ಕುಂದ್ರಾದಿಯಲ್ಲೊಂದು ದಿನ: ಸ್ವಚ್ಛತಾ ತಂಡದ ಹಸಿರೇ ಉಸಿರು ಕಾರ್ಯಕ್ರಮ

???? ಶ್ರದ್ಧಾ ಪೂಜಾರಿ, ಬೆದ್ರಲ್ಕೆ ತೆಳ್ಳಾರ್

ಕಾರ್ಕಳ: ಕಾರ್ಕಳ ತಾಲ್ಲೂಕಿನ ತೆಳ್ಳಾರ್ ನ ಪರಿಸರ ಪ್ರೇಮಿಗಳ ಸಂಘಟನೆ ಹಸಿರೇ ಉಸಿರು ಇಂದಿಗೆ 52ನೇ ವಾರವನ್ನು ಪೂರ್ಣಗೊಳಿಸಿದೆ.

ಕುಂದ್ರಾದಿಯಲ್ಲೊಂದು ದಿನ ಎಂಬ ಘೋಷದೊಂದಿಗೆ ಕುಂದ್ರಾದಿಯಲ್ಲಿ ತಮ್ಮ ಈ ವಾರದ ಸ್ವಚ್ಛತೆಯನ್ನು ಯಶಸ್ವಿಗೊಳಿಸಿದೆ.

ಎಲ್ಲರಿಗೂ ಮಾದರಿಯಾಗಬೇಕು. ಜೊತೆಗೆ ಪುಟಾಣಿ ಮಕ್ಕಳ ಉತ್ಸಾಹ ಕಂಡು ಮಕ್ಕಳಲ್ಲಿರುವ ಒಂದಿಷ್ಟು ಹೊಸತನವನ್ನು ನಮ್ಮಲ್ಲೂ ಅಳವಡಿಸಿಕೊಳ್ಳಬೇಕು ಎನ್ನುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಕುಂದ್ರಾದಿಯ ಬಗ್ಗೆ ಒಂದಷ್ಟು ಮಾಹಿತಿಯನ್ನು, ಅಲ್ಲಿನ ಸೌಂದರ್ಯವನ್ನು ಅನುಭವಿಸಿ ಕೂಡ್ಲುವಿನತ್ತ ಪ್ರಯಾಣ ಬೆಳೆಸಿತು ಈ ತಂಡ.

ಉತ್ಸಾಹಿ ತಂಡ:

ಪುಟ್ಟ ತಂಡದಲ್ಲಿ ಪುಟಾಣಿ ಮಕ್ಕಳು, ವಿದ್ಯಾರ್ಥಿಗಳು, ಯುವಭಾರತ ನಿರ್ಮಿಸುವ ಉತ್ಸಾಹಿ ಯುವಕರು, ಇವರಿಗೆಲ್ಲ ಮಾರ್ಗದರ್ಶನ ನೀಡುವ ಮಾರ್ಗದರ್ಶಕರಿದ್ದಾರೆ. ಸ್ವಚ್ಛ ಭಾರತ ನಿರ್ಮಿಸುವಲ್ಲಿ ಈ ತಂಡ ಶ್ರಮಿಸುತ್ತಿದೆ.

ತಮ್ಮ ಊರಿನ ಸ್ವಚ್ಛತೆಯ ಜೊತೆಗೆ ಪ್ರವಾಸಿ ತಾಣಗಳ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದಾರೆ ಈ ತಂಡದ ಸದಸ್ಯರು. ಪ್ರವಾಸಿಗರು ತಮ್ಮ ಮನೆ, ಸುತ್ತ ಮುತ್ತ ಸ್ವಚ್ಛವಾಗಿಡುವಂತೆ ಪ್ರವಾಸ ತಾಣಗಳ್ಳನ್ನು ಸ್ವಚ್ಛವಾಗಿಡುವಂತೆ ತಂಡ ಪ್ರೇರೇಪಿಸುತ್ತಿದೆ.
ಸ್ವಚ್ಛ ಕಾರ್ಕಳ ಬಿಗ್ರೇಡ್, ಯುವಸ್ಪಂದನ ಬಳಗ ಮುಂಡ್ಲಿ, ಹಸಿರೇ ಉಸಿರು ತೆಳ್ಳರ್, ಈ ಮೂರು ತಂಡಗಳು ಸ್ವಚ್ಛತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದೆ.

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ಮಾತಿನಂತೆ ಈ ಮೂರು ತಂಡಗಳಲ್ಲಿ ಭಾಗವಹಿಸುವ ಪುಟಾಣಿಗಳು ಮುಂದೊಂದು ದಿನ ದೇಶವನ್ನು ಅಳುವ ನಾಯಕರೂ ಆಗಬಹುದು.

ಭಾನುವಾರದ ದಿನವನ್ನು ಒಂದು ಸುಂದರ ಕ್ಷಣವನ್ನಾಗಿಸಿ, ಪ್ರಯಾಣದ ಜೊತೆಗೆ ಸ್ವಚ್ಛತೆಯಲ್ಲಿ ತೊಡಗಿಕೊಂಡ ಹಸಿರೇ ಉಸಿರು ತಂಡ ಪ್ರತಿ ಭಾನುವಾರ ತಮ್ಮ ಸಮಯವನ್ನು ಸ್ವಚ್ಛತೆಯ ಕಾರ್ಯದಲ್ಲಿ ಕಳೆಯುತ್ತದೆ. ನೀವು ನಿಮ್ಮ ಸುತ್ತಮುತ್ತಲು ಸ್ವಚ್ಛವಾಗಿರಿಸಲು ಇಂತಹ ತಂಡಗಳು ನಿಮಗೆ ಸ್ಫೂರ್ತಿ ನೀಡಲಿ.