ಬಾರ್ ಮಾಲೀಕ ಮನೀಶ್ ಶೆಟ್ಟಿ ಕೊಲೆ: ರೌಡಿಶೀಟರ್ ಕಿಶನ್ ಹೆಗ್ಡೆ ಹತ್ಯೆಗೆ ಪ್ರತೀಕಾರ

ಬೆಂಗಳೂರು: ಗುರುವಾರ ರಾತ್ರಿ ನಡೆದ ಬೆಂಗಳೂರಿನ ಬ್ರಿಗೇಡ್ ರಸ್ತೆ ಸಮೀಪದ ಡ್ಯೂಯೆಟ್ ಬಾರ್‌ ಮಾಲೀಕ ಮನೀಶ್ ಶೆಟ್ಟಿ ಕೊಲೆ ಪ್ರಕರಣ ಇದೀಗ ಭೂಗತ ಜಗತ್ತಿನೊಂದಿಗೆ ನಂಟು ಬೆಸೆದುಕೊಳ್ಳುತ್ತಿದೆ. ಇತ್ತೀಚೆಗೆ ಹಿರಿಯಡಕದಲ್ಲಿ ನಡೆದ ರೌಡಿಶೀಟರ್ ಕಿಶನ್ ಹೆಗ್ಡೆ ಕೊಲೆಗೆ ಸಂಬಂಧಿಸಿದಂತೆ ಮನೀಶ್ ಶೆಟ್ಟಿ ಹಣಕಾಸಿನ ಸಹಕಾರ ನೀಡಿದ್ದನು. ಕಿಶನ್ ಹೆಗ್ಡೆಯನ್ನು ಕೊಲೆ ಮಾಡಲು ಮನೋಜ್ ಕೋಡಿಕೆರೆ ಸಹಚರರಿಗೆ ಫೈನಾನ್ಸ್ ಮಾಡಿದ್ದನು. ಕಿಶನ್ ಹೆಗ್ಡೆ ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಆಪ್ತನಾಗಿದ್ದ. ಹೀಗಾಗಿ ವಿಕ್ಕಿ ಶೆಟ್ಟಿಯ ಗ್ಯಾಂಗ್​ನಿಂದ ಮನೀಶ್ ಕೊಲೆಯಾಗಿರುವ […]

ಕಾನ್ ಸ್ಟೆಬಲ್ ಗೆ ಹಲ್ಲೆ ಪ್ರಕರಣ: ಮಹಾರಾಷ್ಟ್ರದ ಸಚಿವೆಗೆ ಮೂರು ತಿಂಗಳು ಜೈಲು ಶಿಕ್ಷೆ

ಮುಂಬೈ: ಎಂಟು ವರ್ಷಗಳ ಹಿಂದೆ ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಯಶೋಮತಿ ಠಾಕೂರ್‌ ಅವರಿಗೆ ಮೂರು ತಿಂಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಅಮರಾವತಿ ಜಿಲ್ಲಾ ನ್ಯಾಯಾಧೀಶ ಮಹತ್ವದ ತೀರ್ಪು ನೀಡಿದೆ. ಯಶೋಮತಿ ಠಾಕೂರ್‌ ಕಾಂಗ್ರೆಸ್‌ ಶಾಸಕಿಯಾಗಿದ್ದು, ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್‌ ಸಮಿತಿಯ ಕಾರ್ಯಾಧ್ಯಕ್ಷೆಯೂ ಆಗಿದ್ದಾರೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‌–ಎನ್‌ಸಿಪಿ ಹಾಗೂ ಶಿವಸೇನಾ ಮೈತ್ರಿ ಸರ್ಕಾರವನ್ನು ಈ ಘಟನೆ ಮುಜುಗರಕ್ಕೀಡುಮಾಡಿದೆ. ಅಮರಾವತಿ ಜಿಲ್ಲೆಯ […]

ಕೆಕೆಆರ್ ನಾಯಕತ್ವ ತೊರೆದ ದಿನೇಶ್ ಕಾರ್ತಿಕ್: ಇಯಾನ್ ಮಾರ್ಗನ್ ನೂತನ ನಾಯಕ

ದುಬೈ: ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವ ಸ್ಥಾನದಿಂದ ವಿಕೆಟ್ ಕೀಪರ್- ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಶುಕ್ರವಾರ ಕೆಳಗಿಳಿದಿದ್ದು, ಇಂಗ್ಲೆಂಡ್ ತಂಡದ ಉಪ ನಾಯಕ ಇಯಾನ್ ಮಾರ್ಗನ್ ಗೆ ನಾಯಕತ್ವ ಹಸ್ತಾಂತರಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಕೆಕೆಆರ್ ತಂಡದಲ್ಲಿ ಈ ಮಹತ್ವದ ಬದಲಾವಣೆಯಾಗಿದೆ. ಬ್ಯಾಟಿಂಗ್ ಕಡೆಗೆ ಗಮನ ಹರಿಸಬೇಕಾದ್ದರಿಂದ ಮತ್ತು ತಂಡಕ್ಕೆ ಮತ್ತಷ್ಟು ಕೊಡುಗೆ ನೀಡಬೇಕಾಗಿರುವುದರಿಂದ ನಾಯಕತ್ವ ತ್ಯಜಿಸುವುದಾಗಿ ಕೆಕೆಆರ್ ನಿರ್ವಹಣಾ ಸಮಿತಿಗೆ ಕಾರ್ತಿಕ್ ತಿಳಿಸಿದ್ದಾರೆ.

ಉಡುಪಿ: ಇಂದಿರಾನಗರ ನಿವಾಸಿ ಆತ್ಮಹತ್ಯೆಗೆ ಶರಣು

ಉಡುಪಿ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಇಂದಿರಾ ನಗರದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ. ಇಂದಿರಾನಗರದ 6ನೇ ಅಡ್ಡರಸ್ತೆಯ ನಿವಾಸಿ ಸ್ಟೀವನ್‌ ಪ್ರಭಾಕರ ಅಮ್ಮನ್ನ (49) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಮರದ ಕೆತ್ತನೆ ಕೆಲಸ ಮಾಡಿಕೊಂಡಿದ್ದರು. ಆದರೆ ಇತ್ತೀಚೆಗೆ ಕೆಲಸವಿಲ್ಲದೆ ಮಾನಸಿಕ ಖಿನ್ನತೆ ಒಳಗಾಗಿದ್ದರು ಎನ್ನಲಾಗಿದೆ. ಇದೇ ಕಾರಣದಿಂದ ಸ್ಟೀವನ್ ಪ್ರಭಾಕರ್ ಜೀವನದಲ್ಲಿ ಜಿಗುಪ್ಸೆಗೊಂಡು ಗುರುವಾರ ರಾತ್ರಿ 2ಗಂಟೆಯಿಂದ ಶುಕ್ರವಾರದ ಬೆಳಿಗ್ಗೆ 6 ಗಂಟೆಯ ಅವಧಿಯಲ್ಲಿ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ […]

ಹಂತ ಹಂತವಾಗಿ ಶಾಲಾ-ಕಾಲೇಜು ತೆರೆಯಲು ಸರ್ಕಾರ ನಿರ್ಧಾರ: ನವೆಂಬರ್ ನಲ್ಲಿ ಪದವಿ ಕಾಲೇಜು ಆರಂಭ ಸಾಧ್ಯತೆ

ಬೆಂಗಳೂರು: ರಾಜ್ಯ ಸರ್ಕಾರವು ಹಂತ ಹಂತವಾಗಿ ಶಾಲಾ ಕಾಲೇಜುಗಳನ್ನು ತೆರೆಯಲು ತೀರ್ಮಾನಿಸಿದ್ದು, ಅದರಂತೆ ಇಂದು ಸಿಎಂ ಜೊತೆಗೆ ಶಿಕ್ಷಕರು ತಜ್ಞರು ಹಾಗೂ ಆರೋಗ್ಯ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಶಾಲಾ ಕಾಲೇಜುಗಳನ್ನು ಹಂತ ಹಂತವಾಗಿ ತೆರೆಯಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಮೊದಲ ಹಂತದಲ್ಲಿ ಪದವಿ ಕಾಲೇಜುಗಳನ್ನು, ಎರಡನೇ ಹಂತದಲ್ಲಿ 9 ತರಗತಿಯಿಂದ ದ್ವಿತೀಯ ಪಿಯುಸಿ ಹಾಗೂ ಮೂರನೇ ಹಂತದಲ್ಲಿ 1 ರಿಂದ 8 ನೇ ತರಗತಿ ಶಾಲೆಗಳನ್ನು ತೆರೆಯಲು ಅನುಮತಿ ನೀಡಲು ಸರ್ಕಾರ ನಿರ್ಧರಿಸಿದೆ. ಹಾಗೆಯೇ […]