ಮಣಿಪಾಲದ ಕುಂಡೇಲುಕಾಡಿನಲ್ಲಿ ಭೂ ಕುಸಿತ: ಅಪಾಯದ ಭೀತಿಯಲ್ಲಿ ಪ್ರಿಮಿಯರ್ ಕೋರ್ಟ್ ವಸತಿ ಸಮುಚ್ಚಯ

ಮಣಿಪಾಲ: ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಮಣಿಪಾಲದ ಕುಂಡೇಲುಕಾಡಿನಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಇದರಿಂದ ಇಲ್ಲಿನ ಪ್ರಿಮಿಯರ್ ಕೋರ್ಟ್ ಬಹುಮಹಡಿ ಕಟ್ಟಡ ಅಪಾಯದ ಭೀತಿಯನ್ನು ಎದುರಿಸುತ್ತಿದೆ. ಹತ್ತು ಅಂತಸ್ತನ್ನು ಹೊಂದಿರುವ ಈ ಬಹುಮಹಡಿ ಕಟ್ಟಡದಲ್ಲಿ ನೂರಾರು ಫ್ಲ್ಯಾಟ್ ಗಳಿದ್ದು, ಸುಮಾರು ಸಾವಿರಕ್ಕೂ ಹೆಚ್ಚುಮಂದಿ ವಾಸವಾಗಿದ್ದಾರೆ ಎನ್ನಲಾಗಿದೆ. ಕಟ್ಟಡದ ಒಂದು ಭಾಗದಲ್ಲಿ ಮಣ್ಣು ಕುಸಿದಿರುವುದರಿಂದ ವಸತಿ ಸಮುಚ್ಚಯದ ನಿವಾಸಿಗಳನ್ನು ಸ್ಥಳಾಂತರ ಮಾಡುವಂತೆ ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕ್ಕರ್ ಕಟ್ಟಡದ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ಈ ಕಟ್ಟಡದ […]

ನಿರಾಶ್ರಿತರ ಪಾಲಿಗೆ ಹೀರೋ ಆದ್ರು ಉಡುಪಿಯ ಈ ಅಣ್ಣ-ತಮ್ಮಂದಿರು

ಉಡುಪಿಯಲ್ಲಿ ಕಳೆದೆರಡು ದಿನಗಳಿಂದ ಸುರಿದ ಮಹಾಮಳೆಗೆ ಉಡುಪಿ ಜಿಲ್ಲೆಗೆ ಜಿಲ್ಲೆಯೇ ತತ್ತರಿಸಿಹೋಗಿದೆ.ಅದರಲ್ಲೂ ಕರಾವಳಿಯ ನಿಟ್ಟೂರು ಕೆಮ್ಮಣ್ಣು ಪ್ರದೇಶ ಪ್ರವಾಹಕ್ಕೊಳಗಾಗಿ ಭಾರೀ ಹಾನಿಗೀಡಾಗಿದೆ. ಇದು ಸ್ವರ್ಣ ಹಾಗೂ ಸೀತಾ ನದಿಗಳು ಸಮುದ್ರ ಸೇರುವ ಮುಖಜಭೂಮಿ ಪ್ರದೇಶ. ಪಶ್ಚಿಮ ಘಟ್ಟಗಳಲ್ಲಿ ಮಳೆ ಹರಿದಾಗ ಅದರ ಪ್ರಮಾಣ ನೀರಿನ ಏರಿಕೆ ಕಾಣುವುದು ಕರಾವಳಿ ಭಾಗಗಳಲ್ಲಿ ಶನಿವಾರ, ಭಾನುವಾರ ರಾತ್ರಿ ಸುರಿದ ಮಳೆ ಅಕ್ಷರಶಃ ಊರುಗಳೇ ಮುಳುಗಿ ಯಾರಾದರೂ ಕಾಪಾಡುತ್ತಾರೇನೋ ಎಂದು ಚಾತಕಪಕ್ಷಿಯಂತೆ ಕಾಯುತ್ತಿದ್ದವರ ನೆರವಿಗೆ ನಿಂತವರು ಈ ಮೂವರು ಅಣ್ಣ-ತಮ್ಮಂದಿರು. ಇನ್ತಿಯಾಜ್, […]

ಡ್ರಗ್ಸ್ ದಂಧೆ: ಮಂಗಳೂರಿನ ಡ್ಯಾನ್ಸರ್ ಕಿಶೋರ್ ಶೆಟ್ಟಿ, ಅಕಿಲ್ ನೌಶೀಲ್ ಏಳು ದಿನ ಪೊಲೀಸ್ ಕಸ್ಟಡಿಗೆ

ಮಂಗಳೂರು: ಡ್ರಗ್ಸ್ ದಂಧೆಯ ಆರೋಪದಡಿ ಸಿಸಿಬಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಮಂಗಳೂರಿನ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ  (30) ಮತ್ತು ಅಕಿಲ್ ನೌಶೀಲ್ (28) ರನ್ನು ನ್ಯಾಯಾಲಯ ಏಳು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದೆ. ಭಾನುವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ನಂತರ  ಪೊಲೀಸರು ವಶಕ್ಕೆ ತೆಗೆದುಕೊಂಡರು. ಇಬ್ಬರನ್ನೂ ಭಾನುವಾರ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಮವಾರ ಫಲಿತಾಂಶ ನಿರೀಕ್ಷಿಸಲಾಗಿದೆ. ಫಲಿತಾಂಶವನ್ನು ಪಡೆಯುವವರೆಗೆ, ಪೊಲೀಸ್ ಸಿಬ್ಬಂದಿಗೆ ಪೂರ್ಣ ಪ್ರಮಾಣದಲ್ಲಿ ವಿಚಾರಣೆಯನ್ನು ಪುನರಾರಂಭಿಸಲು ಸಾಧ್ಯವಾಗುವುದಿಲ್ಲ. ಫಲಿತಾಂಶವು  ನೆಗೆಟಿವ್ ಆಗಿದ್ದರೆ ಅವರು […]

ಮೂರು ಅಂತಸ್ತಿನ ಕಟ್ಟಡ ಕುಸಿತ: 8 ಮಂದಿ ಸಾವು

ಮಹಾರಾಷ್ಟ್ರ: ಮಹಾರಾಷ್ಟ್ರ ರಾಜ್ಯದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಥಾಣೆ ಜಿಲ್ಲೆಯಲ್ಲಿನ 3 ಅಂತಸ್ತಿನ ಕಟ್ಟಡ ಕುಸಿದು ಪರಿಣಾಮ 8 ಮಂದಿ ಮೃತಪಟ್ಟ ಧಾರುಣ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ನಸುಕಿನ ವೇಳೆ ಸುಮಾರು 3.40ರ ವೇಳೆಗೆ ಕಟ್ಟಡ ಕುಸಿದಿದ್ದು, ಸ್ಥಳೀಯರು 20 ಮಂದಿಯನ್ನು ರಕ್ಷಿಸಿದ್ದಾರೆ. ಸದ್ಯ ಎನ್ ಡಿ ಆರ್ ಎಫ್ ತಂಡ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, 5 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಇನ್ನೂ 20 ರಿಂದ 25 ಮಂದಿ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದು, ಅವರ […]

ಮಲ್ಪೆಯ ಬೋಟ್ ಮುಳುಗಡೆ: ಏಳು ಮೀನುಗಾರರ ರಕ್ಷಣೆ

ಕಾರವಾರ: ಮಲ್ಪೆ ಮೂಲದ ಬ್ರಾಹ್ಮರಿ ಹೆಸರಿನ ಬೋಟ್ ವೊಂದು ಕಾರವಾರ ಸಮೀಪ ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಬೋಟ್ ನಲ್ಲಿದ್ದ ಏಳು ಜನ ಮೀನುಗಾರನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮಲ್ಪೆಯ ಜಾಹ್ನವಿ ಕೋಟ್ಯಾನ್ ಗೆ ಸೇರಿದ ಬೋಟ್ ಇದಾಗಿದೆ. ಮೀನುಗಾರಿಕೆಗೆ ತೆರಳಿದ ಬೋಟ್ ಕಾರವಾರ ಸಮೀಪ ದೈತ್ಯಾಕಾರದ ಅಲೆಗಳ ಅಬ್ಬರಕ್ಕೆ ಬೋಟ್ ಮುಳುಗಡೆಯಾಗಿದೆ ಎನ್ನಲಾಗಿದೆ. ಬೋಟ್ ನಲ್ಲಿದ್ದ ಏಳು ಜನ ಮೀನುಗಾರರನ್ನು ಬೇರೆ ಬೋಟ್ ನ ಮೀನುಗಾರ ಸಹಕಾರದಿಂದ ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಬೋಟ್ ಮುಳುಗಡೆಯಿಂದ ಲಕ್ಷಾಂತರ […]