ನೀರಿನ ಅಭಾವ ತಡೆಗೆ ಮಳೆ ನೀರಿನ ಮರುಬಳಕೆ ಅಗತ್ಯ: ರೆಬೆಲ್ಲೊ

ಶಿರ್ವ: ಇಂದು ಎಲ್ಲ ರಾಷ್ಟ್ರವೂ ನೀರಿನ ಅಭಾವವನ್ನು ಅನುಭವಿಸುತ್ತಿದೆ. ನೀರಿನ ಸಮೃದ್ಧಿಯಲ್ಲಿ ಭಾರತವು ವಿಶ್ವದಲ್ಲಿ ಎರಡನೇ ದೇಶವಾಗಿದೆ. ಆದರೆ ಅದರ ಸರಿಯಾದ ಬಳಕೆ ಮತ್ತು ಸಂರಕ್ಷಣೆ ಇಲ್ಲದೆ ನೀರಿನ ಕ್ಷಾಮವನ್ನು ನಾವಿಂದು ಎದುರಿಸಬೇಕಾಗಿದೆ ಎಂದು ಜಲತಜ್ಞೆ ರತ್ನಶ್ರೀ ಜೋಸೆಫ್ ಜಿ. ರೆಬೆಲ್ಲೊ ಹೇಳಿದರು. ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ಇಂದು ಏರ್ಪಡಿಸಿದ ನೀರಿನ ಸಂರಕ್ಷಣೆ ಮತ್ತು ಮರುಪೂರಣದ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಸಮಸ್ಯೆ ನಿವಾರಣೆಯಾಗಬೇಕಾದರೆ ಮಳೆ ನೀರನ್ನು ಸಮರ್ಪಕವಾಗಿ ಸಂರಕ್ಷಿಸಿ ಮರುಬಳಕೆ ಮಾಡಬೇಕು […]

ನಾಪತ್ತೆಯಾಗಿದ್ದ ಯುವತಿ ಕಾಡಿನಲ್ಲಿ ಶವವಾಗಿ ಪತ್ತೆ

ಬೆಳ್ತಂಗಡಿ: ಫೆ. 22ರಿಂದ ಕಾಣೆಯಾಗಿದ್ದ ಬೆಳ್ತಂಗಡಿ ನೆರಿಯ ಗ್ರಾಮ ನಿವಾಸಿ ತೇಜಸ್ವಿನಿ (23) ಎಂಬ ಯುವತಿಯ ಮೃತದೇಹ ಕೋಲೋಡಿ ಕಾಡಿನಲ್ಲಿ ಬುಧವಾರ (ಮಾ.3) ಪತ್ತೆಯಾಗಿದೆ. ಸ್ಥಳೀಯರು ಬಿದಿರು ಕಡಿಯುವ ಉದ್ದೇಶದಿಂದ ಕಾಡಿಗೆ ಹೋದಾಗ ಯುವತಿಯ ಮೃತದೇಹ ಪತ್ತೆಯಾಗಿದೆ. ತೇಜಸ್ವಿನಿ ನೆರಿಯ ಗ್ರಾಮದ ನಿವಾಸಿ ಮಂಜುನಾಥ ಮತ್ತು ಸುಶೀಲಾ ಕೆ ದಂಪತಿಯ ಪುತ್ರಿ. ಈಕೆ ಫೆ.22ರಂದು ಸಂಜೆ ಕಂಪ್ಯೂಟರ್ ಕ್ಲಾಸ್ ಮುಗಿಸಿ ನೆರಿಯದಲ್ಲಿರುವ ತನ್ನ ತಾಯಿ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಕಾಣೆಯಾಗಿದ್ದಳು. ಈಕೆ ಯಾವುದೋ ಕಾರಣಕ್ಕೆ […]

ಕಂಬಳ ಕರೆಗೆ ಇಳಿದಳು ಈ ಮುದ್ದು ಹುಡುಗಿ: ಕಂಬಳ ಪ್ರೇಮಿಗಳಲ್ಲಿ ಬೆರಗು ಮೂಡಿಸಿದ ಈ ಹುಡುಗಿ ಯಾರು?

ಈ ಹುಡುಗಿಯ ಕಥೆ ನಿಜಕ್ಕೂ ಹೆಮ್ಮೆ ತರುತ್ತದೆ. ಈ ಹುಡುಗಿಯ ಸಾಧನೆ ಕೇಳಿದರೆ ಕಂಬಳದ ಅಭಿಮಾನಿಗಳು ನಿಜಕ್ಕೂ ಖುಷಿಪಡುತ್ತಾರೆ. ಹೌದು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಂಬಳ ಅಂದರೆ ಅದೊಂದು ಸಂಸ್ಕೃತಿ, ಅದೊಂದು ತುಳುವರ ಉಸಿರಿದ್ದಂತೆ. ಕಂಬಳ ಪುರುಷ ಪ್ರಧಾನವಾಗಿದ್ದು  ಪುರುಷರೇ ಈ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ಆದರೆ ಇತ್ತೀಚೆಗೆ  ಕಾರ್ಕಳ ಮಿಯ್ಯಾರುವಿನಲ್ಲಿ  ಹುಡುಗಿಯೊಬ್ಬಳು ಕಂಬಳ ಕೋಣದ ಯಜಮಾನಿಕೆಯ ನೇತೃತ್ವ ವಹಿಸಿ ಕಂಬಳ ಕರೆಗೆ ಇಳಿದಿದ್ದಾಳೆ. ಅದಕ್ಕೆ ಸಾಕ್ಷಿಯಾಗಿದೆ ಮೊನ್ನೆಯ ಮಿಯ್ಯಾರು ಕಂಬಳ. ಈ ಮೂಲಕ ಕಂಬಳದ […]

ಕಾರ್ಕಳ: 4 ಪ್ಲೇಟ್ ತಿಂಡಿ ತಿಂದು ಹಣ ಕೊಡದೆ ಕ್ಯಾಂಟೀನ್ ಮಾಲಕಿಗೆ ಹಲ್ಲೆ ನಡೆಸಿದ ಖದೀಮ

ಕಾರ್ಕಳ: ನಾಲ್ಕು ಪ್ಲೇಟ್ ತಿಂಡಿ ತಿಂದು ಹಣ ಕೊಡದೆ ಕ್ಯಾಂಟೀನ್ ಮಾಲಕಿಗೆ ಜೀವ ಬೆದರಿಕೆಯೊಡ್ಡಿರುವ ಘಟನೆ ಮಿಯ್ಯಾರು ಕಂಬಳ ನಡೆಯುವ ಸ್ಥಳದಲ್ಲಿ ನಡೆದಿದೆ. ಮಿಯ್ಯಾರು ಮಂಗಲಪಾದೆಯ ಅಶ್ವಿನಿ ಎಂಬವರು ಮಿನಿ ಕ್ಯಾಂಟಿನ್‌ ನಡೆಸುತ್ತಿದ್ದು, ಫೆ. 27ರಂದು ಮಿಯ್ಯೂರು ಕಂಬಳದಲ್ಲಿ ಕ್ಯಾಂಟೀನ್ ಹಾಕಿದ್ದರು. ರಾತ್ರಿ 12.30ಕ್ಕೆ ಆನೆಕೆರೆಯ ಕಾಳು ಎಂಬಾತನು ಬಂದು ನಾಲ್ಕು ಪ್ಲೇಟ್ ತಿಂಡಿ ತೆಗೆದುಕೊಂಡಿದ್ದನು. ಬಿಲ್ ಕೇಳಿದಾಗ ಹಣ ಕೊಡುವುದಿಲ್ಲ ಎಂದಿದ್ದಾನೆ. ಜೋರು ಮಾಡಿ ಕೇಳಿದಾಗ ಹಲ್ಲೆ ಮಾಡಿದ್ದಾನೆ. ಕಾಲಿಗೆ ಕಲ್ಲು ಎತ್ತಿಹಾಕಿ, ಜೀವ ಬೆದರಿಕೆಯೊಡ್ಡಿದ್ದಾನೆ […]

ಆಸ್ತಿ ವಿವಾದ: ತಾಯಿ, ಮಗಳು ಕೆರೆಗೆ ಜಿಗಿದು ಆತ್ಮಹತ್ಯೆ

ಕೋಲಾರ: ಆಸ್ತಿ ವಿಚಾರ ಹಾಗೂ ಸಾಲಗಾರರ ಕಾಟಕ್ಕೆ ಬೇಸತ್ತು ತಾಯಿ ಮತ್ತು ಮಗಳು ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ತಾಲೂಕಿನ ನರಸಾಪುರ ಎಂಬಲ್ಲಿ ನಡೆದಿದೆ. ಬೆಂಗಳೂರಿನ ಹೊರಮಾವು ಮೂಲದ ತಾಯಿ ನಂದಿತಾ (45) ಮತ್ತು ಪುತ್ರಿ ಪ್ರಗತಿ (21) ಮೃತ ದುರ್ದೈವಿಗಳು.‌ ನಂದಿತಾ ಅವರ ಪತಿ ಮೂರು ತಿಂಗಳ ಹಿಂದಷ್ಟೇ ಮೃತಪಟ್ಟಿದ್ದರು. ಗಂಡನ ಮನೆಯವರಿಂದ ಆಸ್ತಿ ವಿಚಾರವಾಗಿ ಕಿರುಕುಳಕ್ಕೆ‌ ಹಾಗೂ ಸಾಲಗಾರರ ಕಾಟಕ್ಕೆ ಬೇಸತ್ತು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.