ಮರಗಳ್ಳರಿಗೆ, ಕಾಡು ದೋಚುವವರಿಗೆ ಸಿಂಹಸ್ವಪ್ನರಾಗಿರುವ ದಕ್ಷ ಅರಣ್ಯಾಧಿಕಾರಿ ಮುನಿರಾಜ್ ಅವರಿಗೆ ಮುಖ್ಯಮಂತ್ರಿ ಪದಕ

ಬೆಂಗಳೂರು: 2018-19 ಸಾಲಿನ ಅರಣ್ಯ ಸಂರಕ್ಷಣೆ ವಿಭಾಗದಲ್ಲಿ  ಮುಖ್ಯಮಂತ್ರಿ ಪದಕವನ್ನು ದಕ್ಷ ಅರಣ್ಯಾಧಿಕಾರಿ, ಈ ಹಿಂದೆ ಹೆಬ್ರಿ ಅರಣ್ಯಾಧಿಕಾರಿಯಾಗಿ ಮರಗಳ್ಳರಿಗೆ ಸಿಂಹಸ್ವಪ್ನರಾಗಿದ್ದ ಮುನಿರಾಜ್ ಅವರಿಗೆ ನೀಡಲಾಗಿದೆ. ಶಿರಸಿ ಸಮೀಪದ ಅರಣ್ಯ ಇಲಾಖೆಯ ವ್ಯಾಪ್ತಿಯ 500 ಎಕರೆ ಒತ್ತುವರಿ ತೆರವು, ದೊಡ್ಡಬಳ್ಳಾಪುರ 400 ಎಕರೆ ಜಾಗವನ್ನು ಒತ್ತುವರಿ ತೆರವುಗೊಳಿಸಿ ಭ್ರಷ್ಟ ರಾಜಕಾರಣಿಗಳಿಗೆ, ಮರಗಳ್ಳರಿಗೆ  ಸಿಂಹಸ್ವಪ್ನವಾಗಿ ಕಾಡುತ್ತಿದ್ದವರು ಮುನಿರಾಜ್.ಇದೀಗ ಈ ದಕ್ಷ ಅಧಿಕಾರಿಯ ಸಾಧನೆ ಗುರುತಿಸಿ ಮುಖ್ಯಮಂತ್ರಿ ಪದಕವನ್ನು ಅರಣ್ಯ ಅಧಿಕಾರಿಗೆ ಮೊದಲನೆಯ ಬಾರಿ ನೀಡಲಾಗಿದೆ. ವಿಧಾನ ಸೌದದ ಬಾಂಕ್ವೆಟ್ […]

ಕಾರ್ಕಳ ಬಿಜೆಪಿ ಎಸ್ಟಿ ಮೋರ್ಚಾದಿಂದ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ 145ನೇ ಜಯಂತಿ ಆಚರಣೆ

ಕಾರ್ಕಳ: ಕಾರ್ಕಳ ಬಿಜೆಪಿ ಎಸ್ಟಿ ಮೋರ್ಚಾ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ಬುಡಕಟ್ಟು ಸಮುದಾಯದ ನಾಯಕ ಭಗವಾನ್ ಬಿರ್ಸಾ ಮುಂಡಾ 145 ನೇ ಜನ್ಮಜಯಂತಿ ನವೆಂಬರ್ 22ರಂದು ವಿಕಾಸ ಶಾಸಕರ ಕಚೇರಿಯಲ್ಲಿ ಆಚರಣೆ ಮಾಡಲಾಯಿತು. ಕಲಬುರ್ಗಿ ಸಂಸದ ಡಾ. ಉಮೇಶ್ ಜಾಧವ್ ಮಾತನಾಡಿ, ಬಿರ್ಸಾ ಮುಂಡಾ ಅತ್ಯಂತ ಪರಿಣಾಮಕಾರಿಯಾಗಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಿದ ಮಹಾನ್ ನಾಯಕ. ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸಿ ಕೊಡುವಲ್ಲಿ ಈತ ಮೊದಲಿಗ. 25 ವರ್ಷ ಕಾಲ ಬದುಕಿದರೂ ಆತನ ಜೀವಿತಾವಧಿಯಲ್ಲಿ […]

ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ ನಿಧನ

ನವದೆಹಲಿ: ಅಸ್ಸಾಂ ರಾಜ್ಯದ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ (84) ಅವರು ಬಹು ಅಂಗಾಂಗಗಳ ವೈಫಲ್ಯದಿಂದ ಇಂದು ಸಂಜೆ ನಿಧನ ಹೊಂದಿದರು. ಕಾಂಗ್ರೆಸ್ ಮುಖಂಡರು ಆಗಿರುವ ಗೊಗೋಯಿ ಅವರು ನವೆಂಬರ್ 2ರಿಂದ ಗುಹಾಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಎರಡು ತಿಂಗಳ ಚಿಕಿತ್ಸೆ ಬಳಿಕ ಕೊರೊನಾದಿಂದ ಚೇತರಿಸಿಕೊಂಡಿದ್ದ ತರುಣ್ ಗೊಗೊಯಿ ಅವರು ಅಕ್ಟೋಬರ್ 25ರಂದು ಬಿಡುಗಡೆಯಾಗಿದ್ದರು. ಆದರೆ ಕೊರೊನಾ ಬಳಿಕದ ಸಮಸ್ಯೆಗಳಿಗೀಡಾಗಿದ್ದ ತರುಣ್ ಗೊಗೊಯಿ ಅವರು ನ. 2ರಂದು […]

ಉಡುಪಿ: ಡೈರಿ ಫಾರ್ಮ್, ಗೋಶಾಲೆಗಳ ನೋಂದಣಿಗೆ ಸೂಚನೆ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿರುವ ಹೈನುಗಾರಿಕೆ ತಾಣಗಳು ಹಾಗೂ ಗೋಶಾಲೆಗಳ ಬಗ್ಗೆ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಜಿಲ್ಲೆಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಸಬೇಕು ಎಂದು ನಗರಸಭೆಯ ಪೌರಾಯುಕ್ತ ಆನಂದ್ ಕಲ್ಲೋಳಿಕರ್ ಸೂಚಿಸಿದ್ದಾರೆ. ನಗರಸಭಾ ವ್ಯಾಪ್ತಿಯಲ್ಲಿರುವ ಎಲ್ಲಾ ಹೈನುಗಾರಿಕೆ ತಾಣಗಳು ಹಾಗೂ ಗೋಶಾಲೆಗಳು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆನ್‌ಲೈನ್ ಮೂಲಕ ನೊಂದಣಿ ಮಾಡಿಕೊಳ್ಳಬೇಕು ಅಥವಾ ಆನ್‌ಲೈನ್ ನೋಂದಣಿ ಮಾಡಿಕೊಳ್ಳುವವರೆಗೆ ಆಫ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. 10 ಕ್ಕಿಂತ ಹೆಚ್ಚು ಪ್ರಾಣಿಗಳನ್ನು ಹೊಂದಿರುವ ಡೈರಿ ಫಾರ್ಮ್ ಗಳು ಹಾಗೂ […]

ಕೂಡ್ಲು ಫಾಲ್ಸ್: ದುಬಾರಿ ಪ್ರವೇಶ ಶುಲ್ಕ ಆದೇಶ ಕೈಬಿಟ್ಟ ಇಲಾಖೆ

ಹೆಬ್ರಿ: ಸ್ಥಳೀಯರು ಹಾಗೂ ಪ್ರವಾಸಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ ಕೂಡ್ಲು ಫಾಲ್ಸ್‌ನ ದುಬಾರಿ ಪ್ರವೇಶ ಶುಲ್ಕವನ್ನು ಅರಣ್ಯ ಇಲಾಖೆ ಕೈಬಿಟ್ಟಿದೆ. ಹೆಬ್ರಿ ಸೋಮೇಶ್ವರ ವನ್ಯಜೀವಿ ವಲಯ ವ್ಯಾಪ್ತಿಯ ಅಭಯಾರಣ್ಯದಲ್ಲಿ ಇರುವ ಕೂಡ್ಲು ಫಾಲ್ಸ್‌ನ ಪ್ರವೇಶ ಶುಲ್ಕವನ್ನು ಕೊರೊನಾ ಲಾಕ್ ಡೌನ್ ಬಳಿಕ ₹ 50 ಬದಲು ಮೂರು ಪಟ್ಟು ಅಂದರೆ ₹ 200 ಹೆಚ್ಚಿಸಿ ಆದೇಶ ಹೊರಡಿಸಲಾಗಿತ್ತು. ನವೆಂಬರ್ ಮೊದಲ ವಾರದಿಂದ ಭಾರತೀಯರು ಒಬ್ಬರಿಗೆ ₹ 200, ಮಕ್ಕಳಿಗೆ ಒಬ್ಬರಿಗೆ ₹ 175, ವಿದೇಶಿಗರಿಗೆ ಒಬ್ಬರಿಗೆ […]