ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿ ಕೊಡುತ್ತೇವೆ: ಸಿದ್ದರಾಮಯ್ಯ

ಬಾಗಲಕೋಟೆ: ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ನೀಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬಾದಾಮಿಯಲ್ಲಿ ಸೋಮವಾರ ನೂತನ ಗ್ರಾಮ ಪಂಚಾಯಿತಿ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದರು. ಬಿಜೆಪಿಯವರು ಪಡಿತರ ಅಕ್ಕಿಯನ್ನು 7ರಿಂದ 5 ಕೆ.ಜಿಗೆ ಇಳಿಸಿದ್ದಾರೆ. ಆ ಮೂಲಕ ಬಡವರ ಹೊಟ್ಟೆಗೆ ಕಲ್ಲು ಹಾಕಿದ್ದಾರೆ. ಯಡಿಯೂರಪ್ಪ ಅವರಪ್ಪನ ಮನೆಯಿಂದ ಕೊಡುತ್ತಿದ್ದರಾ ಎಂದು ಪ್ರಶ್ನಿಸಿದರು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಗ್ರಾಪಂ ಚುನಾವಣೆಯ ಫಲಿತಾಂಶವೇ ಅದಕ್ಕೆ ಸೂಚನೆ […]

ಕೊಚ್ಚಿ-ಮಂಗಳೂರು ಸಿಎನ್ ಜಿ ಪೈಪ್ ಲೈನ್ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

ಮಂಗಳೂರು: ಕೊಚ್ಚಿ-ಮಂಗಳೂರು ನಡುವಿನ ಸಿಎನ್’ಜಿ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್) ಪೈಪ್ ಲೈನ್ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಈ ಕುರಿತು ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿಯವರು, ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್ ಲೈನ್ ನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುವುದು. ಇದು ಭವಿಷ್ಯದ ಯೋಜನೆಯಾಗಿದ್ದು, ಬಹಳಷ್ಟು ಜನರ ಬದುಕಿನಲ್ಲಿ ಧನಾತ್ಮಕ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ಸುಮಾರು 450 ಕಿ.ಮೀ ದೂರದ ಈ ಪೈಪ್’ಲೈನ್ ಹಿಂದೆಯೇ ಆರಂಭಗೊಂಡಿತ್ತು. ಅನೇಕ ಅಡೆತಡೆಗಳನ್ನು […]

ಯಾರು ಏನಂದ್ರೂ ಡೋಂಟ್ ವರಿ: ಇಲ್ಲಿದೆ ಸಿಂಪಲ್ಲಾಗಿ ಬದುಕುವ ದಾರಿ

ಯಾರು ಏನನ್ನುತ್ತಾರೋ? ನಾನು ಹೀಗೆ ಮಾಡಿದರೆ ಎಲ್ಲರ ಮುಂದೆ ಏನು ಅನ್ನಿಸಿಕೊಳ್ಳಬೇಕೋ ಎಂದೆಲ್ಲಾ ಯೋಚನೆ ಮಾಡುತ್ತಲೇ ಬದುಕಿನ ಅರ್ಧ ಆಯುಷ್ಯ ಕಳೆದುಬಿಡುತ್ತೇವೆ. ಅವರಿವರು ಏನು ಅಂದುಕೊಳ್ಳುತ್ತಾರೆಂದು ನಮಗೆ ಬೇಕಾದ ಹಾಗೇ ನಾವು ಕೊನೆಗೂ ಬದುಕುವುದೇ ಇಲ್ಲ.ಯಾರು ಏನೆಂದುಕೊಳ್ಳುತ್ತಾರೆ ಎನ್ನುವುದು ಮುಖ್ಯವಲ್ಲ.ನಾವು ಹೇಗೆ ಬದುಕಬೇಕು ಅಂದುಕೊಂಡಿದ್ದೇವೋ ಅದರಂತೆ ಬದುಕುವುದೇ ಮುಖ್ಯ. ನಾವು ಹೇಗೆ ಬದುಕಬಹುದು ಎನ್ನುವುದಕ್ಕೆ ಇಲ್ಲಿ ಕೆಲವೊಂದು ಸೂತ್ರಗಳನ್ನು ನೀಡಿದ್ದೇವೆ. ನೀವಿದ್ದನ್ನು ಪಾಲಿಸಿದರೆ ಚೆಂದದ ಬದುಕು ನಿಮ್ಮದಾಗಬಹುದು. •ನಿಮ್ಮ ಬದುಕು ಹೀಗೆ ಇರಬೇಕು ಎಂದು ನಿರ್ಧರಿಸುವುದು ನೀವೇ. […]

ಬ್ರಹ್ಮಾವರ: ಹಾರಾಡಿಯ ವಿವಾಹಿತ ಮಹಿಳೆ ನಾಪತ್ತೆ

ಬ್ರಹ್ಮಾವರ: ತಾಲ್ಲೂಕಿನ ಹಾರಾಡಿಯ ಕುಕ್ಕುಡೆಯ ವಿವಾಹಿತ ಮಹಿಳೆ ಸೌಮ್ಯ (23) ಎಂಬುವವರು ಜ. 1ರಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೌಮ್ಯ ಕಳೆದ ಒಂದು ತಿಂಗಳಿನಿಂದ ಬ್ಯುಟಿಷಿಯನ್ ಕೋರ್ಸ್‌ ಮಾಡುತ್ತಿದ್ದರು. ಎಂದಿನಂತೆ ಜ. 1ರಂದು ತರಗತಿಗೆ ತೆರಳಿದ್ದರು. ಹಾಗೆ ಇವತ್ತು ಮನೆಗೆ ಬರುವಾಗ ಸ್ವಲ್ಪ ತಡವಾಗುತ್ತದೆ ಎಂದು ಅಕ್ಕನ ಬಳಿ ಹೇಳಿ ಹೋಗಿದ್ದರು. ಆದರೆ ಬಳಿಕ ಮನೆಗೂ ಬಾರದೆ, ಸಂಬಂಧಿಕರು ಹಾಗೂ ಸ್ನೇಹಿತರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ.

ಶಾಲೆಗೆಂದು ತೆರಳಿದ್ದ ಬಾಲಕ ನಾಪತ್ತೆ

ವಿಟ್ಲ: ಶಾಲೆಗೆ ತೆರಳಿದ್ದ ಬಾಲಕನೊಬ್ಬ ನಾಪತ್ತೆಯಾಗಿರುವ ಘಟನೆ ವಿಟ್ಲದ ಕರೋಪಾಡಿಯಲ್ಲಿ ನಡೆದಿದೆ. ವಿಟ್ಲ ಕರೋಪಾಡಿ ನಿವಾಸಿ ಹನುಮಂತ ಎಂಬವರ ಮಗ ಗಣೇಶ್ (15) ನಾಪತ್ತೆಯಾದ ಬಾಲಕ. ಈತನಿಗೆ ಮನೆಯವರು ಆಲ್ ಲೈನ್ ತರಗತಿಗಾಗಿ ಮೊಬೈಲ್ ಒಂದನ್ನು ತೆಗೆಸಿಕೊಟ್ಟಿದ್ದರು. ಆದರೆ ಆತ ಅದರಲ್ಲಿ ಗೇಮ್ ಆಡುತ್ತಿದ್ದ. ಪೋಷಕರು ಎಷ್ಟೇ ಬುದ್ಧಿವಾದ ಹೇಳಿದರೂ ಆತ ಕೇಳುತ್ತಿರಲಿಲ್ಲ. ಹಾಗಾಗಿ ತಂದೆ ಈ ವಿಷಯವನ್ನು ಶಾಲಾ ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಅವರು ಗಣೇಶನಿಗೆ ಬುದ್ಧಿವಾದ ಹೇಳಿದ್ದರು. ಅಲ್ಲದೆ ಸೋಮವಾರ ಶಾಲೆಗೆ ಬರುವಂತೆ ತಿಳಿಸಿದ್ದರು. […]