ಬಾಯ್ತೆರೆದ ಭೂಮಿ: ರಸ್ತೆ ಸಂಚಾರ ಸ್ಥಗಿತ

ಕಾರವಾರ: ಇಲ್ಲಿನ ಮಲ್ಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹರೂರು ಸಮೀಪ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರಸ್ತೆಯ ನಡುವೆ ಸುಮಾರು ಆರು ಇಂಚುಗಳಷ್ಟು ಬಿರುಕು ಮೂಡಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ನಿಲ್ಲಿಸಲಾಗಿದೆ.

ಮಲ್ಲಾಪುರದಿಂದ ಕೈಗಾಕ್ಕೆ ಸಾಗಿ ಹರೂರು- ಬಾರೆ ಮೂಲಕ ಯಲ್ಲಾಪುರ ತಾಲ್ಲೂಕಿನ ಇಡಗುಂದಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಾಡಿನ ಮಧ್ಯೆ ಸಾಗುವ ದಾರಿ ಇದಾಗಿದ್ದು, ಗುಡ್ಡ ಕುಸಿದರೆ ಇಡಗುಂದಿ- ಮಲ್ಲಾಪುರ ನಡುವೆ ಸಂಪರ್ಕ ಕಡಿತವಾಗಲಿದೆ.