ಉಡುಪಿ: ರಸ್ತೆಬದಿ ನಿಂತಿದ್ದ ಕಾರಿಗೆ ಡಿಕ್ಕಿಹೊಡೆದ ಆಟೊರಿಕ್ಷಾ; ಚಾಲಕ ಸಾವು
ಉಡುಪಿ: ರಸ್ತೆಯ ಬದಿಯಲ್ಲಿ ನಿಲುಗಡೆಯಾಗಿದ್ದ ಕಾರಿಗೆ ಆಟೊ ರಿಕ್ಷಾವೊಂದು ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಗುಂಡಿಬೈಲು ರಸ್ತೆಯಲ್ಲಿ ಸಂಭವಿಸಿದೆ. ಮೂಡುಬೆಟ್ಟು ನಿವಾಸಿ ಸುನಿಲ್ (44) ಮೃತ ರಿಕ್ಷಾ ಚಾಲಕ. ರಿಕ್ಷಾ ಚಾಲಕ ಸುನಿಲ್ ಅಂಬಾಗಿಲಿನಿಂದ ಉಡುಪಿ ಕಡೆಗೆ ಬಾಡಿಗೆಗೆ ಬರುತ್ತಿದ್ದು, ಗುಂಡಿಬೈಲಿನ ನಾಗನಕಟ್ಟೆ ಬಳಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ರಿಕ್ಷಾ ಡಿಕ್ಕಿ ಹೊಡೆದಿದೆ. ಇದರಿಂದ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಸ್ಥಳೀಯರು ಆತನನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. […]
ಇಂಡಿಯಾ ಟುಡೆ-ಲೋಕನೀತಿ-ಸಿಎಸ್ ಡಿಎಸ್ ಬಿಹಾರ ಚುನಾವಣಾಪೂರ್ವ ಸಮೀಕ್ಷೆ; ಯಾವ ಪಕ್ಷಕ್ಕೆ ಎಷ್ಟು ಸೀಟು.?
ಪಟ್ನಾ: ಬಿಹಾರ ವಿಧಾನಸಭೆಗೆ ಸಂಬಂಧಿಸಿ ಇಂಡಿಯಾ ಟುಡೆ, ಲೋಕನೀತಿ ಮತ್ತು ಸಿಎಸ್ ಡಿಎಸ್ ಜಂಟಿಯಾಗಿ ನಡೆಸಿದ ಚುನಾವಣಾಪೂರ್ವ ಸಮೀಕ್ಷೆಗಳು ಹೊರಬಿದ್ದಿದ್ದು, ಆಡಳಿತಾರೂಢ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಮೈತ್ರಿಕೂಟವು 133ರಿಂದ 143 ಸೀಟುಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಹೇಳಿದೆ. 243 ಸೀಟುಗಳ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು 122 ಮ್ಯಾಜಿಕ್ ಸಂಖ್ಯೆ ತಲುಪಬೇಕಿದೆ. ಎನ್ ಡಿಎ ಮೈತ್ರಿ ಕೂಟಕ್ಕೆ ಶೇ. 38 ರಷ್ಟು ಮತ ಸಿಗಲಿದೆ. ಆರ್ ಜೆಡಿ ಹಾಗೂ ಕಾಂಗ್ರೆಸ್ ಮಹಾಘಟಬಂಧನ್ […]
ಲಾಕ್ ಡೌನ್ ಮಾತ್ರ ತೆರವುಗೊಂಡಿದೆ, ಕೊರೊನಾ ಇನ್ನೂ ಹೋಗಿಲ್ಲ: ಜನತೆಗೆ ಜಾಗೃತೆಯ ಪಾಠ ಹೇಳಿದ ಪ್ರಧಾನಿ ಮೋದಿ
ಬೆಂಗಳೂರು: ದೇಶದಲ್ಲಿ ಲಾಕ್ಡೌನ್ ಅನ್ನು ತೆರವುಗೊಳಿಸಲಾಗಿದೆ. ಆದರೆ, ಕೊರೊನಾ ಇಲ್ಲಿಂದ ಹೊರಗೆ ಹೋಗಿಲ್ಲ. ಹಾಗಾಗಿ ಸಾಲು ಸಾಲು ಹಬ್ಬಗಳು ಬರುತ್ತಿರುವ ಈ ಸಮಯದಲ್ಲಿ ದೇಶದ ಜನರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಜನತೆಗೆ ಕರೆ ನೀಡಿದರು. ಅವರು ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದರು. ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟ ನಡೆಯುತ್ತಿದ್ದು, ನಮ್ಮ ಜವಾಬ್ದಾರಿ ನಿರ್ವಹಿಸಲು ಮತ್ತು ಜೀವನಕ್ಕೆ ಹೊಸ ಗತಿ ಕೊಡಲು ಪ್ರತಿದಿನ ಮನೆಯಿಂದ ಹೊರಗೆ ಬರಬೇಕಿದೆ. ನಾವು ಮನೆಯಿಂದ ಹೊರಗೆ […]
ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿಯಲ್ಲೇ ಪ್ರಯತ್ನ ನಡೆಯುತ್ತಿದೆ: ಸಿದ್ದರಾಮಯ್ಯ
ಬಾಗಲಕೋಟೆ: ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿಯಲ್ಲೇ ಪ್ರಯತ್ನ ನಡೆದಿರುವುದು ನಿಜ. ಆದರೆ ಯಾವಾಗ ಇಳಿಸ್ತಾರೆ, ಯಾರನ್ನು ಸಿಎಂ ಮಾಡ್ತಾರೆ ಅಂತ ನನಗೆ ಗೊತ್ತಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಯಡಿಯೂರಪ್ಪ ಜಾಸ್ತಿ ದಿನ ಸಿಎಂ ಸ್ಥಾನದಲ್ಲಿ ಇರೊಲ್ಲ ಎಂದು ಶಾಸಕ ಬಸನಗೌಡ ಯತ್ನಾಳ್ ಹೇಳಿಕೆಗೆ ಬಾದಾಮಿ ಪಟ್ಟಣದಲ್ಲಿ ಮಂಗಳವಾರ ಪ್ರತಿಕ್ರಿಯಿಸಿದರು. ನಾವಂತೂ (ಕಾಂಗ್ರೆಸ್) ಸರ್ಕಾರ ಬೀಳಿಸೋಕೆ ಹೋಗೊಲ್ಲ. ಬಿಜೆಪಿಯವರ ಆಂತರಿಕ ತಿಕ್ಕಾಟದಿಂದ ಸಕಾ೯ರ ಬಿದ್ದು ಹೋದರೆ ನಾವು ಚುನಾವಣೆ ಎದುರಿಸಲು […]
ಕಾಂಗ್ರೆಸ್ ಮುಖಂಡ ಕಮಲನಾಥ್ ‘ಐಟಂ’ ಹೇಳಿಕೆಗೆ ರಾಹುಲ್ ಗಾಂಧಿ ಆಕ್ಷೇಪ
ತಿರುವನಂತಪುರಂ: ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಬಿಜೆಪಿ ಅಭ್ಯರ್ಥಿ ಇಮಾರತಿ ದೇವಿ ವಿರುದ್ಧ ಕೀಳುಮಟ್ಟದ ಭಾಷೆ ಪ್ರಯೋಗಿಸಿರುವ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದು, ಇದೊಂದು ದುರದೃಷ್ಟಕರ ಸಂಗತಿ ಎಂದು ಹೇಳಿದ್ದಾರೆ. ಇಂದು ಕೇರಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಮಲನಾಥ್ ಅವರು ನಮ್ಮದೇ ಪಕ್ಷದವರು. ಆದರೆ ವೈಯಕ್ತಿವಾಗಿ ಅವರು ಮಾಡಿರುವ ಪದ ಬಳಕೆಯ ಬಗ್ಗೆ ನನಗೆ ಆಕ್ಷೇಪವಿದೆ. ಅವರು ಯಾರೇ ಆಗಿದ್ದರೂ ಅಂಥ ಮಾತುಗಳನ್ನು […]