ಭೀಕರವಾಗಿ ಹರಿಯುತ್ತಿದ್ದಾಳೆ ಕಾರ್ಕಳದ ಸ್ವರ್ಣೆ, ಎಲ್ಲೆಲ್ಲೂ ಪ್ರವಾಹದ ಕರಿಛಾಯೆ!

ಉಡುಪಿ : ಭಾರಿ ಮಳೆಗೆ ಉಡುಪಿ ಜಿಲ್ಲೆ ತತ್ತರಿಸಿದ್ದು ಜಿಲ್ಲೆಯ ತಗ್ಗು ಪ್ರದೇಶಗಳಲ್ಲಿ ಜಲಾವೃತವಾಗಿದ್ದು ಮನೆಗಳಿಗೆ ನೀರು ನುಗ್ಗಿದೆ. ಕಾರ್ಕಳ ತಾಲೂಕಿನ ಸ್ವರ್ಣ ನದಿ ಪ್ರವಾಹಕ್ಕೆ ಎಣ್ಣೆಹೊಳೆಯ ಪೇಟೆ ಭಾಗ ಸಂಪೂರ್ಣವಾಗಿ ಮುಳುಗಡೆಯಾಗಿದ್ದು , ನೆಟ್ವರ್ಕ್ ಟವರ್ ,ಪುರುಷೋತ್ತಮ ನಾಯಕ್ ಅವರ ಹೋಟೇಲ್ ,ಡೈರಿ ಪ್ರದೇಶ ಹಾಗೂ ರಸ್ತೆಗಳಲ್ಲಿ ಐದು ಅಡಿಗಳಷ್ಟು ನೀರು ನಿಂತಿದ್ದು

ಅಣೆಕಟ್ಟು ನಿರ್ಮಾಣಕ್ಕೆ ಸಂಬಂಧಿತ ಸಾಮಾನುಗಳು ನೀರಿನಲ್ಲಿ ಮುಳುಗಿದೆ.
ನಲವತ್ತಾರು ವರ್ಷಗಳ ಹಿಂದೆ ಇಂತಹ ಪ್ರವಾಹ ಬಂದಿದ್ದು ಮತ್ತೊಮ್ಮೆ ಮಳೆಯ ಅಬ್ಬರವು ಹೆಚ್ಚಾಗಿದೆ.
ಕಾರ್ಕಳ ಅಜೆಕಾರು ರಾಜ್ಯ ಹೆದ್ದಾರಿ ಮುಳುಗಡೆಯಾಗಿದ್ದು ಸಂಚಾರಕ್ಕಾಗಿ ಹೆಬ್ರಿ ಅಜೆಕಾರು ಕೆರುವಾಶೆಯತ್ತ ರಸ್ತೆ ಬಳಸಿ ಸಾಗಬೇಕಾದ ಅನಿವಾರ್ಯತೆ ಉಂಟಾಗಿದೆ.
ಮಾಣೈ ಹಾಗು ಹಿರಿಯಡ್ಕ ನಡುವಿನ ಸೇತುವೆ ಸೇರಿದಂತೆ ರಸ್ತೆ ಸಂಚಾರವೇ ಕಡಿತಗೊಂಡಿದೆ.

ನೆರೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಯಾದ ಹಿರಿಯಡ್ಕ ಪುತ್ತಿಗೆ ಸೇತುವೆ ಬಂದಾಗಿದ್ದು ಸಂಪರ್ಕ ಕಡಿತಗೊಂಡಿದೆ. ಬಂದಾಗಿದ್ದು
ಉಡುಪಿಯ ಕಲ್ಸಂಕ ಮಠದ ಕೆರೆ ಬೈಲಕೆರೆ ನಿಟ್ಟೂರು ಕೊಡಂಕೂರು ಚಿಟ್ಪಾಡಿ ಕೆಮ್ಮಣ್ಣು,ಕುದುರು ಸೇರಿದಂತೆ ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

ಹವಾಮಾನ ಇಲಾಖೆ ಮತ್ತೆ ಮೂರು ದಿನ ರೆಡ್ ಎಲರ್ಟ್ ಘೋಷಿಸಿದ್ದು ಭಾರಿ ಗಾಳಿ ಮಳೆಯಾಗುವ ಮುನ್ಸೂಚನೆ ನೀಡಿದೆ.