ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಗೆ ₹ 3.56 ಕೋಟಿ ನಿವ್ವಳ ಲಾಭ: ಯಶ್ ಪಾಲ್ ಸುವರ್ಣ

ಉಡುಪಿ: ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ 2019-20 ನೇ ಸಾಲಿನಲ್ಲಿ ₹ 178 ಕೋಟಿ ವ್ಯವಹಾರದ ಮೂಲಕ ₹ 3.56 ಕೋಟಿ ನಿವ್ವಳ ಲಾಭಗಳಿಸಿದೆ. ಕರ್ನಾಟಕ ರಾಜ್ಯ ಸರಕಾರದ ಮೀನುಗಾರಿಕಾ ಇಲಾಖೆ, ಸಂಸ್ಥೆಯ ಸದಸ್ಯ ಸಹಕಾರಿ ಸಂಸ್ಥೆಗಳು, ವೈಯಕ್ತಿಕ ಸದಸ್ಯರು ಹಾಗೂ ಸಮಸ್ತ ಮೀನುಗಾರರ ಸಹಕಾರದಿಂದ ಮೀನುಮಾರಾಟ, ಡೀಸಿಲ್ ಮಾರಾಟ, ಬ್ಯಾಂಕಿಂಗ್ ವ್ಯವಹಾರ, ಮೊಬಿಲ್ ಎಣ್ಣೆ ಮಾರಾಟ, ಸೀಮೆ ಎಣ್ಣೆ ಹಾಗೂ ಮೀನುಗಾರಿಕಾ ಸಲಕರಣೆಗಳ ಮಾರಾಟ ಮತ್ತು ಮಂಜುಗಡ್ಡೆ ವ್ಯವಹಾರಗಳಿಂದ ₹ […]

ಕುಂದಾಪುರ: ಕಡಲಿನಲ್ಲಿ ಮುಳುಗಿ ಓರ್ವ ಮೃತ್ಯು, ಇನ್ನೋರ್ವನ ರಕ್ಷಣೆ

ಕುಂದಾಪುರ: ಸಮುದ್ರದಲ್ಲಿ ಈಜಲು ಹೋದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕುಂದಾಪುರದ ಎಂಕೋಡಿ ಕಡಲ ತೀರದಲ್ಲಿ ಮಧ್ಯಾಹ್ನ ಸಂಭವಿಸಿದೆ. ನಳಗುಂದ ತಾಲೂಕಿನ ಮಂಜು (38) ಮೃತ ದುರ್ದೈವಿ. ಪತ್ನಿ ಜೊತೆ ಮಂಜು ಬೀಚ್‌ಗೆ ತೆರಳಿದ್ದು, ಈ ವೇಳೆ ಮಂಜು ಹಾಗೂ ಇನ್ನೋರ್ವ ವ್ಯಕ್ತಿ ಈಜಲು ಸಮುದ್ರಕ್ಕೆ ಇಳಿದಿದ್ದಾರೆ. ಆಗ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿದ ಮಂಜು ನೀರಿನಲ್ಲಿ ಮುಳುಗಿದ್ದಾನೆ. ಆತನ ಜೊತೆಗಿದ್ದ ವ್ಯಕ್ತಿ ಮಂಜುವನ್ನು ರಕ್ಷಣೆಗೆ ಧಾವಿಸಿದ್ದು, ಆತ ಕೂಡ ಮುಳುಗಿದ್ದಾನೆ. ಕೂಡಲೇ ಸ್ಥಳೀಯರಾದ ಹಸೈನಾರ್, […]

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಕೆ. ಜಯಪ್ರಕಾಶ್ ಹೆಗ್ಡೆ ನೇಮಕ

ಉಡುಪಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ‌. ಜಯಪ್ರಕಾಶ್ ಹೆಗ್ಡೆ ಅವರು ಬ್ರಹ್ಮಾವರ ಕ್ಷೇತ್ರದಿಂದ ಮೂರು ಬಾರಿ‌ ಶಾಸಕರಾಗಿ ಆಯ್ಕೆಯಾಗಿದ್ದರು. ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದರು. ಅಲ್ಲದೆ, ಮೀನುಗಾರಿಕಾ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಕಳೆದ ಕೆಲ ವರ್ಷಗಳ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

ಡಿಸೆಂಬರ್ ಅಂತ್ಯದವರೆಗೂ ಶಾಲಾ ಕಾಲೇಜುಗಳ ಆರಂಭವಿಲ್ಲ: ಮಹತ್ವದ ನಿರ್ಧಾರ ಕೈಗೊಂಡ ಸರ್ಕಾರ

ಬೆಂಗಳೂರು: ಮಕ್ಕಳ ಹಿತದೃಷ್ಟಿಯಿಂದ ಡಿಸೆಂಬರ್ ಅಂತ್ಯದವರೆಗೆ ಶಾಲಾ ಕಾಲೇಜುಗಳನ್ನು ಆರಂಭಿಸದಿರಲು ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಇಂದು ತಜ್ಞರೊಂದಿಗೆ ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಡಿಸೆಂಬರ್​ ಕೊನೆಯಲ್ಲಿ ಮತ್ತೊಮ್ಮೆ ತಜ್ಞರೊಂದಿಗೆ ಸಭೆ ನಡೆಸಿ ಬಳಿಕ ಶಾಲಾ ಆರಂಭಿಸುವ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು. ಕೊರೊನಾ ಸೋಂಕಿನ ಕಾರಣದಿಂದಾಗಿ ಹಲವು ಪಾಲಕರು ಆತಂಕ ವ್ಯಕ್ತಪಡಿಸಿದ್ದರು. ಅಲ್ಲದೇ, ತಜ್ಞರೂ ಕೂಡ ಸಮ್ಮತಿ ಸೂಚಿಸಲಿಲ್ಲ. ಈ ಎಲ್ಲ ಕಾರಣಗಳನ್ನು ಪರಿಗಣಿಸಿ ಸಭೆಯಲ್ಲಿ ಯಾವುದೇ ಶಾಲೆ […]

ಕಾಪು: ಲಾರಿಯ ಚಕ್ರಕ್ಕೆ ಸಿಲುಕಿ‌ ಸ್ಕೂಟರ್ ಸವಾರ ಸಾವು

ಕಾಪು: ಸ್ಕೂಟರ್ ಗೆ ಲಾರಿಯ ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಚಕ್ರಕ್ಕೆ ಸಿಲುಕಿ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಹೆಜಮಾಡಿ ಅಡ್ಕ ಹೌಸ್ ನಿವಾಸಿ ವಾಸು ಡಿ. ಕೋಟ್ಯಾನ್ (65) ಮೃತ ದುರ್ದೈವಿ. ಇವರು ಉಚ್ಚಿಲ ಪೇಟೆಯಿಂದ ಪಡುಬಿದ್ರಿ ಕಡೆಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಸ್ಕೂಟರ್ ನ ನಿಯಂತ್ರಣ ಕಳೆದುಕೊಂಡು ಮಂಗಳೂರು ಕಡೆಗೆ ಹೋಗುತ್ತಿದ್ದ ಲಾರಿಗೆ ಸ್ಕೂಟರ್ ಅಪ್ಪಳಿಸಿದ್ದು, ಇದರ ಪರಿಣಾಮ ಸವಾರ […]