ಕೆಕೆಆರ್ ನಾಯಕತ್ವ ತೊರೆದ ದಿನೇಶ್ ಕಾರ್ತಿಕ್: ಇಯಾನ್ ಮಾರ್ಗನ್ ನೂತನ ನಾಯಕ

ದುಬೈ: ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವ ಸ್ಥಾನದಿಂದ ವಿಕೆಟ್ ಕೀಪರ್- ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಶುಕ್ರವಾರ ಕೆಳಗಿಳಿದಿದ್ದು, ಇಂಗ್ಲೆಂಡ್ ತಂಡದ ಉಪ ನಾಯಕ ಇಯಾನ್ ಮಾರ್ಗನ್ ಗೆ ನಾಯಕತ್ವ ಹಸ್ತಾಂತರಿಸಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಕೆಕೆಆರ್ ತಂಡದಲ್ಲಿ ಈ ಮಹತ್ವದ ಬದಲಾವಣೆಯಾಗಿದೆ.
ಬ್ಯಾಟಿಂಗ್ ಕಡೆಗೆ ಗಮನ ಹರಿಸಬೇಕಾದ್ದರಿಂದ ಮತ್ತು ತಂಡಕ್ಕೆ ಮತ್ತಷ್ಟು ಕೊಡುಗೆ ನೀಡಬೇಕಾಗಿರುವುದರಿಂದ ನಾಯಕತ್ವ ತ್ಯಜಿಸುವುದಾಗಿ ಕೆಕೆಆರ್ ನಿರ್ವಹಣಾ ಸಮಿತಿಗೆ ಕಾರ್ತಿಕ್ ತಿಳಿಸಿದ್ದಾರೆ.