈ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಿದ ಬಳಿಕ ಮೊದಲು ನೀವು GBWhatsAppನ ಸೆಟ್ಟಿಂಗ್ಸ್ ವಿಭಾಗಕ್ಕೆ ಭೇಟಿ ನೀಡಬೇಕು.

ಇದಾದ ಬಳಿಕ ನೀವು ಚ್ಯಾಟ್ ಸ್ಕ್ರೀನ್ ಆಪ್ಶನ್ ಆಯ್ಕೆಮಾಡಿ. ಈ ಸೆಕ್ಷನ್ ನಲ್ಲಿ ನೀವು Contact Online Toast ಮೇಲೆ ಟ್ಯಾಪ್ ಮಾಡಿ. ಬಳಿಕ Show Contact Online Toast ಅನ್ನು ಆಯ್ಕೆ ಮಾಡಿ, ಯಾವ ವ್ಯಕ್ತಿಯ ಆಕ್ಟಿವ್ ಸ್ಟೇಟಸ್ ನೀವು ನೋಡಲು ಬಯಸುವಿರೋ ಅವರನ್ನು ಆಯ್ಕೆ ಮಾಡಿ.

ಒಮ್ಮೆ ಈ ಎಲ್ಲ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಬಳಿಕ ಆ್ಯಪ್ ಅನ್ನು ಬಂದ್ ಮಾಡಿ. ನೀವು ಆಯ್ಕೆ ಮಾಡಿರುವ ಕಾಂಟಾಕ್ಟ್ ವಾಟ್ಸ್ಆ್ಯಪ್ನಲ್ಲಿ ಸಕ್ರೀಯರಾದ ಪ್ರತಿ ವೇಳೆ ನಿಮಗೆ ಅಲರ್ಟ್ ನೋಟಿಫಿಕೇಶನ್ ಬರುತ್ತದೆ.