ಉಡುಪಿ: ಖತರ್ನಾಕ್ ಅಂತರ್ ಜಿಲ್ಲಾ ಸರಗಳ್ಳನ ಬಂಧನ; ಲಕ್ಷಾಂತರ ರೂ.ಗಳ ಸೊತ್ತು ವಶ

ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಕ್ರಿಯನಾಗಿದ್ದ ಖತರ್ನಾಕ್ ಅಂತರ್ ಜಿಲ್ಲಾ ಸರಗಳ್ಳನ್ನೊಬ್ಬನನ್ನು ಉಡುಪಿ ಪೊಲೀಸರು ಬಂಧಿಸಿದ್ದು, ಆತನಿಂದ 172.02 ಗ್ರಾಂ ಚಿನ್ನ, 3 ದ್ವಿಚಕ್ರ ವಾಹನ ಸೇರಿ ಒಟ್ಟು ₹ 9,38,200 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ಮೂಲದ ಚಂದ್ರಶೇಖರ್ (25) ಎಂಬಾತ ಬಂಧಿತ ಆರೋಪಿ. ಈತನನ್ನು ಉಡುಪಿಯ ಕುಕ್ಕಿಕಟ್ಟೆ ಜಂಕ್ಷನ್ ಬಳಿ ಪೊಲೀಸರು ಬಂಧಿಸಿದ್ದಾರೆ. ಈತ ಸರಗಳ್ಳತನ ಮಾಡಲು ಸೆಕೆಂಡ್ ಹ್ಯಾಂಡ್ ಬಜಾರ್ ನಲ್ಲಿ ಟೆಸ್ಟ್ ಡ್ರೈವ್ ಗೆ ಹೋಗಿರುತ್ತೇನೆಂದು ಬೈಕ್ ಎಗರಿಸುತ್ತಿದ್ದನು. […]

ಮೂಲ್ಕಿ: ಪ್ರಿಯಕರನೊಂದಿಗೆ ನವವಿವಾಹಿತೆ ಪರಾರಿ

ಮೂಲ್ಕಿ: ವಿವಾಹವಾದ ನಾಲ್ಕು ದಿನಗಳಲ್ಲೇ ಯುವತಿಯೊಬ್ಬಳು ಪ್ರಿಯಕರನೊಂದಿಗೆ ಪರಾರಿಯಾದ ಘಟನೆ ಮೂಲ್ಕಿ ಠಾಣಾ ವ್ಯಾಪ್ತಿಯ ಲಿಂಗಪ್ಪಯ್ಯಕಾಡು ಎಂಬಲ್ಲಿ ನಡೆದಿದೆ. ಮೂಲ್ಕಿ ಲಿಂಗಪ್ಪಯ್ಯಕಾಡು ನಿವಾಸಿ ಅರ್ಜುನ್ ಎಂಬುವರ ಪುತ್ರಿ ಚೈತ್ರಾ ಪರಾರಿಯಾದ ಯುವತಿ. ಈಕೆಗೆ ಶಿಕ್ಷಕರೊಬ್ಬರ ಜತೆ ಡಿ. 28ರಂದು ಪುನರೂರಿನ ಸಭಾಂಗಣವೊಂದರಲ್ಲಿ ಮದುವೆ ಮಾಡಲಾಗಿತ್ತು. ಆದರೆ ಯುವತಿ ಮದುವೆಯಾದ ನಾಲ್ಕೇ ದಿನಗಳಲ್ಲಿ ಚಿನ್ನ, ನಗದು ಸಹಿತ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಜ. 2ರಂದು ನಡುರಾತ್ರಿ ತಂದೆಯ ಮನೆಯಿಂದ ಪ್ರಿಯಕರ ಜಗನ್ ಪೂಜಾರಿ ಯಾನೆ ಜಗ್ಗು ಎಂಬಾತನೊಂದಿಗೆ ಬೈಕ್‌ನಲ್ಲಿ ತೆರಳಿದ್ದಾಳೆ. […]

ತೆಂಕನಿಡಿಯೂರು ಗ್ರಾಪಂ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಗ್ರಾಮೀಣ ಕಾಂಗ್ರೆಸ್ ನಿಂದ ಅಭಿನಂದನೆ

ಉಡುಪಿ: ತೆಂಕನಿಡಿಯೂರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಹಾಗೂ ಸ್ಪರ್ಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ತೆಂಕನಿಡಿಯೂರು ಗ್ರಾಮೀಣ ಕಾಂಗ್ರೆಸ್ ವತಿಯಿಂದ ಅಭಿನಂದಿಸಲಾಯಿತು. ಅಭ್ಯರ್ಥಿಗಳನ್ನು ಅಭಿನಂದಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿ ಇರದಿದ್ದರೂ ಗ್ರಾಪಂ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದೆ. ಇದು ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದರು. ಜಿಲ್ಲಾ ಕಾಂಗ್ರೆಸ್ […]

ಉಡುಪಿ: ಕಿರುಸಾಲ ಯೋಜನೆ; ಸ್ತ್ರೀಶಕ್ತಿ ಸ್ವ-ಸಹಾಯ ಗುಂಪುಗಳಿಂದ ಅರ್ಜಿ ಆಹ್ವಾನ

udupixpress

ಉಡುಪಿ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಪ್ರಸಕ್ತ ಸಾಲಿಗೆ ಕಿರುಸಾಲ ಯೋಜನೆಯಡಿ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳಿಗೆ ಆರ್ಥಿಕ ಚಟುವಟಿಕೆ ಕೈಗೊಳ್ಳಲು ₹ 3 ಲಕ್ಷ ಮೇಲ್ಪಟ್ಟು ಉಳಿತಾಯ ಇರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳಿಗೆ 3 ಲಕ್ಷ ಹಾಗೂ ₹ 2 ಲಕ್ಷ ಮೇಲ್ಪಟ್ಟು ಉಳಿತಾಯ ಇರುವ ಇತರೆ ಸ್ತ್ರೀ ಶಕ್ತಿ ಸ್ವ-ಸಹಾಯ ಗುಂಪುಗಳಿಗೆ ₹ 2 ಲಕ್ಷ ಬಡ್ಡಿ ರಹಿತ ಸಾಲ ನೀಡುವ ಸಲುವಾಗಿ […]

ದೀದಿಗೆ ಮತ್ತೊಂದು ಶಾಕ್: ಸಚಿವ ಲಕ್ಷ್ಮಿ ರತನ್ ಶುಕ್ಲಾ ರಾಜೀನಾಮೆ

ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಆಘಾತ ಎದುರಾಗಿದ್ದು, ಕ್ರೀಡಾ ಇಲಾಖೆ ಸಚಿವರಾಗಿದ್ದ ಲಕ್ಷ್ಮಿ ರತನ್ ಶುಕ್ಲಾ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಮಾಜಿ ಕ್ರಿಕೆಟಿಗರೂ ಕೂಡ ಆಗಿರುವ ಲಕ್ಷ್ಮಿ ರತನ್ ಶುಕ್ಲಾ ಇಂದು ಹೌರಾದಲ್ಲಿರುವ ಟಿಎಂಸಿ ಕಚೇರಿಗೆ ತೆರಳಿ ಟಿಎಂಸಿ ಜಿಲ್ಲಾಧ್ಯಕ್ಷರಿಗೆ ತಮ್ಮ ರಾಜಿನಾಮೆ ಸಲ್ಲಿಕೆ ಮಾಡಿದ್ದಾರೆ. ಲಕ್ಷ್ಮಿ ರತನ್ ಶುಕ್ಲಾ ಅವರು ಸುವೆಂದು ಅಧಿಕಾರಿಯ ನಂತರ ಮಮತಾ ಬ್ಯಾನರ್ಜಿ ಸಂಪುಟಕ್ಕೆ ರಾಜೀನಾಮೆ ನೀಡಿದ ಎರಡನೇ ಸಚಿವರಾಗಿದ್ದಾರೆ. ಪಶ್ಚಿಮ ಬಂಗಾಳದ ಮಾಜಿ […]