ಮೋದಿ ಹುಟ್ಟುಹಬ್ಬ: ಬಿಜೆಪಿ ಮಹಿಳಾ ಮೋರ್ಚಾದಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ

ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ, ಪ್ರಸಾದ್ ನೇತ್ರಾಲಯ ಮತ್ತು ನೇತ್ರ ಜ್ಯೋತಿ ಟ್ರಸ್ಟ್ ನ ಸಹಭಾಗಿತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಸೇವಾ ಸಪ್ತಾಹದ ಅಂಗವಾಗಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ನಡೆಸಲಾಯಿತು. ಸುಮಾರು 400ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡು ಉಚಿತ ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರು. ಈ ಸಂದರ್ಭದಲ್ಲಿ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಎಸ್ […]
ಉಡುಪಿಗೆ ವರುಣಾಘಾತ: ನದಿಪಾತ್ರದ ಪ್ರದೇಶಗಳು ಮುಳುಗಡೆ

ಉಡುಪಿ: ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಹಾಮಳೆ ಉಡುಪಿ ಜಿಲ್ಲೆಯ ನದಿಪಾತ್ರದ ಪ್ರದೇಶಗಳು, ತಗ್ಗುಪ್ರದೇಶಗಳು ಸಂಪೂರ್ಣ ಮುಳುಗಡೆಯಾಗಿದೆ. ಸ್ವರ್ಣೆಯ ಆರ್ಭಟ: ಹಿರಿಯಡಕ, ಪುತ್ತಿಗೆ, ಪೆರಂಪಳ್ಳಿ ಭಾಗದಲ್ಲಿ ಹಾದುಹೋಗುವ ಸ್ವರ್ಣ ನದಿ ಉಕ್ಕಿ ಹರಿಯುತ್ತಿದ್ದು, ಇದರಿಂದ ನದಿಗೆ ತಾಗಿಕೊಂಡಿರುವ ಪ್ರದೇಶಗಳು ಸಂಪೂರ್ಣ ಮುಳುಗಡೆಯಾಗಿದೆ. ಕೊಳಲಗಿರಿ, ಹಿರಿಯಡಕ, ಬೆಳ್ಳಂಪಳ್ಳಿ, ಹೆರ್ಗ, ಪರೀಕ ಭಾಗದಲ್ಲಿ ಕೃತಕ ನೆರೆ ಉಂಟಾಗಿದೆ. ಪುತ್ತಿಗೆ ಮಠಕ್ಕೆ ನುಗ್ಗಿದ ನೀರು: ಹಿರಿಯಡಕ ಸಮೀಪದ ಪುತ್ತಿಗೆ ಮೂಲ ಮಳೆ ನೀರು ನುಗ್ಗಿದೆ. ಮಠದ ಗೋಶಾಲೆಯಲ್ಲಿ ನೀರು ತುಂಬಿದ್ದು, […]
ಉತ್ತರೆಯ ಆರ್ಭಟಕ್ಕೆ ಉಡುಪಿ ಮುಳುಗಡೆ: ಅಪಾಯದ ಭೀತಿಯಲ್ಲಿ ಸಿಲುಕಿದ ಸಾವಿರಾರು ಕುಟುಂಬ

ಉಡುಪಿ: ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಉಡುಪಿಯ ತಗ್ಗುಪ್ರದೇಶಗಳು ಸಂಪೂರ್ಣ ಮುಳುಗಡೆಯಾಗಿದೆ. ಸಾವಿರಾರು ಕುಟುಂಬಗಳು ಅಪಾಯದಲ್ಲಿ ಸಿಲುಕ್ಕಿದ್ದು, ಜಿಲ್ಲಾಡಳಿತ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಉತ್ತರೆ ಮಳೆಯ ರೌದ್ರಾವತರಕ್ಕೆ ಉಡುಪಿ ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆ ಪ್ರವಾಹ ಉಂಟಾಗಿದೆ. ನಿನ್ನೆ ಮಧ್ಯಾಹ್ನದಿಂದ ಹಿಡಿದು ರಾತ್ರಿ ಪೂರ್ತಿ ಧಾರಾಕಾರ ವರ್ಷಧಾರೆಯಾಗಿದೆ. ಇದರಿಂದ ನಗರದ ಮಧ್ಯದಲ್ಲಿ ಹರಿಯುವ ಇಂದ್ರಾಣಿ ಹೊಳೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೊಳೆ ಪಾತ್ರದ ನೂರಾರು ಮನೆಗಳಿಗೆ ನೀರು ನುಗ್ಗಿದೆ. ಬೈಲಕೆರೆ, ಮಠದ […]
ಭೀಕರವಾಗಿ ಹರಿಯುತ್ತಿದ್ದಾಳೆ ಕಾರ್ಕಳದ ಸ್ವರ್ಣೆ, ಎಲ್ಲೆಲ್ಲೂ ಪ್ರವಾಹದ ಕರಿಛಾಯೆ!

ಉಡುಪಿ : ಭಾರಿ ಮಳೆಗೆ ಉಡುಪಿ ಜಿಲ್ಲೆ ತತ್ತರಿಸಿದ್ದು ಜಿಲ್ಲೆಯ ತಗ್ಗು ಪ್ರದೇಶಗಳಲ್ಲಿ ಜಲಾವೃತವಾಗಿದ್ದು ಮನೆಗಳಿಗೆ ನೀರು ನುಗ್ಗಿದೆ. ಕಾರ್ಕಳ ತಾಲೂಕಿನ ಸ್ವರ್ಣ ನದಿ ಪ್ರವಾಹಕ್ಕೆ ಎಣ್ಣೆಹೊಳೆಯ ಪೇಟೆ ಭಾಗ ಸಂಪೂರ್ಣವಾಗಿ ಮುಳುಗಡೆಯಾಗಿದ್ದು , ನೆಟ್ವರ್ಕ್ ಟವರ್ ,ಪುರುಷೋತ್ತಮ ನಾಯಕ್ ಅವರ ಹೋಟೇಲ್ ,ಡೈರಿ ಪ್ರದೇಶ ಹಾಗೂ ರಸ್ತೆಗಳಲ್ಲಿ ಐದು ಅಡಿಗಳಷ್ಟು ನೀರು ನಿಂತಿದ್ದು ಅಣೆಕಟ್ಟು ನಿರ್ಮಾಣಕ್ಕೆ ಸಂಬಂಧಿತ ಸಾಮಾನುಗಳು ನೀರಿನಲ್ಲಿ ಮುಳುಗಿದೆ. ನಲವತ್ತಾರು ವರ್ಷಗಳ ಹಿಂದೆ ಇಂತಹ ಪ್ರವಾಹ ಬಂದಿದ್ದು ಮತ್ತೊಮ್ಮೆ ಮಳೆಯ ಅಬ್ಬರವು ಹೆಚ್ಚಾಗಿದೆ. […]
ಪ್ರತಿಷ್ಠಿತ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಗಂಗಾಧರ ಹಿರೇಗುತ್ತಿ ಆಯ್ಕೆ

ಕೋಟ: ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಪ್ರತಿ ವರ್ಷ ಮುಂಗಾರು ಪತ್ರಿಕೆಯ ಸಂಪಾದಕ ದಿ. ವಡ್ಡರ್ಸೆ ರಘುರಾಮ ಶೆಟ್ಟಿ ಹೆಸರಲ್ಲಿ ಕೊಡಮಾಡುವ ಪತ್ರಿಕೋದ್ಯಮ ಪ್ರಶಸ್ತಿಗೆ ಕರಾವಳಿ ಮುಂಜಾವು ದಿನಪತ್ರಿಕೆಯ ಸಂಪಾದಕ ಗಂಗಾಧರ ಹಿರೇಗುತ್ತಿ ಈ ಬಾರಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಈ ಕುರಿತು ಮಾಹಿತಿ ನೀಡಿದರು. ಅ.11ರಂದು ಸಂಜೆ 4.30ಕ್ಕೆ ಬ್ರಹ್ಮಾವರದ ಬಂಟರ ಭವನದಲ್ಲಿಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು , ಖ್ಯಾತ ಸಾಹಿತಿ […]