ವೈದಿಕ ವಿದ್ವಾನ್ ಕೋಣಂದೂರು ಗೋಪಾಲಕೃಷ್ಣ ಆಚಾರ್ಯ ನಿಧನ 

ಕಾರ್ಕಳ: ಕಾರ್ಕಳದ ಹಿರಿಯ ವೈದಿಕ ವಿದ್ವಾಂಸ ಕೋಣಂದೂರು ಗೋಪಾಲಕೃಷ್ಣ ಆಚಾರ್ಯರು (89 ) ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ವೇದ ಶಾಸ್ತ್ರ ಪಾರಂಗತರಾಗಿದ್ದ ಆಚಾರ್ಯರು ತೆಳ್ಳಾರಿನ ಶ್ರೀ ರಾಘವೇಂದ್ರ ಮಠದ ಪ್ರಧಾನ ಅರ್ಚಕ ವ್ಯವಸ್ಥಾಪಕರಾಗಿ ಅನೇಕ ವರ್ಷ ಕಾರ್ಯನಿರ್ವಹಿಸಿದ್ದರು. ಅವರು ಪತ್ನಿ , ಯಕ್ಷಗಾನ ಅರ್ಥಧಾರಿ  ಶ್ರೀರಮಣ ಆಚಾರ್ಯ ಸಹಿತ ಮೂವರು ಪುತ್ರರನ್ನು ಅಗಲಿದ್ದಾರೆ.

ಮಟ್ಟು ಶಾಲೆಗೆ ಮರ ಬಿದ್ದು ಮೂರ್ನಾಲ್ಕು ದಿನಗಳಾದರೂ ಸುಳಿಯದ ಅಧಿಕಾರಿಗಳು: ಗ್ರಾಮಸ್ಥರ ಆಕ್ರೋಶ

ಉಡುಪಿ: ಕಳೆದ ಮೂರು ದಿನಗಳ ಹಿಂದೆ ಉಡುಪಿ ಜಿಲ್ಲೆಯಲ್ಲಿ ಸುರಿದ ಭಾರೀ ಗಾಳಿಮಳೆಗೆ ಕಾಪು ತಾಲ್ಲೂಕಿನ ಮಟ್ಟು ಗ್ರಾಮದ ಸರ್ಕಾರಿ ಹಿರಿಯ ಪಾರ್ಥಮಿಕ ಶಾಲೆಯ ಮೇಲೆ ಮರವೊಂದು ಬಿದ್ದಿದ್ದು, ಇದರಿಂದ ಶಾಲೆಯ ಒಂದು ಭಾಗ ಸಂಪೂರ್ಣ ಹಾನಿಗೊಂಡಿದೆ. ಆದರೆ ವಿಪರ್ಯಾಸ ಏನೆಂದರೆ ಶಾಲೆಗೆ ಮರ ಬಿದ್ದು ಮೂರ್ನಾಲ್ಕು ದಿನಗಳಾದರೂ ಯಾವುದೇ ಒಬ್ಬ ಅಧಿಕಾರಿ ಇತ್ತಾ ಸುಳಿದಿಲ್ಲ. ಯಾವುದೇ ಕ್ರಮ ಕೈಗೊಳ್ಳದ ಸ್ಥಳೀಯಾಡಳಿತ ವಿರುದ್ಧ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಬಾಯ್ತೆರೆದ ಭೂಮಿ: ರಸ್ತೆ ಸಂಚಾರ ಸ್ಥಗಿತ

ಕಾರವಾರ: ಇಲ್ಲಿನ ಮಲ್ಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹರೂರು ಸಮೀಪ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರಸ್ತೆಯ ನಡುವೆ ಸುಮಾರು ಆರು ಇಂಚುಗಳಷ್ಟು ಬಿರುಕು ಮೂಡಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ನಿಲ್ಲಿಸಲಾಗಿದೆ. ಮಲ್ಲಾಪುರದಿಂದ ಕೈಗಾಕ್ಕೆ ಸಾಗಿ ಹರೂರು- ಬಾರೆ ಮೂಲಕ ಯಲ್ಲಾಪುರ ತಾಲ್ಲೂಕಿನ ಇಡಗುಂದಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಾಡಿನ ಮಧ್ಯೆ ಸಾಗುವ ದಾರಿ ಇದಾಗಿದ್ದು, ಗುಡ್ಡ ಕುಸಿದರೆ ಇಡಗುಂದಿ- ಮಲ್ಲಾಪುರ ನಡುವೆ ಸಂಪರ್ಕ ಕಡಿತವಾಗಲಿದೆ.  

ಉಡುಪಿ ಜಿಲ್ಲೆಗೆ ಗರಿಷ್ಠ ಪ್ರಮಾಣದ ನೆರೆ ಪರಿಹಾರ ಕೊಡಿ: ಮಾಜಿ ಸಚಿವ ಸೊರಕೆ ಆಗ್ರಹ

ಉಡುಪಿ: ಜಿಲ್ಲೆಯಲ್ಲಿ ನೆರೆಯಿಂದ ದೊಡ್ಡಮಟ್ಟದ ಹಾನಿ ಸಂಭವಿಸಿದ್ದು, ರಾಜ್ಯ ಸರ್ಕಾರ ಗರಿಷ್ಠ ಪ್ರಮಾಣದ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಆಗ್ರಹಿಸಿದರು. ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಯಿಂದ ಉಡುಪಿ ಜಿಲ್ಲೆಗೆ ದೊಡ್ಡ ಆಘಾತ ಆಗಿದೆ. ಸಾವಿರಾರು ಕುಟುಂಬಗಳ ಸ್ಥಿತಿ ಅತಂತ್ರವಾಗಿದೆ. ನೂರಾರು ಮಂದಿಯ ಮನೆಗಳಿಗೆ ಹಾನಿಯಾದರೆ, ಇನ್ನೂ ಹಲವಾರ ಮನೆಗಳಿಗೆ ನೀರು ನುಗ್ಗಿದ್ದು, ಇದರಿಂದ ವಿವಿಧ ರೀತಿಯ ಉಪಕರಣಗಳು, ದಿನಬಳಕೆ ವಸ್ತುಗಳು ಹಾಳಾಗಿವೆ. ನೂರಾರು ಎಕರೆ ಬೆಳೆ ಹಾನಿ ಉಂಟಾಗಿದೆ. ಹಾಗಾಗಿ […]

ರಾಜ್ಯಸಭೆ: ಮೂರು ಕಾರ್ಮಿಕ ಸುಧಾರಣಾ ಮಸೂದೆಗಳು ಅಂಗೀಕಾರ

ನವದೆಹಲಿ: ವಿಪಕ್ಷಗಳ ತೀವ್ರ ವಿರೋಧದ ನಡುವೆ ಬುಧವಾರ ರಾಜ್ಯಸಭೆಯಲ್ಲಿ ಮೂರು ಪ್ರಮುಖ ಕಾರ್ಮಿಕ ಸುಧಾರಣಾ ಮಸೂದೆಗಳನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಕೈಗಾರಿಕಾ ವ್ಯವಹಾರಗಳ ಮಾರ್ಗದರ್ಶಿ ವಿಧೇಯಕ, ಸಾಮಾಜಿಕ ಸುರಕ್ಷತಾ ಮಾರ್ಗದರ್ಶಿ ವಿಧೇಯಕ ಹಾಗೂ ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ವಾತಾವರಣ ಮಾರ್ಗದರ್ಶಿ ವಿಧೇಯಕಗಳಿಗೆ ಅನುಮೋದನೆ ಪಡೆಯಲಾಯಿತು. ಮಸೂದೆಗಳ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಗಾಂಗ್ವಾರ್ ಮಾತನಾಡಿ, ವಾಣಿಜ್ಯ ಕೇತ್ರದಲ್ಲಿ ಆಗುತ್ತಿರುವ ಬದಲಾವಣೆಗೆ ಅನುಗುಣವಾಗಿ ಕಾರ್ಮಿಕ ಕಾಯ್ದೆಗಳಿಗೆ ಸುಧಾರಣೆ ತರಲಾಗುತ್ತಿದೆ ಎಂದರು. ದೇಶದ 16 ರಾಜ್ಯಗಳಲ್ಲಿ ಮುನ್ನೂರಕ್ಕಿಂತ […]