ಉಡುಪಿಯಲ್ಲಿ ಮತ್ತೆ ಕೊರೊನಾ ಆರ್ಭಟ: ಇಂದು 145 ಮಂದಿಗೆ ಕೊರೊನಾ ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ ಇಂದು ಮತ್ತೆ 145 ಮಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಆ ಪೈಕಿ ಮಣಿಪಾಲದ ಎಂಐಟಿ ಕ್ಯಾಂಪಸ್ ನಲ್ಲಿ 111ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಚೂಡಾ ತಿಳಿಸಿದ್ದಾರೆ.

ಮಾರ್ಚ್ 15ರಿಂದ ಈವರೆಗೆ ಎಂಐಟಿ ಕ್ಯಾಂಪಸ್ ನಲ್ಲಿ 586 ಕೊರೊನಾ ಕೇಸ್ ಗಳು ಕಂಡುಬಂದಿದೆ. ತಾಲ್ಲೂಕುವಾರು ಕೊರೊನಾ ಕೇಸ್ ಗಳನ್ನು ಗಮನಿಸಿದರೆ, ಉಡುಪಿ ತಾಲ್ಲೂಕಿನಲ್ಲಿ ಅತೀ ಹೆಚ್ಚು ಶೇ. 50ರಷ್ಟು ಕೊರೊನಾ ಕೇಸ್ ದಾಖಲಾಗಿದ್ದು, ಉಳಿದಂತೆ ಕುಂದಾಪುರದಲ್ಲಿ ಶೇ. 30 ಹಾಗೂ ಕಾರ್ಕಳದಲ್ಲಿ ಶೇ. 17ರಷ್ಟು ಕೇಸ್ ಗಳು ಕಾಣಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.