ರಂಜಿತ್ ಕಾರ್ಕಳ ನಿರ್ದೇಶನದ ಚಕ್ಷುಷ ಸಿನೆಮಾದ ಹಾಡು ಬಿಡುಗಡೆ

ಉಡುಪಿ: ರಂಜಿತ್ ಕಾರ್ಕಳ ನಿರ್ದೇಶನದ ಚಕ್ಷುಷ ಸಿನೆಮಾದ ಹಾಡು ಇತ್ತೀಚೆಗೆ ಬಿಡುಗಡೆ ಗೊಂಡಿದೆ. ಅರ್.ಕೆ. ಪ್ರೊಡಕ್ಷನ್ಸ್  ಬ್ಯಾನರ್ ನಡಿಯಲ್ಲಿ ಚಿತ್ರ ಮೂಡಿ ಬಂದಿದ್ದು, ಕನ್ನಡದ ಖ್ಯಾತ ಹಿನ್ನೆಲೆ ಗಾಯಕ ಅನಿರುಧ್ ಶಾಸ್ತ್ರಿ ಹಾಡಿರುವ ಹಾಡು ” ಬರೆದು ಹಾಡಿದಂತಿದೆ ” ಹಾಡು ಯುವ ಮನಸ್ಸುಗಳ ತುಮುಲ ಭಾವವನ್ನು ಚಿಗುರಿಸಿದಂತಿದೆ. ನಿರ್ಮಾಪಕ ಸುಪ್ರೀತ್ ಬಿ.ಕೆ, ಲಿರಿಕ್ಸ್  ಪುನೀತ್ ರಾಜ್, ಮ್ಯುಸಿಕ್ ಆದಿಲ್ ನಡಾಪ್ ನೀಡಿದ್ದು ಮನು ಬಿಕೆ ಸಹಕಾರ ನೀಡಿದ್ದಾರೆ. ಚಿತ್ರದಲ್ಲಿ ಅಮಿತ್ ಗಂಗೂರ್, ರಚನ ಜೆ.ಶೆಟ್ಟಿ ಶರ್ಮಿಳಾ […]

ಬಿಜೆಪಿ ಮಹಿಳಾ ಮೋರ್ಚಾ: ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ಕಾರ್ಯಕ್ರಮಕ್ಕೆ ಚಾಲನೆ

ಉಡುಪಿ: ಮಾಜಿ ಪ್ರಧಾನಿ ‘ಭಾರತ ರತ್ನ’ ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಜನ್ಮದಿನಾಚರಣೆಯ ಪ್ರಯಕ್ತ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ಮಣಿಪಾಲದ ಹೊಸ ಬೆಳಕು ಆಶ್ರಯಧಾಮದ ಮೂರು ಮಂದಿ ವಯೋವೃದ್ಧರಿಗೆ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯದಲ್ಲಿ ಕಣ್ಣಿನ ಪೊರೆಯ (Cataract) ಉಚಿತ ಶಸ್ತ್ರಚಿಕಿತ್ಸೆ ಮಾಡುವ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನೇತ್ರತಜ್ಞ ಡಾ. ಕೃಷ್ಣ ಪ್ರಸಾದ್, ಬಿಜೆಪಿ ಜಿಲ್ಲಾ ಮಹಿಳಾ […]

ಉಡುಪಿಯ ಖ್ಯಾತ ವೈದ್ಯ ಡಾ. ರಾಮ ದೇವಾಡಿಗ ಅವರ ಆರೋಗ್ಯ ಸ್ಥಿರವಾಗಿದೆ: ಚಿಕಿತ್ಸೆಗೆ ಸ್ಪಂದನೆ

udupixpress

ಉಡುಪಿ: ನಗರದ ಹೆಸರಾಂತ ವೈದ್ಯ ಡಾ ರಾಮ ದೇವಾಡಿಗ ಅವರು ಆರೋಗ್ಯವಾಗಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರು ಎರಡು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ತಪ್ಪು ಮಾಹಿತಿಯಿಂದ ನಮ್ಮ ವೆಬ್ ಸೈಟ್ ನಲ್ಲಿ ತಪ್ಪಾಗಿ ಸುದ್ದಿ ಪ್ರಕಟಗೊಂಡಿದ್ದು, ಇದಕ್ಕೆ ಸಂಸ್ಥೆಯು ಕ್ಷಮೆಯಾಚಿಸುತ್ತದೆ. ವದಂತಿಗಳಿಗೆ ಕಿವಿಗೊಡ ಬೇಡಿ. ರಾಮ ದೇವಾಡಿಗ ಅವರ ಆರೋಗ್ಯ ಸ್ಥಿರವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತಿದ್ದಾರೆ, ಅವರು ಬೇಗ ಗುಣಮುಖವಾಗಲಿ ಎಂದು ಪ್ರಾರ್ಥಿಸೋಣ..

ಸಂಕ್ರಾಂತಿಗೆ ರಾಜ್ಯದಲ್ಲಿ ಮಹತ್ವದ ಬದಲಾವಣೆಯಾಗಲಿದೆ: ಯತ್ನಾಳ್ ಭವಿಷ್ಯ

ವಿಜಯಪುರ: ಸಂಕ್ರಾಂತಿಗೆ ಸಚಿವ ಸಂಪುಟ ವಿಸ್ತರಣೆ ಮಾತ್ರವಲ್ಲ ಆಗಲ್ಲ. ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕರ ಸಂಕ್ರಾಂತಿಗೆ ಸೂರ್ಯ ತನ್ನ ಪಥವನ್ನು ಬದಲಾಯಿಸಿ ಉತ್ತರಾಯಣ ಆರಂಭವಾಗಲಿರುವುದರಿಂದ ಉತ್ತರ ಕರ್ನಾಟಕಕ್ಕೆ ಒಳಿತಾಗಲಿದೆ ಎಂದರು. ಯಾರಾರ ಹಣೆಬರಹ ಏನೇನಿದೆಯೋ ಗೊತ್ತಿಲ್ಲ. ವಿಜಯಪುರಕ್ಕೆ ಇಷ್ಟು ವರ್ಷಗಳ ಕಾಲ ಆಗಿರುವ ಅನ್ಯಾಯ ಸರಿಯಾಗಲಿದೆ ಎಂದು ಹೇಳಿದರು. ವಿಜಯಪುರದಲ್ಲಿ ನೂತನವಾಗಿ ಆರಂಭವಾಗಿರುವ ಐಆರ್‌ಬಿ ಬೆಟಾಲಿಯನ್‌ ಉದ್ಘಾಟನೆ ಸಂಬಂಧ […]

ಅಡಿಕೆ ಕೊಯ್ಯುವಾಗ ವಿದ್ಯುತ್ ತಂತಿ ತಗುಲಿ ಯುವ ಉದ್ಯಮಿ ಮೃತ್ಯು

ಪುತ್ತೂರು: ಅಲ್ಯೂಮಿನಿಯಂ ಕೊಕ್ಕೆಯ ಮೂಲಕ ಅಡಿಕೆ ಕೊಯ್ಯುತ್ತಿದ್ದ ವೇಳೆ ವಿದ್ಯುತ್ ತಂಗಿ ತಾಗಿ ಉದ್ಯಮಿಯೊಬ್ಬರು ಮೃತಪಟ್ಟ ಘಟನೆ ಪುತ್ತೂರು ಅಜ್ಜಿಕಲ್ಲು ಎಂಬಲ್ಲಿ ಇಂದು ಸಂಭವಿಸಿದೆ. ಮೃತರನ್ನು ಅಜ್ಜಿಕಲ್ಲು ನಿವಾಸಿ ಬಾಬು‌ ಪೂಜಾರಿ ಅವರ ಪುತ್ರ ರವೀಂದ್ರ ಪೂಜಾರಿ (34) ಎಂದು ಗುರುತಿಸಲಾಗಿದೆ‌. ಇವರು ಮನೆಯ ತೋಟದಲ್ಲಿ ಅಡಿಕೆ ಮರ ಏರಿ ಕೊಕ್ಕೆಯ ಮೂಲಕ ಅಡಿಕೆ ಕೊಯ್ಯುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾರೆ. ರವೀಂದ್ರ ಪೂಜಾರಿ ಮಂಗಳೂರು ಬಿಜೈಯಲ್ಲಿ ಕಂಪ್ಯೂಟರ್ ಹಾರ್ಡ್ ಉದ್ಯಮ ನಡೆಸುತ್ತಿದ್ದರು. ಕ್ರಿಸ್ […]