ಇಂಡಿಯಾ ಟುಡೆ-ಲೋಕನೀತಿ-ಸಿಎಸ್ ಡಿಎಸ್ ಬಿಹಾರ ಚುನಾವಣಾಪೂರ್ವ ಸಮೀಕ್ಷೆ; ಯಾವ ಪಕ್ಷಕ್ಕೆ ಎಷ್ಟು ಸೀಟು.?

ಪಟ್ನಾ: ಬಿಹಾರ ವಿಧಾನಸಭೆಗೆ ಸಂಬಂಧಿಸಿ ಇಂಡಿಯಾ ಟುಡೆ, ಲೋಕನೀತಿ ಮತ್ತು ಸಿಎಸ್ ಡಿಎಸ್ ಜಂಟಿಯಾಗಿ ನಡೆಸಿದ ಚುನಾವಣಾಪೂರ್ವ ಸಮೀಕ್ಷೆಗಳು ಹೊರಬಿದ್ದಿದ್ದು, ಆಡಳಿತಾರೂಢ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 133ರಿಂದ 143 ಸೀಟುಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಹೇಳಿದೆ.

243 ಸೀಟುಗಳ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು 122 ಮ್ಯಾಜಿಕ್ ಸಂಖ್ಯೆ ತಲುಪಬೇಕಿದೆ.
ಎನ್ ಡಿಎ ಮೈತ್ರಿ ಕೂಟಕ್ಕೆ ಶೇ. 38 ರಷ್ಟು ಮತ ಸಿಗಲಿದೆ. ಆರ್ ಜೆಡಿ ಹಾಗೂ ಕಾಂಗ್ರೆಸ್ ಮಹಾಘಟಬಂಧನ್ ಗೆ ಶೇ. 32 ಮತ, ಎಲ್ ಪಿಜೆ ಪಕ್ಷಕ್ಕೆ ಶೇ. 6ರಷ್ಟು ಮತ ಹಾಗೂ ಇತರೆ ಪಕ್ಷಗಳಿಗೆ ಶೇ. 17ರಷ್ಟು ಮತ ಲಭಿಸಲಿದೆ ಎಂದು ಸಮೀಕ್ಷೆ ಹೇಳಿದೆ.
ನಿತೀಶ್ ಕುಮಾರ್ ಶೇ. 31, ತೇಜಸ್ವಿ ಯಾದವ್ ಶೇ. 27, ಚಿರಾಗ್ ಪಾಸ್ವನ್ ಶೇ. 5, ಶೇ. 4 ಮಂದಿ ಸುಶೀಲ್ ಮೋದಿ ಹಾಗೂ ಶೇ. 3 ರಷ್ಟು ಮಂದಿ ಲಾಲು ಪ್ರಸಾದ್ ಯಾದವರ್ ಮುಖ್ಯಮಂತ್ರಿ ಅಭ್ಯರ್ಥಿಯಾಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ಪಕ್ಷಕ್ಕೆ ಎಷ್ಟು ಸೀಟು:
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿಕೂಟಕ್ಕೆ 133-143 ಸ್ಥಾನ ಲಭಿಸಲಿದೆ. ಆರ್ ಜೆಡಿ – ಕಾಂಗ್ರೆಸ್ ಮಹಾ ಘಟಬಂಧನ್ ಗೆ 88-98 ಸ್ಥಾನಗಳಲ್ಲಿ ಗೆಲುವು ಸಾಧಲಿದೆ. ಎಲ್‌ಜೆಪಿ 2-6 ಸೀಟುಗಳಲ್ಲಿ ಜಯಗಳಿಸಲಿದೆ. ಇತರೆ ಪಕ್ಷಗಳು 6-10 ಸೀಟುಗಳು ಪಾಲಾಗಲಿವೆ ಎಂದು ಸಮೀಕ್ಷೆ ಹೇಳಿದೆ.