ಡಿ.17ರಂದು ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ ಉಡುಪಿ ಶಾಖೆಯ ಉದ್ಘಾಟನೆ
![](https://udupixpress.com/wp-content/uploads/2020/06/IMG_20201215_140743.jpg)
ಉಡುಪಿ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ ಉಡುಪಿ ಶಾಖೆಯ ಉದ್ಘಾಟನಾ ಸಮಾರಂಭ ಡಿಸೆಂಬರ್ 17ರಂದು ನಡೆಯಲಿದೆ. ಉಡುಪಿ-ಕಲ್ಸಂಕ ಮುಖ್ಯ ರಸ್ತೆಯ ಶಂಕರನಾರಾಯಣ ದೇವಸ್ಥಾನದ ಸಮೀಪದ ಅಜೇಯ್ ಟವರ್ಸ್ ನಲ್ಲಿ ನಿರ್ಮಿಸಿರುವ ಸೊಸೈಟಿಯ ಉಡುಪಿ ಶಾಖೆಯನ್ನು ಗೋವಾ ಕವಳೇ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಮಠದ ಶ್ರೀ ಶಿವಾನಂದ ಸರಸ್ವತಿ ಸ್ವಾಮಿ ಮಹರಾಜ್ ಅಂದು ಬೆಳಿಗ್ಗೆ 10.30ಕ್ಕೆ ಉದ್ಘಾಟಿಸಲಿದ್ದಾರೆ. ಉಡುಪಿ ಶಾಸಕ ಕೆ. ರಘುಪತಿ ಭಟ್, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ನಗರಸಭಾ ಸದಸ್ಯೆ […]
ವಿಧಾನ ಪರಿಷತ್ ನಲ್ಲಿ ಹೈಡ್ರಾಮ: ಸಭಾಪತಿ ಕುರ್ಚಿಗಾಗಿ ಬಿಜೆಪಿ, ಕಾಂಗ್ರೆಸ್ ಸದಸ್ಯರ ಮಧ್ಯೆ ಕಿತ್ತಾಟ
![](https://udupixpress.com/wp-content/uploads/2020/12/Screenshot_20201215_122909-1024x565.jpg)
ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಪಟ್ಟಂತೆ ಆಡಳಿತ ಪಕ್ಷವಾದ ಬಿಜೆಪಿ, ಪ್ರತಿಪಕ್ಷವಾದ ಕಾಂಗ್ರೆಸ್ ನಡುವೆ ಸಂಘರ್ಷಮಯ ವಾತಾವರಣ ನಿರ್ಮಾಣವಾಗಿ ವಿಧಾನ ಪರಿಷತ್‍ನಲ್ಲಿಂದು ಕೋಲಾಹಲ ಉಂಟಾಯಿತು. ಇಂದು ಬೆಳಗ್ಗೆ ಸಭಾಪತಿ ಪೀಠದಲ್ಲಿ ಪ್ರತಾಪ್‍ಚಂದ್ರಶೆಟ್ಟಿ ಅವರನ್ನು ಕೂರಲು ಬಿಡದೆ ಬಿಜೆಪಿ ಸದಸ್ಯರು ಗದ್ದಲ ಮಾಡಿದರು. ಅದಕ್ಕೆ ಕಾಂಗ್ರೆಸ್ ಸದಸ್ಯರು ಪ್ರತಿರೋಧ ವಿಧಾನ ಪರಿಷತ್‍ನಲ್ಲಿ ಅಲ್ಲೋಲ-ಕಲ್ಲೋಲವಾಯಿತು. ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ಅವರು ಒಳಬರಲು ಸಾಧ್ಯವಾಗಲಿಲ್ಲ. ಆ ವೇಳೆ ಸಭಾಪತಿ ಅವರ ಪೀಠದ ಬಳಿ ಕಾಂಗ್ರೆಸ್ ಸದಸ್ಯರು ಧಾವಿಸಿ ಉಪಸಭಾಪತಿ […]
ಹಳೆ ರೇಷ್ಮೆ ಸೀರೆಗೆ ಈ ಹೊಸ ಲುಕ್ ಕೊಟ್ಟು ನೋಡಿ: ಇದು ಹಳೆ ಸೀರೆಯ ಹೊಸ ಮೋಡಿ!
![](https://udupixpress.com/wp-content/uploads/2020/12/6-1024x1024.jpg)
»ಸುಲಭಾ ಆರ್.ಭಟ್, ಉಡುಪಿ ಹಳೆ ರೇಷ್ಮೆ ಸೀರೆಗೆ ಈ ಹೊಸ ಲುಕ್ ಕೊಟ್ಟು ನೋಡಿ.”ವ್ಹಾವ್ ಎಷ್ಟು ಚೆಂದ ಆಯ್ತಲ್ಲಾ ನನ್ನ ಹಳೆ ಸೀರೆಯ ಹೊಸ ಲುಕ್” ಅಂತ ನೀವೇ ನೋಡಿ ಖುಷಿ ಪಡ್ತೀರಿ. ಯಸ್”ಸೀರೆ ಸುಂದರವಾಗಿಯೂ ಆಕರ್ಷಕವಾಗಿಯೂ ಹಾಗೂ ಸ್ತ್ರೀಯರಿಗೆ ಗತ್ತುಗೈರತ್ತುಗಳನ್ನು ನೀಡುವಂತ ಉಡುಗೆ. ಆದರೆ ಕೆಲವೊಮ್ಮೆ ಮತ್ತೆ ಮತ್ತೆ ಹಳೆಯ ಸೀರೆಗಳನ್ನೇ ಉಟ್ಟುಕೊಳ್ಳುವುದಕ್ಕೇ ಬೇಸರವೆಂದೆನಿಸುತ್ತದೆ ಅಲ್ಲವೇ? ಹಾಗಿದ್ದಲ್ಲಿ ಆ ಹಳೆಯ ರೇಷ್ಮೆ ಸೀರೆಗಳನ್ನು ಮರುಬಳಸಬಹುದು. ಇದು ಹೇಗೆ ಸಾಧ್ಯ ಅನ್ನೋ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. […]
ಡಿ. 17ರಂದು ಶ್ರೀದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನೂತನ ಉಡುಪಿ ಶಾಖೆಯ ಉದ್ಘಾಟನೆ
![](https://udupixpress.com/wp-content/uploads/2020/12/IMG_20201215_125714-891x1024.jpg)
ಉಡುಪಿ: ಶ್ರೀದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನೂತನ ಉಡುಪಿ ಶಾಖೆಯ ಉದ್ಘಾಟನಾ ಸಮಾರಂಭ ಡಿಸೆಂಬರ್ 17ರಂದು ನಡೆಯಲಿದೆ. ಉಡುಪಿ-ಕಲ್ಸಂಕ ಮುಖ್ಯ ರಸ್ತೆಯ ಶಂಕರನಾರಾಯಣ ದೇವಸ್ಥಾನದ ಸಮೀಪದ ಅಜೇಯ್ ಟವರ್ಸ್ ನಲ್ಲಿ ನಿರ್ಮಿಸಿರುವ ಸೊಸೈಟಿಯ ಉಡುಪಿ ಶಾಖೆಯನ್ನು ಗೋವಾ ಕವಳೇ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಮಠದ ಶ್ರೀ ಶಿವಾನಂದ ಸರಸ್ವತಿ ಸ್ವಾಮಿ ಮಹರಾಜ್ ಅಂದು ಬೆಳಿಗ್ಗೆ 10.30ಕ್ಕೆ ಉದ್ಘಾಟಿಸಲಿದ್ದಾರೆ. ಉಡುಪಿ ಶಾಸಕ ಕೆ. ರಘುಪತಿ ಭಟ್, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ನಗರಸಭಾ ಸದಸ್ಯೆ […]
ಭೀಕರ ರಸ್ತೆ ಅಪಘಾತ: ಹಿರಿಯ ಆರ್ ಎಸ್ಎಸ್ ಮುಖಂಡ ವೆಂಕಟರಮಣ ಹೊಳ್ಳ ನಿಧನ
![](https://udupixpress.com/wp-content/uploads/2020/12/IMG_20201215_103357.jpg)
ಪುತ್ತೂರು: ರಸ್ತೆ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ಎಸ್) ದ ಹಿರಿಯ ಕಾರ್ಯಕರ್ತರೊಬ್ಬರು ಮೃತಪಟ್ಟ ಘಟನೆ ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿ ಕಬಕ ಸಮೀಪದ ಪೋಳ್ಯ ಎಂಬಲ್ಲಿ ಇಂದು ಮುಂಜಾನೆ ವೇಳೆ ಸಂಭವಿಸಿದೆ. ಮೃತರನ್ನು ಆರ್ ಎಸ್ಎಸ್ ಹಿರಿಯ ಕಾರ್ಯಕರ್ತ, ಬಂಟ್ವಾಳ ನಿವಾಸಿ ವೆಂಕಟರಮಣ ಹೊಳ್ಳ ಎಂದು ಗುರುತಿಸಲಾಗಿದೆ. ಅವರು ಪುತ್ತೂರಿನಿಂದ ಬಂಟ್ವಾಳಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಕಬಕ ಸಮೀಪದ ಪೋಳ್ಯದಲ್ಲಿ ಅಳವಡಿಸಿರುವ ಡಿವೈಡರ್ ಬಳಿ ಈ ದುರ್ಘಟನೆ […]