ಭೂಗತ ಪಾತಕಿ ಬನ್ನಂಜೆ ರಾಜನ ಆಪ್ತ, ಬಾರ್ ಮಾಲೀಕ ಮನೀಶ್ ಶೆಟ್ಟಿಯನ್ನು ಗುಂಡಿಕ್ಕಿ ಹತ್ಯೆ

ಬೆಂಗಳೂರು: ಗುಂಡು ಹಾರಿಸಿ ಬಾರ್ ಮಾಲೀಕರೊಬ್ಬರನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ಬ್ರಿಗೇಡ್ ರಸ್ತೆ ಸಮೀಪ ಇಂದು ರಾತ್ರಿ ಸಂಭವಿಸಿದೆ. ಬೆಂಗಳೂರಿನ ಆರ್‌.ಎಚ್‌.ಪಿ ರಸ್ತೆಯಲ್ಲಿರುವ ಡ್ಯೂಯೆಟ್ ಬಾರ್‌ ಮಾಲೀಕ ಮನೀಶ್ ಶೆಟ್ಟಿ (45) ಎಂಬುವವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು, ಬಾರ್‌ ಮುಂಭಾಗದಲ್ಲೇ ಮನೀಶ್ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಕಬ್ಬನ್ ಪಾರ್ಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಚಿಕ್ಕಮಗಳೂರಿನ ಕೊಪ್ಪದ ಮನೀಶ್ ಶೆಟ್ಟಿ, ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ […]

ಶ್ರೀ ಪೀಠಮ್ ವಾಟ್ಸಪ್ ಗ್ರೂಪಿನ ಸದಸ್ಯರಿಂದ ವಿಶೇಷ ಕಾರ್ಯಕ್ರಮ: 33 ಗೋದಾನ, 33 ಗೋಗ್ರಾಸ‌, 33 ಪವಮಾನ

ನೀಲಾವರ: 33 ತಿಂಗಳಿಗೊಮ್ಮೆ ಬರುವ ಅಧಿಕ ಮಾಸದಲ್ಲಿ 33 ಸಂಖ್ಯೆಯಲ್ಲಿ ದೇವತಾ ಸತ್ಕರ್ಮಗಳನ್ನು ನಡೆಸಿದರೆ ವಿಶೇಷ ಫಲಪ್ರದ ಎನ್ನುವುದು ಶಾಸ್ತ್ರವಚನ. ಈ ಹಿನ್ನೆಲೆಯಲ್ಲಿ ಯುವ ವೈದಿಕ ವಿದ್ವಾಂಸ ವಾಮಂಜೂರು ಶ್ರೀಹರಿ ಉಪಾಧ್ಯಾಯರ ನೇತೃತ್ವದ ವಾಟ್ಸಪ್ ಗ್ರೂಪಿನ‌ ಸದಸ್ಯರು ಲೋಕ ಹಿತಕ್ಕಾಗಿ ಪ್ರಾರ್ಥಿಸಿ ಬುಧವಾರ ನೀಲಾವರ ಗೋಶಾಲೆಯಲ್ಲಿ 33 ಗೋದಾನ ಸೇವೆ, 33 ಗೋಗ್ರಾಸ ಸಮರ್ಪಣೆ, 33 ಬಾರಿ ಪವಮಾನ ಸೂಕ್ತ, ಗೋಸೂಕ್ತ ಹಾಗೂ ಶ್ರೀ ಹರಿವಾಯುಸ್ತುತಿ ಪಾರಾಯಣ ಸಹಿತ ಕಾಲೀಯ ಕೃಷ್ಣ ಮುಖ್ಯಪ್ರಾಣ ದೇವರಿಗೆ ಮಧು ಅಭಿಷೇಕ […]

ಘನತ್ಯಾಜ್ಯ ಘಟಕಗಳ ಬ್ರ್ಯಾಂಡಿಂಗ್ ಕಾರ್ಯದಲ್ಲಿ ಉಡುಪಿ ಜಿಲ್ಲೆ ಮಾದರಿ ಹೆಜ್ಜೆ: ಜ್ಯೋತಿ ಉದಯಕುಮಾರ್

ಉಡುಪಿ: ಘನತ್ಯಾಜ್ಯ ಘಟಕಗಳನ್ನು ಬ್ರ್ಯಾಂಡಿಂಗ್ ಮಾಡುವ ಕಾರ್ಯ ಉತ್ತಮವಾಗಿದ್ದು, ಉಡುಪಿ ಜಿಲ್ಲೆ ಈ ದಿಸೆಯಲ್ಲಿ ಮಾದರಿಯ ಹೆಜ್ಜೆಯನ್ನಿಟ್ಟಿದೆ ಎಂದು ಬ್ರಹ್ಮಾವರ ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಜ್ಯೋತಿ ಉದಯಕುಮಾರ್ ಹೇಳಿದ್ದಾರೆ. ಬ್ರಹ್ಮಾವರ ಸಮೀಪದ ಕಾಡೂರು ಗ್ರಾಮ ಪಂಚಾಯತ್‌ನಲ್ಲಿ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಘನತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕಗಳ ಏಕರೂಪದ ಬ್ರ್ಯಾಂಡಿಂಗ್ ಲೋಕಾರ್ಪಣೆ ಮತ್ತು ಸ್ವಚ್ಛೋತ್ಸವ – ನಿತ್ಯೋತ್ಸವ ಮಾಸಾಚರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಚತೆಯ ಕುರಿತು ನಾಗರಿಕರು ಜಾಗೃತರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು […]

ಉಡುಪಿ: ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ

ಉಡುಪಿ: ಉಡುಪಿ ನಗರಸಭೆಯ ಡೇ-ನಲ್ಮ್ ಯೋಜನೆಯ ಕೌಶಲ್ಯ ತರಬೇತಿ ಮೂಲಕ ಉದ್ಯೋಗ ಮತ್ತು ಸ್ಥಳ ನಿಯುಕ್ತಿ ಉಪ ಘಟಕದಡಿ ಡ್ರಾಫ್ಟ್ಮೆನ್ ಮೆಕ್ಯಾನಿಕಲ್, ಫ್ಯಾಷನ್ ಡಿಸೈನರ್, ಹ್ಯಾಂಡ್ ಎಂಬ್ರೋಯ್ಡರಿ, ಸೆಲ್ಫ್ ಎಂಪ್ಲೋಯಿಡ್ ಟೇಯ್‌ಲರ್, ಎಡಿಟರ್ ತರಬೇತಿಯನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಡುಪಿ ನಗರಸಭೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಉಡುಪಿ: ಮೈಕ್ರೋಬಯಲಾಜಿಸ್ಟ್ ಹುದ್ದೆಗೆ ನೇರ ಸಂದರ್ಶನ

ಉಡುಪಿ: ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಖಾಲಿ ಇರುವ ಮೈಕ್ರೋಬಯಲಾಜಿಸ್ಟ್ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇರ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದ್ದು, ಅಕ್ಟೋಬರ್ 22ರಂದು ಬೆಳಿಗ್ಗೆ 10. 30ಕ್ಕೆ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ನೇರ ನೇಮಕಾತಿ ಸಂದರ್ಶನ ಜರುಗಲಿದೆ. ಅಭ್ಯರ್ಥಿಗಳು ಶೈಕ್ಷಣಿಕ ಮೂಲ ದಾಖಲೆಗಳೊಂದಿಗೆ ಹಾಜರಾಗುವಂತೆ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.