ಏಂಜಲ್ಸ್ ಫೌಂಡೇಶನ್ ಕಲ್ಯಾಣಪುರ ಸಂಸ್ಥೆಯ ಎರಡನೇ ವಾರ್ಷಿಕೋತ್ಸವ ಸಮಾರಂಭ
ಉಡುಪಿ: ಏಂಜಲ್ಸ್ ಫೌಂಡೇಶನ್ ಕಲ್ಯಾಣಪುರ ಸಂಸ್ಥೆಯ ಎರಡನೇ ವಾರ್ಷಿಕೋತ್ಸವ ಸಮಾರಂಭವು ಏಂಜೆಲ್ಸ್ ಫೌಂಡೇಷನ್ ನ ಸ್ಥಾಪಕ ಅಧ್ಯಕ್ಷರ ಮನೆಯ ಪರಿಸರದಲ್ಲಿ ನಡೆಯಿತು. ಸಮಾರಂಭದ ಉದ್ಘಾಟನೆಯನ್ನು ಮಿಲಾಗ್ರಿಸ್ ಪದವಿ ಕಾಲೇಜು ಕಲ್ಯಾಣಪುರ ಇಲ್ಲಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಜಯರಾಂ ಶೆಟ್ಟಿಗಾರ್ ನೆರವೇರಿಸಿ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ಸಭೆಯ ಅಧ್ಯಕ್ಷತೆಯನ್ನು ಏಂಜೆಲ್ಸ್ ಫೌಂಡೇಶನ್ ನ ಅಧ್ಯಕ್ಷರಾದ ರಾಬರ್ಟ್ ಡಿಸೋಜಾ ಅವರು ವಹಿಸಿಕೊಂಡಿದ್ದು ಸಮಾರಂಭದ ವೇದಿಕೆಯಲ್ಲಿ ಕೋವಿಡ 19 ಸಂದರ್ಭದಲ್ಲಿ ಕರೋನಾ ವಾರಿಯರ್ಸ್ ಆಗಿ ಅಪ್ರತಿಮ ಸೇವೆ ಗೈದ ಡಾಕ್ಟರ್ […]
ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಕಾರು ಅಪಘಾತ: ಸಚಿವರ ಪತ್ನಿ ಮೃತ್ಯು
ಶಿರಸಿ: ಅಂಕೋಲಾದ ತಾಲ್ಲೂಕಿನ ಎಕ್ಕಂಬಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕೇಂದ್ರ ಆಯುಷ್ ಖಾತೆಯ ಸಚಿವ ಶ್ರೀಪಾದ್ ನಾಯಕ್ ಅವರ ಪತ್ನಿ ವಿಜಯಾ ಶ್ರೀಪಾದ್ ನಾಯಕ್ ಮೃತಪಟ್ಟಿದ್ದು, ಸಚಿವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊಸಕಂಬಿ ಗ್ರಾಮದ ಬಳಿ ಘಟನೆ ನಡೆದಿದ್ದು, ಸಚಿವರು ಪತ್ನಿಯ ಜೊತೆ ಯಲ್ಲಾಪುರದಿಂದ ಗೋಕರ್ಣಕ್ಕೆ ತೆರಳುತ್ತಿದ್ದರು. ಕಾರಿನಲ್ಲಿದ್ದ ಸಚಿವರು ಸೇರಿ ನಾಲ್ವರಿಗೆ ಗಾಯಗೊಂಡಿದ್ದಾರೆ. ಸಚಿವರ ಪತ್ನಿ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು […]
ಎಲ್ಲರಿಗೂ ಅಚ್ಚು ಮೆಚ್ಚು ಸಂಕ್ರಾತಿಯ ಈ ಸಕ್ಕರೆ ಅಚ್ಚು: ಪೇಟೆ ಅಚ್ಚಿನಿಂದ ದೂರವಿರಿ, ಮನೆಲೇ ಸಿಂಪಲ್ಲಾಗ್ ಮಾಡಿ ಸವೀರಿ
ಎಲ್ಲೆಡೆ ಸಂಕ್ರಾಂತಿ ಸಂಭ್ರಮ.ಸಂಕ್ರಾತಿ ಅಂದ್ರೆ ಮೊದಲು ನೆನಪಾಗುವುದೇ ಎಳ್ಳು ಬೆಲ್ಲದ ಜೊತೆ ಬಣ್ಣ ಬಣ್ಣದ ಸಕ್ಕರೆ ಅಚ್ಚು. ಈ ಹಬ್ಬದಲ್ಲಿ ಎಳ್ಳು ಬೆಲ್ಲದ ಜೊತೆಗೆ ಸಕ್ಕರೆ ಅಚ್ಚುಗಳನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಿದ ನಂತರ ಅದನ್ನು ಬಂಧು ಬಳಗದವರಿಗೆ ಹಂಚುತ್ತೇವೆ. ಸಕ್ಕರೆ ಅಚ್ಚುಗಳನ್ನು ಮನೆಯಲ್ಲಿ ಮಾಡುವುದು ಕಷ್ಟ ಅಂತ ಹೊರಗಡೆ ಅಂಗಡಿಗಳಿಂದ ಅದನ್ನು ಕೊಂಡುಕೊಂಡು ಬರುತ್ತೇವೆ. ಬಣ್ಣ ಬಣ್ಣದ, ವಿವಿಧ ಆಕಾರಗಳ ಸಕ್ಕರೆ ಗೊಂಬೆಗಳು ನಮಗೆ ಮಾರುಕಟ್ಟೆಯಲ್ಲಿ ನಮಗೆ ಬೇಕಾದಷ್ಟು ಸಿಗುತ್ತವೆ. ಆದರೆ ಹೊರಗಡೆ ಸಕ್ಕರೆ […]
ನದಿಯಲ್ಲಿ ಮುಳುಗಿ ಬಾಲಕ ಮೃತ್ಯು
ಬೆಳ್ತಂಗಡಿ: ಬಾಲಕನೊಬ್ಬ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಕಕ್ಕಿಂಜೆ ಸಮೀಪದ ಚಿಬಿದ್ರೆ ಗ್ರಾಮದ ಅನ್ನಾರು ಭಾನುವಾರ ಸಂಭವಿಸಿದೆ. ಮೃತ ಬಾಲಕನನ್ನು ಇನಾಯತುಲ್ಲಾ (8) ಎಂದು ಗುರುತಿಸಲಾಗಿದೆ. ಬಾಲಕ ತಂದೆ ತಾಯಿಯ ಜತೆ ಅಜ್ಜಿ ಮನೆ ಕಕ್ಕಿಂಜೆಗೆ ಬಂದಿದ್ದನು. ಭಾನುವಾರ ಊಟ ಮುಗಿಸಿ ಬಾಲಕ ಮನೆಯವರೊಂದಿಗೆ ನದಿಗೆ ತೆರಳಿದ್ದನು. ನದಿ ದಡದಲ್ಲಿ ಆಡುತ್ತಿದ್ದ ಇನಾಯತುಲ್ಲಾ ಮನೆಯವರ ಮುಂದೆಯೇ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ. ತಕ್ಷಣ ಬಾಲಕನನ್ನು ನೀರಿನಿಂದ ಮೇಲೆತ್ತಿ ಕಕ್ಕಿಂಜೆ ಖಾಸಗಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಅಲ್ಲಿಂದ ಬೆಳ್ತಂಗಡಿ ಆಸ್ಪತ್ರೆಗೆ […]
ಉಡುಪಿ: ಪೊಲೀಸರೆಂದು ನಂಬಿಸಿ ಮಹಿಳೆಯ ಚಿನ್ನದ ಸರ, ಬಳೆ ಲಪಟಾಯಿಸಿದ ವಂಚಕರು
ಉಡುಪಿ: ಪೊಲೀಸರೆಂದು ಹೇಳಿ ಮನೆ ಕೆಲಸ ಮುಗಿಸಿಕೊಂಡು ತೆರಳುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ₹40 ಸಾವಿರ ಮೌಲ್ಯದ ಚಿನ್ನದ ಸರ ಹಾಗೂ ಎರಡು ಚಿನ್ನದ ಬಳೆಗಳನ್ನು ಲಪಟಾಯಿಸಿದ ಘಟನೆ ಅಂಬಲಪಾಡಿ ಜಂಕ್ಷನ್ ಬಳಿ ನಡೆದಿದೆ. ಅಂಬಲಪಾಡಿ ನಿವಾಸಿ ವಸಂತಿ ಎಂಬಾಕೆ ವಂಚನೆಗೊಳಗಾದ ಮಹಿಳೆ. ಇವರು ಭಾನುವಾರ ಪ್ಲಾಟ್‌ವೊಂದರಲ್ಲಿ ಮನೆ ಕೆಲಸ ಮುಗಿಸಿಕೊಂಡು ಮನೆ ಕಡೆಗೆ ತೆರಳುತ್ತಿದ್ದರು. ಶ್ಯಾಮಿಲಿ ಹಾಲ್‌ನ ವಾಹನ ಪಾರ್ಕಿಂಗ್ ಸ್ಥಳದ ಬಳಿ ನಡೆದುಕೊಂಡು ಹೋಗುತ್ತಿರುವಾಗ ಯಾರೋ ಇಬ್ಬರು ಅಪರಿಚಿತರು ಬೈಕ್ ನಿಲ್ಲಿಸಿ ನಿಂತುಕೊಂಡಿದ್ದು, ವಸಂತಿಯವರನ್ನು ತಡೆದು […]