ಏಂಜಲ್ಸ್ ಫೌಂಡೇಶನ್ ಕಲ್ಯಾಣಪುರ ಸಂಸ್ಥೆಯ ಎರಡನೇ ವಾರ್ಷಿಕೋತ್ಸವ ಸಮಾರಂಭ

ಉಡುಪಿ: ಏಂಜಲ್ಸ್ ಫೌಂಡೇಶನ್ ಕಲ್ಯಾಣಪುರ ಸಂಸ್ಥೆಯ ಎರಡನೇ ವಾರ್ಷಿಕೋತ್ಸವ ಸಮಾರಂಭವು ಏಂಜೆಲ್ಸ್ ಫೌಂಡೇಷನ್ ನ ಸ್ಥಾಪಕ ಅಧ್ಯಕ್ಷರ ಮನೆಯ ಪರಿಸರದಲ್ಲಿ ನಡೆಯಿತು.

ಸಮಾರಂಭದ ಉದ್ಘಾಟನೆಯನ್ನು ಮಿಲಾಗ್ರಿಸ್ ಪದವಿ ಕಾಲೇಜು ಕಲ್ಯಾಣಪುರ ಇಲ್ಲಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಜಯರಾಂ ಶೆಟ್ಟಿಗಾರ್ ನೆರವೇರಿಸಿ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.

ಸಭೆಯ ಅಧ್ಯಕ್ಷತೆಯನ್ನು ಏಂಜೆಲ್ಸ್ ಫೌಂಡೇಶನ್ ನ ಅಧ್ಯಕ್ಷರಾದ  ರಾಬರ್ಟ್ ಡಿಸೋಜಾ ಅವರು ವಹಿಸಿಕೊಂಡಿದ್ದು ಸಮಾರಂಭದ ವೇದಿಕೆಯಲ್ಲಿ ಕೋವಿಡ 19 ಸಂದರ್ಭದಲ್ಲಿ ಕರೋನಾ ವಾರಿಯರ್ಸ್ ಆಗಿ ಅಪ್ರತಿಮ ಸೇವೆ ಗೈದ ಡಾಕ್ಟರ್ ನಿಶಾ ರೆಬೆಲ್ಲೋ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಕಿರಿಮಂಜೇಶ್ವರ ಇವರನ್ನು  ಸನ್ಮಾನಿಸಲಾಯಿತು.

ಫೌಂಡೇಶನ್ ನ ಉಪಾಧ್ಯಕ್ಷರಾದ ರೊನಾಲ್ಡ್ ಸುವಾರಿಸ್ ಹಾಗೂ ಖಜಾಂಚಿ ಶ್ರೀ ಪೀಟರ್ ಕರ್ನೆಲಿಯೋ ಇವರನ್ನು ಅಭಿನಂದಿಸಲಾಯಿತು.

ಸಮಾರಂಭದಲ್ಲಿ ವೈದ್ಯಕೀಯ ವೆಚ್ಚಕ್ಕೆ ಆರ್ಥಿಕ ನೆರವಿನ ಪ್ರೋತ್ಸಾಹವನ್ನು ನೀಡಲಾಯಿತು. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಲ್ಯಾಣಪುರ ಗ್ರಾಮ ಪಂಚಾಯತ್ ನ ಸದಸ್ಯರಾಗಿ ಆಯ್ಕೆಯಾದ ನೂತನ ಸದಸ್ಯರನ್ನು ಅಭಿನಂದಿಸಲಾಯಿತು.  ಫೌಂಡೇಶನ್ ಅಧ್ಯಕ್ಷರಾದ ರಾಬರ್ಟ್ ಡಿಸೋಜ ಸ್ವಾಗತಿಸಿದರು. ಶ್ರೀ ಶ್ರೀಧರ ಭಟ್  ಪರಿಚಯಿಸಿದರು. ಸಂಸ್ಥೆಯ ವರದಿಯನ್ನು ಪ್ರಧಾನ ಕಾರ್ಯದರ್ಶಿಗಳಾದ ಡಾ ನಿಶಾ ರೆಬೆಲ್ಲೊ ವಾಚಿಸಿದರು. ಸಂಸ್ಥೆಯ ಸಲಹೆಗಾರರಾದ ನಿವೃತ್ತ ಅಧ್ಯಾಪಕಿ ಯೂಜಿನ್ ರೆಬೆಲ್ಲೊ ವಂದಿಸಿ, ಸತೀಶ್ ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು