ಮೆದುಳಿನ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಕಿಯ ಚಿಕಿತ್ಸೆಗೆ ಆರ್ಥಿಕ ನೆರವು ಯಾಚನೆ

ಉಡುಪಿ: ಮಾರಕ ಮೆದುಳಿನ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಪಡುಬಿದ್ರಿ ಗುಡ್ಡೆಚ್ಚಿಯ ನಿವಾಸಿ ಸುನಂದ ಆಚಾರ್ಯ ಅವರ ಮಗಳಾದ 8 ವರ್ಷದ ತ್ರಿಶಾ ಆಚಾರ್ಯ ಅವರ ಚಿಕಿತ್ಸೆಗೆ ಆರ್ಥಿಕ‌ ನೆರವಿಗಾಗಿ ಸಹಾಯಹಸ್ತ ಚಾಚಿದ್ದಾರೆ. ಅತ್ಯಂತ ಕಡುಬಡತನದಲ್ಲಿ ಜೀವನ ಸಾಗಿಸುತ್ತಿರುವ ಈ ಕುಟುಂಬಕ್ಕೆ ವಿಧಿ ನೀಡಿದ ಪರೀಕ್ಷೆ ಎದುರಿಸಲಾರದೆ ಒದ್ದಾಡುತ್ತಿದ್ದಾರೆ. ತ್ರಿಶಾ ಆಚಾರ್ಯ ಅವರು ಸದ್ಯ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗೆ ದೊಡ್ಡ ಮೊತ್ತದ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಕಡುಬಡತನದಲ್ಲಿ ಇರುವ ಕುಟುಂಬಕ್ಕೆ ದೊಡ್ಡ […]

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ: ಏಳು ವರ್ಷ ಜೈಲು, ₹5 ಲಕ್ಷ ದಂಡ

ಬೆಂಗಳೂರು: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಇಂದು ನಡೆದ ವಿಧಾನಸಭೆಯ ಕಲಾಪದಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ ಮಾಡಲಾಯಿತು. ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾನ್ ಗೋ ಹತ್ಯೆ ನಿಷೇಧ ವಿಧೇಯಕ ಮಂಡಿಸಿದರು. ಮಸೂದೆ ಮಂಡನೆಗೂ ಮುನ್ನ ವಿಧಾನಸೌಧದ ಪೂರ್ವ ದ್ವಾರದಲ್ಲಿ ಸಚಿವರಿಂದ ಗೋ ಪೂಜೆ ನಡೆಯಿತು. ಗೋ ಹತ್ಯೆ ವಿಷೇಧ ವಿಧೇಯಕ ಮಂಡನೆಗೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಹಸು, ಕರು, ಎತ್ತು, ಎಮ್ಮೆ, ಕೋಣವನ್ನು ವಧೆ ಮಾಡುವುದಕ್ಕೆ ರಾಜ್ಯದಲ್ಲಿ ನಿಷೇಧ ವಿಧಿಸಲಾಗಿದೆ. ತಪ್ಪಿತಸ್ಥರಿಗೆ […]

ಗ್ರಾಪಂ ಚುನಾವಣೆ: ತಾಲ್ಲೂಕುವಾರು ಜೆಡಿಎಸ್ ಉಸ್ತುವಾರಿಗಳ ನೇಮಕ

ಉಡುಪಿ: ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ತಾಲ್ಲೂಕುವಾರು ಉಸ್ತುವಾರಿಗಳನ್ನು ನೇಮಕಗೊಳಿಸಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಆದೇಶ ಹೊರಡಿಸಿದ್ದಾರೆ. ಕಾರ್ಕಳ ಮತ್ತು ಹೆಬ್ರಿ: ಶ್ರೀಕಾಂತ ಹೆಬ್ರಿ , ಜಯರಾಮ ಆಚಾರ್ಯ, ಸಂಪತ್ ಭಂಡಾರಿ. ಉಡುಪಿ ಮತ್ತು ಬ್ರಹ್ಮಾವರ: ಬಾಲಕೃಷ್ಣ ಆಚಾರ್ಯ ಎಂ, ಗಂಗಾಧರ ಬಿರ್ತಿ, ಜಯಕುಮಾರ್ ಪರ್ಕಳ, ನಾಗರಾಜ ಭಟ್, ಇಕ್ಬಾಲ್ ಆತ್ರಾಡಿ, ರವಿರಾಜ್ ಸಾಲಿಯಾನ್. ಬೈಂದೂರು: ಶ್ರೀಕಾಂತ ಅಡಿಗ, ಸಂದೇಶ್ ಭಟ್, ಮಂಜಯ್ಯ ಶೆಟ್ಟಿ, ಬಿ.ಟಿ. ಮಂಜುನಾಥ್, ರವಿ ಶೆಟ್ಟಿ, ನಿತಿನ್ ಶೆಟ್ಟಿ, ಗುರುರಾಜ್ […]

ಉಡುಪಿ: ಕೆಮ್ಮು, ಶೀತ, ಜ್ವರ ಲಕ್ಷಣವಿರುವ ರೋಗಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ-ಡಿಸಿ

ಉಡುಪಿ: ಶೀತ, ಕೆಮ್ಮು, ಜ್ವರ ಹಾಗೂ ಐ.ಎಲ್.ಐ ಚಿಕಿತ್ಸೆಗೆ ಬರುವ ರೋಗಿಗಳಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಗಳನ್ನು ಮಾಡಿಸಬೇಕು. ತಪ್ಪಿದ್ದಲ್ಲಿ ಚಿಕಿತ್ಸೆ ನೀಡದ ಖಾಸಗಿ ಆಸ್ಪತ್ರೆಗಳ ನೊಂದಣಿಯನ್ನು ರದ್ದು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೊಂದಣಾ ಪ್ರಾಧಿಕಾರದ ಕುಂದುಕೊರತೆ ನಿವಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಜನರು ಕೋವಿಡ್ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದಾಗಿ […]

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆ: ಬಿಜೆಪಿ ಮೇಲುಗೈ, ಗೆಹ್ಲೋಟ್‌ ಗೆ ಹಿನ್ನಡೆ

ಜೈಪುರ: ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ಸಿಎಂ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ಭಾರೀ ಹಿನ್ನಡೆ ಉಂಟಾಗಿದೆ. 4,371 ಪಂಚಾಯತ್‌ ಸಮಿತಿ ಸ್ಥಾನಗಳ ಪೈಕಿ ಬಿಜೆಪಿ 1,835, ಕಾಂಗ್ರೆಸ್‌ 1,718 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.  ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ 56 ಮಂದಿ, 420 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.  ಜಿಲ್ಲಾ ಪರಿಷತ್‌ ಒಟ್ಟು 636 ಸ್ಥಾನಗಳ ಪೈಕಿ ಬಿಜೆಪಿ 266, ಕಾಂಗ್ರೆಸ್‌ 204 ಸ್ಥಾನಗಳನ್ನು ಗೆದ್ದುಕೊಂಡಿದೆ. ಪಂಚಾಯತ್ ಸಮಿತಿ ಮತ್ತು ಜಿಲಾ ಪರಿಷತ್ […]