ಉತ್ತರಾಖಂಡ್ ಹಿಮಪ್ರವಾಹ: ಪೇಜಾವರ ಶ್ರೀ ಕಳವಳ

ಉಡುಪಿ: ಉತ್ತರಾಖಂಡ್ ನಲ್ಲಿ ಭಾನುವಾರ ಭೀಕರ ಹಿಮಪ್ರವಾಹ ಸಂಭವಿಸಿದ್ದು, ಹಲವಾರು ಮಂದಿ ಕಣ್ಮರೆಯಾಗಿದ್ದಾರೆ. ಈ ಪ್ರಕೃತಿ ವಿಕೋಪಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಪ್ರಾಕೃತಿಕ ದುರ್ಘಟನೆಯಿಂದ ತೀವ್ರ ಬೇಸರವಾಗಿದೆ. ಇದರಿಂದ ಸಂತ್ರಸ್ತರಾಗಿರುವವರ ನೋವಿಗೆ ನಮ್ಮ ಸಹಾನುಭೂತಿ ಇದೆ. ಉತ್ತರಾಖಂಡ್ ರಾಜ್ಯದ ಸಮಸ್ತ ಜನತೆಯ ಶ್ರೇಯಸ್ಸಿಗಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ. ಘಟನೆಯಿಂದ ಮೃತರಾಗಿರುವವರಿಗೆ ದೇವರು ಸದ್ಗತಿಯನ್ನು ಕರುಣಿಸಲಿ . ನಾಪತ್ತೆಯಾಗಿರುವವರು ಶೀಘ್ರವಾಗಿ ಯಾವುದೇ ಅಪಾಯವಿಲ್ಲದೆ ಪತ್ತೆಯಾಗಲೆಂದು ಆಶಿಸುತ್ತೇವೆ ಎಂದು ಶ್ರೀಗಳು ತಿಳಿಸಿದ್ದಾರೆ.

ಕಣ್ಣಿನ ಪೊರೆ ಬಗ್ಗೆ ಭಯಬೇಡ: ಡಾ. ಮೈತ್ರಿ

ಹಿರಿಯಡಕ: ದೇಹದಲ್ಲಿರುವ ಎಲ್ಲಾ ಅಂಗಗಳು ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ಹಾಗೆಯೇ ಕಣ್ಣು ಕೂಡ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ಕಣ್ಣಿನ ಪೊರೆ ಎಂಬುವುದು ಖಾಯಿಲೆ ಅಲ್ಲ. ಅದು ವಯೋಸಹಜ ಸ್ಥಿತಿ. ಈ ಬಗ್ಗೆ ಭಯಬೇಡ ಎಂದು ಉಡುಪಿ ಪ್ರಸಾದ್ ನೇತ್ರಾಲಯದ ವೈದ್ಯೆ ಡಾ. ಮೈತ್ರಿ ಹೇಳಿದರು. ಅವರು ಕಾಜಾರಗುತ್ತು ಗೆಳೆಯರ ಬಳಗ ಮತ್ತು ಕಾಜಾರಗುತ್ತು ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ, ಪೆರ್ಣಂಕಿಲ ಪ್ರಾಥಮಿಕ ಆರೋಗ್ಯ ಕೇಂದ್ರ, […]

ಕುಂದ್ರಾದಿಯಲ್ಲೊಂದು ದಿನ: ಸ್ವಚ್ಛತಾ ತಂಡದ ಹಸಿರೇ ಉಸಿರು ಕಾರ್ಯಕ್ರಮ

???? ಶ್ರದ್ಧಾ ಪೂಜಾರಿ, ಬೆದ್ರಲ್ಕೆ ತೆಳ್ಳಾರ್ ಕಾರ್ಕಳ: ಕಾರ್ಕಳ ತಾಲ್ಲೂಕಿನ ತೆಳ್ಳಾರ್ ನ ಪರಿಸರ ಪ್ರೇಮಿಗಳ ಸಂಘಟನೆ ಹಸಿರೇ ಉಸಿರು ಇಂದಿಗೆ 52ನೇ ವಾರವನ್ನು ಪೂರ್ಣಗೊಳಿಸಿದೆ. ಕುಂದ್ರಾದಿಯಲ್ಲೊಂದು ದಿನ ಎಂಬ ಘೋಷದೊಂದಿಗೆ ಕುಂದ್ರಾದಿಯಲ್ಲಿ ತಮ್ಮ ಈ ವಾರದ ಸ್ವಚ್ಛತೆಯನ್ನು ಯಶಸ್ವಿಗೊಳಿಸಿದೆ. ಎಲ್ಲರಿಗೂ ಮಾದರಿಯಾಗಬೇಕು. ಜೊತೆಗೆ ಪುಟಾಣಿ ಮಕ್ಕಳ ಉತ್ಸಾಹ ಕಂಡು ಮಕ್ಕಳಲ್ಲಿರುವ ಒಂದಿಷ್ಟು ಹೊಸತನವನ್ನು ನಮ್ಮಲ್ಲೂ ಅಳವಡಿಸಿಕೊಳ್ಳಬೇಕು ಎನ್ನುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕುಂದ್ರಾದಿಯ ಬಗ್ಗೆ ಒಂದಷ್ಟು ಮಾಹಿತಿಯನ್ನು, ಅಲ್ಲಿನ ಸೌಂದರ್ಯವನ್ನು ಅನುಭವಿಸಿ ಕೂಡ್ಲುವಿನತ್ತ ಪ್ರಯಾಣ ಬೆಳೆಸಿತು […]

ಕರಾವಳಿ ಯೂತ್ ಕ್ಲಬ್ ಉಡುಪಿಗೆ 5ನೇ ವರ್ಷದ ಸಂಭ್ರಮ: ಐದು ಕುಟುಂಬಗಳಿಗೆ ಸಹಾಯಧನ ವಿತರಣೆ

ಉಡುಪಿ: ಕರಾವಳಿ ಯೂತ್ ಕ್ಲಬ್ ಉಡುಪಿ ಇದರ ಐದನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಕಡಿಯಾಳಿಯ ಕಾತ್ಯಾಯಿನಿ ಮಂಟಪದಲ್ಲಿ ಭಾನುವಾರ ಐದು ಜನ ಅಶಕ್ತ ಕುಟುಂಬಗಳಿಗೆ ಒಟ್ಟು 50 ಸಾವಿರ ಮೊತ್ತದ ಸಹಾಯಧನ ವಿತರಣೆ ಹಾಗೂ ಸಾಧಕರಿಗೆ ಗೌರವಾರ್ಪಣೆ ಮೂಲಕ ವಿಶೇಷವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮನೋವೈದ್ಯ ಡಾ. ಡಾ. ಪಿ.ವಿ. ಭಂಡಾರಿ, ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ರುವಾರಿ ಅರ್ಜುನ್ ಭಂಡಾರ್ಕರ್ ಅವರನ್ನು ಸನ್ಮಾನಿಸಿ […]

ಕಬ್ಬು ಬೆಳೆದು ಬದುಕು ಸಿಹಿಯಾಗಿಸಿದ ಕರಾವಳಿಯ ಈ ಕೃಷಿಕ: ಇವರ ಸಕ್ಸಸ್ ಸ್ಟೋರಿ ಒಮ್ಮೆ ಕೇಳಿ

ಇದು ಕಬ್ಬು ಬೆಳೆದು ಬದುಕು ಸಿಹಿಮಾಡಿಕೊಂಡ ಯುವ ಕೃಷಿಕನೊಬ್ಬನ ಕತೆ.ಈ ಕತೆ ಕೇಳಿದರೆ ನೀವು ಹೆಮ್ಮೆ ಮತ್ತು ಖುಷಿ ಪಡುತ್ತೀರಿ ಹೌದು ಇವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಉತ್ಸಾಹಿ ಕೃಷಿಕ. ಹೆಸರು ಗುಂಡು ನಾಯ್ಕ್. ಕಾರ್ಕಳ ತಾಲೂಕಿನ ಮುಟ್ಲುಪಾಡಿಯ ದರ್ಖಾಸು ಮನೆ ನಿವಾಸಿ. ಇದೀಗ ತಮ್ಮ ಮನೆಯವರೆಲ್ಲರನ್ನೂ ಕಬ್ಬು ಕೃಷಿಗೆ ತೊಡಗಿಸಿಕೊಳ್ಳುವ ಸೈ ಎನಿಸಿಕೊಂಡು ಕಬ್ಬು ಕೃಷಿಯಲ್ಲಿ ಯಶಸಸ್ಸು ಸಾಧಿಸಿದ್ದಾರೆ ಗುಂಡು ನಾಯ್ಕರು. ಆ ಮೂಲಕ ಕಾರ್ಕಳ ತಾಲೂಕಿನಲ್ಲಿ ಮಾದರಿ ರೈತನಾಗಿ ಗುರುತಿಸಿಕೊಂಡಿದ್ದಾರೆ. ಇವರದ್ದು ಶ್ರಮಿಕ […]