ನಿರಾಶ್ರಿತರ ಪಾಲಿಗೆ ಹೀರೋ ಆದ್ರು ಉಡುಪಿಯ ಈ ಅಣ್ಣ-ತಮ್ಮಂದಿರು

ಉಡುಪಿಯಲ್ಲಿ ಕಳೆದೆರಡು ದಿನಗಳಿಂದ ಸುರಿದ ಮಹಾಮಳೆಗೆ ಉಡುಪಿ ಜಿಲ್ಲೆಗೆ ಜಿಲ್ಲೆಯೇ ತತ್ತರಿಸಿಹೋಗಿದೆ.ಅದರಲ್ಲೂ ಕರಾವಳಿಯ ನಿಟ್ಟೂರು ಕೆಮ್ಮಣ್ಣು ಪ್ರದೇಶ ಪ್ರವಾಹಕ್ಕೊಳಗಾಗಿ ಭಾರೀ ಹಾನಿಗೀಡಾಗಿದೆ.
ಇದು ಸ್ವರ್ಣ ಹಾಗೂ ಸೀತಾ ನದಿಗಳು ಸಮುದ್ರ ಸೇರುವ ಮುಖಜಭೂಮಿ ಪ್ರದೇಶ. ಪಶ್ಚಿಮ ಘಟ್ಟಗಳಲ್ಲಿ ಮಳೆ ಹರಿದಾಗ ಅದರ ಪ್ರಮಾಣ ನೀರಿನ ಏರಿಕೆ ಕಾಣುವುದು ಕರಾವಳಿ ಭಾಗಗಳಲ್ಲಿ ಶನಿವಾರ, ಭಾನುವಾರ ರಾತ್ರಿ ಸುರಿದ ಮಳೆ ಅಕ್ಷರಶಃ ಊರುಗಳೇ ಮುಳುಗಿ ಯಾರಾದರೂ ಕಾಪಾಡುತ್ತಾರೇನೋ ಎಂದು ಚಾತಕಪಕ್ಷಿಯಂತೆ ಕಾಯುತ್ತಿದ್ದವರ ನೆರವಿಗೆ ನಿಂತವರು ಈ ಮೂವರು ಅಣ್ಣ-ತಮ್ಮಂದಿರು. ಇನ್ತಿಯಾಜ್, ಇಲ್ಯಾಸ್ ಹಾಗೂ ಸುಹಾನ್
ಕಯಾಕಿಂಗ್ ಬೋಟ್ಗಳನ್ನು ಬಳಸಿ ಜೀವದ ಹಂಗುತೊರೆದು   ಇನ್ನೂರಕ್ಕೂ ಹೆಚ್ಚು ಜನರನ್ನು  ತಂದು ಸುರಕ್ಷಿತ ಸ್ಥಳಗಳಿಗೆ ಬಿಟ್ಟು ಸಾಹಸ ಮೆರೆದ ಅಣ್ಣ ತಮ್ಮಂದಿರ ಕಥೆ ಇದು.

ಉಡುಪಿಯಲ್ಲಿ ಸುರಿದ ಮಳೆಗೆ ಕಲ್ಯಾಣಪುರ ನಿಟ್ಟೂರು ಕೆಮ್ಮಣ್ಣು ತಿಮ್ಮನ ಕುದುರು ಕುಂಬಳ ತೋಟ ಪಡುಕುದುರು ಹೊನ್ನಪ್ಪರ ಕುದುರು  ಸುತ್ತ ಪ್ರದೇಶ ಸಂಪೂರ್ಣವಾಗಿ ಜಲಾವೃತವಾಗಿತ್ತು.  ಪ್ರತಿ‌ಮನೆಗಳಲ್ಲೂ ನಾಲ್ಕು ಅಡಿ ನೀರು ಆವರಿಸಿತ್ತು.
ಸಂತ್ರಸ್ತರನ್ನು  ಕಯಾಕಿಂಗ್ ಬೋಟ್ ಮೂಲಕ  ಎತ್ತರದ ಪ್ರದೇಶವಾದ ಕೆಮ್ಮಣ್ಣು ಶಾಲೆಗೆ ಬಿಟ್ಟಿದ್ದು ಈ ಅಣ್ಣ ತಮ್ಮಂದಿರು.
ಅತಿಹೆಚ್ಚು ಇಂದ್ರಾಣಿ ನದಿಯ  ಪ್ರವಾಹದ ಸೆಳೆತ ಉಂಟಾಗಿದ್ದ  ಪ್ರದೇಶವಾಗಿದ್ದ ಕಾಂಚನ ಹೂಂಡೈನ ಹಿಂಭಾಗದ ಜಾನಕಿ ಪೂಜಾರಿ ಯವರ ಮನೆಯಲ್ಲಿಯಲ್ಲಿದ್ದ ವೃದ್ಧ ದಂಪತಿಗಳು  ಮನೆಯ ಛಾವಣಿಯ ಆಸರೆಯನ್ನು ಪಡೆದು ನಿಂತಿದ್ದರು, ವೃದ್ದ ದಂಪತಿಗಳನ್ನು ಎತ್ತರದ ಮುಖ್ಯ ರಸ್ತೆ ಗೆ ತಂದು ಬಿಟ್ಟರು. ಬಳಿಕ ಕೋಡಂಕೂರು ಬಬ್ಬುಸ್ವಾಮಿ ದೈವಸ್ಥಾನದ ಪರಿಸರದ ಜನರನ್ನು ಎತ್ತರದ  ತಾರಕಟ್ಟ ಹಾಗೂ ಮುಖ್ಯರಸ್ತೆ ಸ್ಥಳಗಳಿಗೆ ಸ್ಥಳಾಂತರಿಸಿದರು.
ಬೆಳಗ್ಗೆ ಐದುಮೂವತ್ತಕ್ಕೆ  ಶುರುವಾದ ಅವರ ರಕ್ಷಣ ಕಾರ್ಯ ಮಧ್ಯಾಹ್ನ ಎರಡು ಘಂಟೆಗಳವರೆಗೆ  ಮುಂದುವರೆದಿತ್ತು, ಸುಮಾರು ನೂರ ಹತ್ತು ಕುಟುಂಬಗಳನ್ನು ಇನ್ನುರಕಕ್ಕೂ ಹೆಚ್ಚು ಸಂತ್ರಸ್ತರನ್ನು ಸ್ಥಳಾಂತರಿಸಿದ್ದಾರೆ ಈ ಅಣ್ಣ ತಮ್ಮಂದಿರು. ಇವರ ರಕ್ಷಣಾ ಕಾರ್ಯ​ ಮೆ​ಚ್ಚಿದ ಇಡೀ ಪರಿಸರವೆ ಸಲಾಮ್‌ ಹೊಡೆ​ಯು​ತ್ತಿದ್ದರೆ, ಇವ​ರ ಸಹಾ​ಯ​ದಿಂದ ಬದು​ಕು​ಳಿ​ದ​ ಸಂತ್ರ​ಸ್ತರಂತೂ ಇವ​ರನ್ನು ನಮ್ಮ ಪಾಲಿನ ದೇವರು ಎನ್ನುತ್ತಿದ್ದಾರೆ.
♦ ರಾಂ ಅಜೆಕಾರ್