ಮಂಚಿಯ ಕಳ್ಳ ದಂಪತಿ ಬಂಧನ: 4 ಲಕ್ಷ ಮೌಲ್ಯದ ಸೊತ್ತು ವಶ

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಮನೆ, ದೇವಸ್ಥಾನ ಸೇರಿದಂತೆ ಇತರೆ ವಾಣಿಜ್ಯ ಕೇಂದ್ರಗಳಲ್ಲಿ ಕಳ್ಳತನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮುಲ್ಕಿ ಪೊಲೀಸರು ಧಾರವಾಡದಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ 62 ಗ್ರಾಂ ಚಿನ್ನದ ಆಭರಣ, ಎರಡೂವರೆ ಕಿ.ಗ್ರಾಂ. ಬೆಳ್ಳಿ ವಸ್ತು ಮತ್ತು ಇತರ ವಸ್ತುಸೇರಿ ಸುಮಾರು 4 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳನ್ನು ರಾಜೇಶ್ ನಾಯಕ್ ಅಲಿಯಾಸ್ ರಾಜು ಪಮುದಿ (42) ಹಾಗೂ ಪದ್ಮಾ ಪಮುದಿ (37) ಗುರುತಿಸಲಾಗಿದೆ. ಈ […]

ಗೋ ಕಳ್ಳರಿಗೆ ಸಹಾಯ: ಬಜರಂಗದಳದ ಮಾಜಿ ಸಂಚಾಲಕ ಅರೆಸ್ಟ್

ಉಡುಪಿ: ಗೋವು ಕಳ್ಳರಿಗೆ ನೆರವು ನೀಡಿ ಹಣ ಪಡೆದ ಆರೋಪದಡಿ ಕಾರ್ಕಳ ನಗರ ಭಜರಂಗದಳದ ಮಾಜಿ ಸಂಚಾಲಕ ಅನಿಲ್ ಪ್ರಭು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗೋವುಗಳನ್ನು ಕಳ್ಳತನ ಮಾಡಿದ ಆರೋಪಿಗಳು ನೀಡಿದ ಮಾಹಿತಿಯನ್ನು ಆಧರಿಸಿ ಕಾರ್ಕಳ ಪೊಲೀಸರು ಈತನನ್ನು ಬಂಧನ ಮಾಡಿದ್ದಾರೆ. ‘ನಿಮಗೆ ಪೊಲೀಸರಿಂದ ಯಾವುದೇ ರೀತಿಯ ತೊಂದರೆ ಆಗಲ್ಲ. ಅವರಿಂದ ನಿಮ್ಮನ್ನು ಪಾರು ಮಾಡುತ್ತೇನೆಂದು ಅನಿಲ್ ಗೋಕಳ್ಳರಿಗೆ ಭರವಸೆ ನೀಡಿದ್ದ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದೆ. ಕಾರ್ಕಳದಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮ […]

ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿಯಿಂದ ಪಿಎಸ್ ಐ ಸಕ್ತಿವೇಲು ಅವರಿಗೆ ಸನ್ಮಾನ

ಉಡುಪಿ: ಮಾನವ ಹಕ್ಕು ಗಳ ಭಾರತೀಯ ಮಹಾಮೈತ್ರಿ ವತಿಯಿಂದ ಕೊರೊನಾ ವಾರಿಯರ್ಸ್ ಉಡುಪಿ ನಗರ ಠಾಣೆಯ ಪಿಎಸ್ ಐ ಸಕ್ತಿವೇಲು ಅವರನ್ನು ಸನ್ಮಾನಿಸಲಾಯಿತು. ಮಾನವ ಹಕ್ಕು ಗಳ ಭಾರತೀಯ ಮಹಾಮೈತ್ರಿ ಇದರ ಅಧ್ಯಕ್ಷೆ ಪೂರ್ಣಿಮಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಉದಯ ಕೆ. ಶೆಟ್ಟಿ, ಪದಾಧಿಕಾರಿಗಳಾದ ಬಾಲರಾಜ್, ಪ್ರಸಾದ್ ಪೂಜಾರಿ, ಬಿಂದು ತಂಕಪ್ಪನ್ , ಪ್ರೀತಿ ಉಪಸ್ಥಿತರಿದ್ದರು.

ಉಡುಪಿಯಲ್ಲಿ ಸರಣಿ ಸರಗಳ್ಳತನ; ದೇವಸ್ಥಾನ, ಕೆಲಸಕ್ಕೆ ಹೋಗುವ ಮಹಿಳೆಯರೇ ಟಾರ್ಗೆಟ್

ಉಡುಪಿ: ಬೈಕ್ ನಲ್ಲಿ ಬಂದ ಖದೀಮನೊಬ್ಬ ಮಹಿಳೆಯರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ ಮಾಡಿರುವ ಸರಣಿ ಘಟನೆ ಮಣಿಪಾಲ ಹಾಗೂ ಉಡುಪಿ ಪರಿಸರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬಾಗಿಲು ಕುಕ್ಕುಂಜೆಯ ಮಹಿಳೆಯೊಬ್ಬರು ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬೈಕ್ ನಲ್ಲಿ ಬಂದ ದುಷ್ಕರ್ಮಿ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದುಕೊಂಡಿದ್ದಾನೆ. ಆದರೆ ಈ ವೇಳೆ ಮಹಿಳೆ ಕೂಡಲೇ ಎಚ್ಚೆತ್ತುಕೊಂಡು ಸರವನ್ನು‌ ಬೀಗಿಯಾಗಿ ಹಿಡಿದಿಟ್ಟುಕೊಂಡ ಪರಿಣಾಮ ಸರ ತುಂಡಾಗಿ, ಅರ್ಧ ಸರವನ್ನು ಕಸಿದುಕೊಂಡು […]

ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಪೊಲೀಸರ ದಾಳಿ: ಮೂವರ ಬಂಧನ

ಬೆಳ್ತಂಗಡಿ: ಇಲ್ಲಿನ ಕಲ್ಲಗುಡ್ಡೆ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಜನಾರ್ದನ ಪೂಜಾರಿ(45) ಜನಾರ್ದನ ಇಳಂತಿಲ  (40) ಮತ್ತು ರಾಮಚಂದ್ರ ದೇವಾಡಿಗ (45) ಎಂದು ಗುರುತಿಸಲಾಗಿದೆ. ದಾಳಿ ವೇಳೆ ಇಬ್ಬರು ಯುವತಿಯನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ರಾಮಚಂದ್ರ ದೇವಾಡಿಗ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ […]