udupixpress
Home Trending ಮಲ್ಪೆಯ ಬೋಟ್ ಮುಳುಗಡೆ: ಏಳು ಮೀನುಗಾರರ ರಕ್ಷಣೆ

ಮಲ್ಪೆಯ ಬೋಟ್ ಮುಳುಗಡೆ: ಏಳು ಮೀನುಗಾರರ ರಕ್ಷಣೆ

ಕಾರವಾರ: ಮಲ್ಪೆ ಮೂಲದ ಬ್ರಾಹ್ಮರಿ ಹೆಸರಿನ ಬೋಟ್ ವೊಂದು ಕಾರವಾರ ಸಮೀಪ ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಬೋಟ್ ನಲ್ಲಿದ್ದ ಏಳು ಜನ ಮೀನುಗಾರನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಮಲ್ಪೆಯ ಜಾಹ್ನವಿ ಕೋಟ್ಯಾನ್ ಗೆ ಸೇರಿದ ಬೋಟ್ ಇದಾಗಿದೆ. ಮೀನುಗಾರಿಕೆಗೆ ತೆರಳಿದ ಬೋಟ್ ಕಾರವಾರ ಸಮೀಪ ದೈತ್ಯಾಕಾರದ ಅಲೆಗಳ ಅಬ್ಬರಕ್ಕೆ ಬೋಟ್ ಮುಳುಗಡೆಯಾಗಿದೆ ಎನ್ನಲಾಗಿದೆ.

ಬೋಟ್ ನಲ್ಲಿದ್ದ ಏಳು ಜನ ಮೀನುಗಾರರನ್ನು ಬೇರೆ ಬೋಟ್ ನ ಮೀನುಗಾರ ಸಹಕಾರದಿಂದ ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಬೋಟ್ ಮುಳುಗಡೆಯಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.