ಪರ್ಲಡ್ಕ ನಿವಾಸಿ ಅವಿವಾಹಿತ ಮಹಿಳೆ ನಾಪತ್ತೆ
ಪುತ್ತೂರು: ನಗರದ ಪರ್ಲಡ್ಕ ನಿವಾಸಿ ಅವಿವಾಹಿತ ಮಹಿಳೆ ಶಾರದಾ (55) ಎಂಬುವವರು ನಾಪತ್ತೆಯಾಗಿದ್ದಾರೆ. ಶಾರದಾ ಕಳೆದ ಕೆಲ ಸಮಯಗಳಿಂದ ಸಾಲ್ಮರದಲ್ಲಿರುವ ಸಹೋದರಿ ಪುಷ್ಪಲತಾ ಎಂಬವರೊಂದಿಗೆ ವಾಸವಾಗಿದ್ದರು. ಸೋಮವಾರ ಪೇಟೆಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದ ಅವರು, ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಂದಾಪುರ: ಸೇತುವೆಗೆ ಕಾರು ಡಿಕ್ಕಿ ಹೊಡೆದು ಕೆಎಂಎಫ್ ನಿರ್ದೇಶಕ ಮೃತ್ಯು
ಕುಂದಾಪುರ: ಇಲ್ಲಿನ ಹಾಲಾಡಿ ಸೇತುವೆಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಕೆಎಂಎಫ್ ನಿರ್ದೇಶಕರೊಬ್ಬರು ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ. ಮೃತರನ್ನು ಕೆಎಂಎಫ್ ನಿರ್ದೇಶಕ ಹದ್ದೂರು ರಾಜೀವ ಶೆಟ್ಟಿ ಎಂದು ಗುರುತಿಸಲಾಗಿದೆ. ಶಂಕರನಾರಾಯಣದಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ವಾಪಾಸ್ಸು ಬರುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಶಂಕರನಾರಾಯಣ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ರಾಜೀವ ಶೆಟ್ಟಿ ಅವರು ವಿವಿಧ ಸಮಾಜಸೇವಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ತಾಲೂಕು ಪಂಚಾಯತ್ ಸದಸ್ಯರಾಗಿ, ಕೆ.ಎಂ.ಎಫ್. ನಿರ್ದೇಶಕರಾಗಿ, ಶಂಕರನಾರಾಯಣ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ […]
ಏಡಿ ಹಿಡಿಯಲು ಹೋದ ಬಾಲಕರಿಬ್ಬರು ಬಾವಿಗೆ ಬಿದ್ದು ಮೃತ್ಯು: ಓರ್ವ ಬಾಲಕ ಪ್ರಾಣಾಪಾಯದಿಂದ ಪಾರು
ಬೆಳಗಾವಿ: ತಾಲೂಕಿನ ಬೆಕ್ಕಿನಕೇರಿ ಎಂಬಲ್ಲಿ ಜಮೀನಿನಲ್ಲಿದ್ದ ತೆರೆದ ಬಾವಿಯಲ್ಲಿ ಏಡಿ ಹಿಡಿಯಲು ಹೋದ ಮೂವರು ಬಾಲಕರು ಬಾವಿಗೆ ಬಿದ್ದ ಪರಿಣಾಮ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಓರ್ವ ಬಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ವರದಿಯಾಗಿದೆ. ಮಹಾರಾಷ್ಟ್ರದ ಚಂದಗಡ್ ಗ್ರಾಮದ ನಿವಾಸಿ ಲೋಕೇಶ ಪಾಟೀಲ್ (10) ಹಾಗೂ ಬೆಕ್ಕಿನಕೇರಿ ಗ್ರಾಮದ ನಿಖಿಲ್ ಬೊಂದ್ರೆ (7) ಎಂದು ಮೃತ ಬಾಲಕರು. ಶಾಲೆಗೆ ರಜೆ ಇರುವ ಕಾರಣ ಲೋಕೇಶ್ ಬೆಕ್ಕಿನಕೇರಿಯ ತನ್ನ ಸಂಬಂಧಿಗಳ ಮನೆಗೆ ಬಂದಿದ್ದನು. ಮಂಗಳವಾರ ಬೆಳಿಗ್ಗೆ ಮೂವರು ಬಾಲಕರು […]
ಬಣ್ಣದ ಬೆರಗಿನ ಯುವ ಕಲಾಕಾರ: ಇದು ಸುಳ್ಯದ ಕೌಶಿಕ್ ಅವರ ಚಮತ್ಕಾರ!
ಇವರ ಕೈಯಲ್ಲಿ ಮೂಡಿದ ಚಿತ್ರಗಳನ್ನು ನೋಡುತ್ತಿದ್ದರೆ ಆ ಚಿತ್ರದಲ್ಲಿರುವ ವ್ಯಕ್ತಿಗಳೇ ಕಣ್ಣೆದುರು ನಿಜಕ್ಕೂ ಬಂದಂತನ್ನಿಸುತ್ತದೆ.ಇಷ್ಟು ಚೆಂದ ಚಿತ್ರವನ್ನು ಕೈಯಲ್ಲಿ ಬಿಡಿಸಿದ್ದಾ ಎನ್ನುವ ಅಚ್ಚರಿ ಕೂಡ ನಮ್ಮಲ್ಲಿ ಹುಟ್ಟುತ್ತದೆ. ಇಂತಹ ಅಪೂರ್ವ ಚಿತ್ರ ಬರೆಯುವ ಈ ಕಲಾಕಾರನ ಹೆಸರು ಕೌಶಿಕ್ ಕೆ. ಎಂ. ಸುಳ್ಯ ತಾಲೂಕಿನ ಪಂಜ ನಿವಾಸಿವಾಗಿರುವ ಕೌಶಿಕ್ ಅವರು ಬಿಡಿಸುವ ಚಿತ್ರಗಳು ತಮ್ಮ ಅಪೂರ್ವ ಕಲಾವಂತಿಕೆಯಿಂದ,ಕಲಾತ್ಮಕ ನೋಟದಿಂದ ಗಮನಸೆಳೆಯುತ್ತದೆ. ಅಂದ ಹಾಗೆ ಕೌಶಿಕ್, ಚಿತ್ರಕಲೆಯನ್ನು ಅಭ್ಯಾಸ ಮಾಡಲು ತರಗತಿಗಳಿಗೆ ಹೋದವರಲ್ಲ, ಬಣ್ಣಗಳೊಡನೆ ಆಟವಾಡುತ್ತ ಚಿತ್ರಕಲೆಯನ್ನು ಅಭ್ಯಾಸ […]
ಬಾವಿಗೆ ಬಿದ್ದ ಮದುವೆ ಕಾರು: 6 ಮಂದಿ ದುರ್ಮರಣ, ಮೂವರು ಗಂಭೀರ
ಮಧ್ಯಪ್ರದೇಶ: ಮಧ್ಯಪ್ರದೇಶದ ಛತ್ತರ್ ಪುರ ಎಂಬಲ್ಲಿ ಮದುವೆ ಮೆರವಣಿಗೆ ಮುಗಿಸಿಕೊಂಡು ಬರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯವಾಗಿರುವ ಭೀಕರ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಮಹರಾಜ್ ಪುರದ ಪೊಲೀಸರು ಆಗಮಿಸಿ ಬಾವಿಯಲ್ಲಿ ಮೃತಪಟ್ಟಿದ್ದ ಆರು ಮಂದಿಯ ಮೃತದೇಹಗಳನ್ನು ಮೇಲೆತ್ತಿದ್ದಾರೆ. ಗಂಭೀರ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.