ತೈಲ ದರದಲ್ಲಿ ಮತ್ತೆ ಹೆಚ್ಚಳ: ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ.!

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿದಿನ ಏರಿಳಿತಗಳು ಉಂಟಾಗುತ್ತಿದ್ದು, ನಿನ್ನೆಗಿಂತ ಇಂದು ಪೆಟ್ರೋಲ್ ಕೊಂಚ ದುಬಾರಿಯಾಗಿದೆ. ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರವೆಷ್ಟು ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಇಂದು ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 86.93 ರೂ. ಇದೆ. ಮುಂಬೈನಲ್ಲಿ 93.49 ರೂ, ಜೈಪುರದಲ್ಲಿ 93.75 ರೂ, ಬೆಂಗಳೂರಿನಲ್ಲಿ 89.85 ರೂ, ಹೈದರಾಬಾದ್​ನಲ್ಲಿ 90.42 ರೂ, ತಿರುವನಂತಪುರದಲ್ಲಿ 88.66 ರೂ, ಚೆನ್ನೈನಲ್ಲಿ 89.46 […]

ಉಡುಪಿ: ಸರಕಾರಿ ಉದ್ಯೋಗ ಕೊಡಿಸುವುದಾಗಿ ವಂಚಿಸುತ್ತಿದ್ದ ಖದೀಮನ ಬಂಧನ

ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡು ಸರಕಾರಿ ಉದ್ಯೋಗ ಮಾಡಿಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಖದೀಮನೊಬ್ಬನನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿದ್ದು, ಆತನಿಂದ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಕಾಪು ಉಳಿಯಾರಗೋಳಿ ನಿವಾಸಿ ನಿಶಾಂತ ಎಸ್. ಕುಮಾರ್ ಯಾನೆ ನಿತಿನ್ (21) ಎಂದು ಗುರುತಿಸಲಾಗಿದೆ. ಈತ ಫೇಸ್ ಬುಕ್‌ನಲ್ಲಿ ಪರಿಚಯ ಮಾಡಿಕೊಂಡು ಸರಕಾರಿ ಉದ್ಯೋಗ ದೊರಕಿಸಿಕೊಡುವುದಾಗಿ ನಂಬಿಸಿ ಹಲವಾರು ಮಂದಿಯಿಂದ ಹಣ ಸುಲಿಗೆ ಮಾಡುತ್ತಿದ್ದ. ನಿಶಾಂತ್ ವರ್ತನೆಯಲ್ಲಿ ಸಂಶಯಗೊಂಡ ನಿರುದ್ಯೋಗಿಯೊಬ್ಬರು ಉಡುಪಿ ಸೆನ್ ಠಾಣೆಗೆ […]

ಮಣಿಪಾಲ: ವಿದ್ಯಾರ್ಥಿಗಳಿಗೆ ಚಾಕು ತೋರಿಸಿ ಸುಲಿಗೆ: ಇಬ್ಬರು ಆರೋಪಿಗಳ ಬಂಧನ

ಮಣಿಪಾಲ: ಮಣಿಪಾಲ ಪರಿಸರದಲ್ಲಿ ಸಾಕಷ್ಟು ಆತಂಕ ಸೃಷ್ಟಿಸಿದ ಇತ್ತೀಚೆಗೆ ಮಣಿಪಾಲದ ಕೆ.ಎಫ್‌ಸಿ ಹೋಟೆಲ್ ಬಳಿ ರಾತ್ರಿ ವೇಳೆಯಲ್ಲಿ ನಡೆದುಕೊಂಡು ಬರುತ್ತಿದ್ದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಸಿ ಮೊಬೈಲ್, ವಾಚ್‌ ಮತ್ತು ನಗದು ಸುಲಿಗೆ ಮಾಡಿದ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಮಣಿಪಾಲ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಆಶಿಫ್‌ ಹಾಗೂ ದಸ್ತಗೀರ್‌ ಬೇಗ್ ಬಂಧಿತ ಆರೋಪಿಗಳು. ಈ ಇಬ್ಬರು ಸುಲಿಗೆಕೋರರು ಜ.31ರಂದು ಮಧ್ಯರಾತ್ರಿ 12.15 ಸುಮಾರಿಗೆ ಸಿಗರೇಟು ಕೇಳುವ ನೆಪಮಾಡಿಕೊಂಡು ಮಣಿಪಾಲದ ಕೆ.ಎಫ್.ಸಿ ಬಿಲ್ಡಿಂಗ್‌ […]

ಉತ್ತರಾಖಂಡದಲ್ಲಿ ಭಾರಿ ಹಿಮಸ್ಫೋಟ: 150ಕ್ಕೂ ಹೆಚ್ಚು ಮಂದಿ ಕಣ್ಮರೆ

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಭಾರಿ ಹಿಮಸ್ಫೋಟ ಸಂಭವಿಸಿದ್ದು, ಏಕಾಏಕಿಯಾಗಿ ಹಿಮಪ್ರವಾಹ ಉಂಟಾದ ಪರಿಣಾಮ 150ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಪ್ರವಾಹದಿಂದ ಧೌಲಿಗಂಗಾ ನದಿಯಲ್ಲಿನ ಹಿಮದ ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ನೈಸರ್ಗಿಕ ವಿಕೋಪ ಕೇಂದ್ರ ಹಲವು ಜಿಲ್ಲೆಗಳಲ್ಲಿ ಭಾರಿ ಪ್ರವಾಹದ ಕುರಿತು ಹೈ ಅಲರ್ಟ್ ಘೋಷಣೆ ಮಾಡಿದೆ. ಉತ್ತರಾಖಂಡದ ಚಮೋಲಿ ಜಿಲ್ಲೆಯ ರೈಣಿ ಗ್ರಾಮದಲ್ಲಿ ಹಿಮಸ್ಫೋಟಗೊಂಡಿದ್ದು, ಹರಿದ್ವಾರ ಮತ್ತು ರಿಷಿಕೇಶ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಹುಟ್ಟಿಸಿದೆ. 150 ಮಂದಿ ನಾಪತ್ತೆ ರೈಣಿ ಗ್ರಾಮದ ಬಳಿ […]

ರಾಮಮಂದಿರ ನಿರ್ಮಾಣಕ್ಕೆ ₹1.21 ಲಕ್ಷ ದೇಣಿಗೆ ನೀಡಿದ ಯಶ್ ಪಾಲ್ ಸುವರ್ಣ

ಉಡುಪಿ: ಅಯೋಧ್ಯಾ ಶ್ರೀರಾಮಮಂದಿರ ನಿರ್ಮಾಣಕ್ಕೆ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ಅವರು ₹1.21 ಲಕ್ಷ ದೇಣಿಗೆ ನೀಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಚಾಲಕ ನಾರಾಯಣ ಶೆಣೈ, ನಗರ ಸಂಘ ಚಾಲಕ ಶ್ರೀರಾಮಚಂದ್ರ ಸನಿಲ್, ಉಡುಪಿ ನಗರ ಸಂಪರ್ಕ ಪ್ರಮುಖ್ ಶರತ್ ಮಲ್ಪೆ, ಸುಭಾಷಿತ್ ಅವರಿಗೆ ದೇಣಿಗೆಯನ್ನು ಹಸ್ತಾಂತರಿಸಿದರು.