ರೈತ ಸಂತೆಯ ಮೂಲಕ ಮಧ್ಯವರ್ತಿಗಳ ಹಾವಳಿ ತಪ್ಪಿಸಿ: ಡಿಸಿ ಜಿ. ಜಗದೀಶ್

ಉಡುಪಿ: ರೈತ ಸೇವಾ ಕೇಂದ್ರದ ಆವರಣದಲ್ಲಿ ಪ್ರತಿ ಗುರುವಾರ ರೈತ ಸಂತೆಯನ್ನು ನಡೆಸುವ ಮೂಲಕ ರೈತರಿಗೆ ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ, ಮಧ್ಯವರ್ತಿಗಳ ಹಾವಳಿ ತಪ್ಪಿಸುವಂತೆ ಹಾಗೂ ಗ್ರಾಹಕರಿಗೆ ತಾಜಾ ತರಕಾರಿಗಳನ್ನು ಪೂರೈಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ರೈತ ಸೇವಾ ಕೇಂದ್ರದ ಜಿಲ್ಲಾ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತ ಸಂತೆಯಲ್ಲಿ ಭಾಗವಹಿಸುವ ರೈತರಿಗೆ ಇಲಾಖೆ ವತಿಯಿಂದ ಗುರುತಿನ ಚೀಟಿಗಳನ್ನು ನೀಡುವಂತೆ ಸೂಚಿಸಿದ ಅವರು, […]

ಉಡುಪಿ: ಮದ್ಯವ್ಯಸನಿ ಮಕ್ಕಳ ಜಾಗೃತಿ ಸಪ್ತಾಹ ಅಂಗವಾಗಿ ವ್ಯಂಗ್ಯಚಿತ್ರ ಪ್ರದರ್ಶನ

ಉಡುಪಿ: ದೊಡ್ಡಣಗುಡ್ಡೆ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ರೋಟರಿ ಕ್ಲಬ್ ಮಣಿಪಾಲ ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕರಾವಳಿ ಇವರ ಜಂಟಿ ಆಶ್ರಯದಲ್ಲಿ ಶುಕ್ರವಾರ ಬಾಳಿಗಾ ಆಸ್ಪತ್ರೆಯ ಸಭಾಂಗಣದಲ್ಲಿ ಮದ್ಯವ್ಯಸನಿ ಮಕ್ಕಳ ಜಾಗೃತಿ ಸಪ್ತಾಹ ಪ್ರಯುಕ್ತ ವ್ಯಂಗ್ಯಚಿತ್ರ ಪ್ರದರ್ಶನವನ್ನು ಆಯೋಜಿಸಲಾಯಿತು. ಕ್ರಾಫ್ಟ್ಸ್ ಮಂತ್ರ ಇದರ ಸಂಸ್ಥಾಪಕಿ ರೇಣು ಜಯರಾಂ ಕಾರ್ಯಕ್ರಮ ಉದ್ಘಾಟಿಸಿದರು. ಬಾಳಿಗಾ ಆಸ್ಪತ್ರೆಯ ನಿರ್ದೇಶಕ, ಮನೋವೈದ್ಯ ಡಾ. ಪಿ ವಿ ಭಂಡಾರಿ, ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ, ಹಿರಿಯ ವ್ಯಂಗ್ಯಚಿತ್ರಕಾರ ಜೇಮ್ಸ್ ವಾಝ್, ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ […]

ಆರೋಗ್ಯ ಕಾರ್ಡ್ ಮೂಲಕ ಡಾ. ಜಿ ಶಂಕರ್ ಅವರಿಂದ ಆರೋಗ್ಯ ಕ್ರಾಂತಿ: ರಮೇಶ್ ಕಾಂಚನ್

ಉಡುಪಿ: ಯಾವುದೇ ಜಾತಿ, ಧರ್ಮ ಬೇಧವಿಲ್ಲದೇ ಜಿಲ್ಲೆಯ ಜನರಿಗೆ ಡಾ. ಜಿ. ಶಂಕರ್ ಅವರು ಆರೋಗ್ಯ ಕಾರ್ಡ್ ವಿತರಿಸುತ್ತಿದ್ದು, ಬಡವರ ಪಾಲಿಗೆ ಇದು ಸಂಜೀವಿನಿಯಾಗಿದೆ. ಲಕ್ಷಾಂತರ ಕುಟುಂಬಗಳಿಗೆ ಈ ಕಾರ್ಡ್ ಮೂಲಕ ಅನುಕೂಲವಾಗಿದ್ದು, ಆ ಮೂಲಕ ಡಾ. ಜಿ ಶಂಕರ್ ಅವರು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದಾರೆ ಎಂದು ನಗರಸಭೆಯ ವಿಪಕ್ಷ ನಾಯಕ ರಮೇಶ್ ಕಾಂಚನ್ ಅಭಿಪ್ರಾಯಪಟ್ಟಿದ್ದಾರೆ. ಚಿಟ್ಪಾಡಿ ಶಾರದಾಂಬ ದೇವಸ್ಥಾನದಲ್ಲಿ ಶುಕ್ರವಾರ ಡಾ. ಜಿ ಶಂಕರ್ ಆರೋಗ್ಯ ಕಾರ್ಡ್ ಗಳನ್ನು ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು. […]

ಹಿರಿಯಡಕ: ಬಾವಿಗೆ ಹಾರಿ ಪೆರ್ಡೂರು ನಿವಾಸಿ ಆತ್ಮಹತ್ಯೆ

ಹಿರಿಯಡಕ: ಒಂಟಿತನದಿಂದ ಮಾನಸಿಕವಾಗಿ ಮನನೊಂದ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ‌ ತಾಲೂಕಿನ ಪೆರ್ಡೂರು ಗ್ರಾಮದ ಗುಂಡ್ಯಡ್ಕ ಎಂಬಲ್ಲಿ ನಡೆದಿದೆ. ಪೆರ್ಡೂರು ಗ್ರಾಮದ ಗುಂಡ್ಯಡ್ಕ ನಿವಾಸಿ ಸುಬ್ಬಣ್ಣ ಪ್ರಭು (60) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.‌ ಇವರು ತಾಯಿಯೊಂದಿಗೆ ವಾಸವಾಗಿದ್ದರು. ಹೆಂಡತಿ ಕಾಯಿಲೆಯಿಂದ ಮೃತಪಟ್ಟಿದ್ದು, ಒಬ್ಬನೇ ಮಗ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಕಳೆದ 4 ತಿಂಗಳ ಹಿಂದೆ ಸುಬ್ಬಣ್ಣನ ತಮ್ಮ ಸತೀಶ ಪ್ರಭು ಎಂಬವರು ಬಾವಿಗೆ ಬಿದ್ದು ಮೃತಪಟ್ಟಿದ್ದರು. ಹಿಂದಿನಿಂದಲೂ ಕುಡಿತದ ಚಟ […]

ಉಡುಪಿ: ಫೆ. 22ರಿಂದ 27ರ ವರೆಗೆ ಕಾಂಗ್ರೆಸ್ ಜನಧ್ವನಿ ಪಾದಯಾತ್ರೆ

ಉಡುಪಿ: ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಫೆ. 22ರಿಂದ ಫೆ.27ರ ವರೆಗೆ ‘ಜನಧ್ವನಿ ಪಾದಯಾತ್ರೆ’ (108 ಕಿ.ಮೀ.) ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಫೆ. 22ರಂದು ಬೆಳಿಗ್ಗೆ 11ಗಂಟೆಗೆ ಹೆಜಮಾಡಿಯಲ್ಲಿ ಪಾದಯಾತ್ರೆ ಉದ್ಘಾಟನೆಗೊಳ್ಳಲಿದೆ. ಬಳಿಕ ಹೆಜಮಾಡಿ ಟೋಲ್‌ಗೇಟ್‌ನಿಂದ ಆರಂಭಗೊಂಡು, ಕಾಪು-ಕಟಪಾಡಿ-ಉಡುಪಿ-ಕಲ್ಯಾಣಪುರ-ಸಂತೆಕಟ್ಟೆ-ಬ್ರಹ್ಮಾವರ-ಕುಂದಾಪುರ-ಅರೆಹೊಳೆ-ಬೈಂದೂರಿನಲ್ಲಿ ಪಾದಯಾತ್ರೆ ಮುಕ್ತಾಯವಾಗಲಿದೆ. ಪಾದಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯದ ಮುಖಂಡರು […]