ಛಾಯಾಗ್ರಾಹಕ ಪೋಕಸ್ ರಾಘು ಅವರಿಗೆ ಮತ್ತೊಂದು ಅಂತರರಾಷ್ಟ್ರೀಯ ಪ್ರಶಸ್ತಿ

ಉಡುಪಿ: ಉಡುಪಿಯ ಪ್ರಖ್ಯಾತ ಛಾಯಾಗ್ರಾಹಕ ಪೋಕಸ್ ರಾಘು  ಅವರಿಗೆ ಟರ್ಕೀ ದೇಶದ ಅಂತರರಾಷ್ಟ್ರೀಯ  ಮತ್ತೊಂದು ಪ್ರಶಸ್ತಿ ಲಭಿಸಿವೆ. ಈ ಚಿತ್ರಕ್ಕೆ ಟರ್ಕಿ ದೇಶದ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ (7th international photography contest of AFAD) CLUB DIPLOMA ಪ್ರಶಸ್ತಿ ಬಂದಿದೆ. ವಿಶ್ವ ದ ವಿವಿಧ ದೇಶಗಳ  ಸಾವಿರಕ್ಕೂ  ಹೆಚ್ಚು ಛಾಯಾಚಿತ್ರಗಳು ಈ ಸ್ಪರ್ಧೆಯಲ್ಲಿದ್ದವು. ಮದುವೆ ಜೋಡಿಯ ವೆಡ್ಡಿಂಗ್ ಕಾನ್ಸೆಪ್ಟ್ ಶೂಟ್ ಒಪನ್ ಕಲರ್ ಪ್ರಿಂಟ್ ಸೆಕ್ಷನ್ ವಿಭಾಗದಲ್ಲಿ  ಟರ್ಕಿ ದೇಶದ ಏಳನೆ ಅಂತರರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದು […]

ಕೊರೊನಾ ವಾರಿಯರ್ಸ್ ಗಳ ಬೇಡಿಕೆ, ಸಮಸ್ಯೆಯ ಬಗ್ಗೆ ಸರಕಾರದ ಅಸಡ್ಡೆ ಸರಿಯಲ್ಲ: ರಮೇಶ್ ಕಾಂಚನ್

ಉಡುಪಿ: ಕೊರೊನಾ ಬಂದಾಗಿನಿಂದಲೂ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಹಗಲಿರುಳು ಎನ್ನದೇ ದುಡಿಯುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಮಾತ್ರ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ ಎಂದು ಉಡುಪಿ ನಗರಸಭಾ ಸದಸ್ಯ ರಮೇಶ್ ಕಾಂಚನ್ ದೂರಿದ್ದಾರೆ. ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ಮಾದರಿಯಲ್ಲಿ ವೇತನ ಪರಿಷ್ಕರಣೆ ಮಾಡಬೇಕು ಎನ್ಮುವುದು ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮನವಿ ಮಾಡಿತ್ತು. ಆದರೆ ಸರ್ಕಾರ ಈ ಬಗ್ಗೆ ಯಾವುದೇ ಸ್ಪಂದನೆ ನೀಡದೆ, ಅಸಡ್ಡೆ ತೋರಿದೆ […]

ಕೊಲ್ಲೂರಿನಿಂದ ಕೊಡಚಾದ್ರಿಗೆ ರೋಪ್ ವೇ ನಿರ್ಮಾಣ: ಡಿಪಿಆರ್ ಸರ್ವೇ ಕಾರ್ಯಕ್ಕೆ ಚಾಲನೆ

ಕುಂದಾಪುರ: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಚಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಿಸಲು ಸರ್ಕಾರ ಮುಂದಾಗಿದೆ. ಕೊಲ್ಲೂರು ಶ್ರೀ ಮೂಕಾಂಬಿಕೆ ಕ್ಷೇತ್ರದಿಂದ ಕೊಡಚಾದ್ರಿಗೆ ತೆರಳಲು ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅತ್ಯಾಧುನಿಕ ಮಾದರಿಯಲ್ಲಿ ರೋಪ್ ವೇ ನಿರ್ಮಿಸಲು ಉದ್ದೇಶಿಸಲಾಗಿದ್ದು, ಅದರ ಡಿ.ಪಿ.ಆರ್. ಸರ್ವೇ ಕಾರ್ಯಕ್ಕೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಇಂದು ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಶಾಸಕರು, ಕೊಲ್ಲೂರಿನಿಂದ ಕೊಡಚಾದ್ರಿಗೆ ರೋಪ್ ವೇ ನಿರ್ಮಿಸುವುದು ಬಹುವರ್ಷಗಳ ಕನಸು. ಇದರಿಂದ ಮತ್ತಷ್ಟು […]

ಭಾರತದಲ್ಲಿ ಚೀನಾ ಕಂಪೆನಿಯ ಬೇಹುಗಾರಿಕೆ: ಪ್ರಧಾನಿ, ರಾಷ್ಟ್ರಪತಿ, ಸೇನಾ ಮುಖ್ಯಸ್ಥರ ಮಾಹಿತಿ ಸಂಗ್ರಹಕ್ಕೆ ಸಂಚು

ನವದೆಹಲಿ: ಪ್ರಧಾನಿ, ಮುಖ್ಯಮಂತ್ರಿಗಳು, ಮಿಲಿಟರಿ, ಉದ್ಯಮಿಗಳು, ರಕ್ಷಣಾ ಸಚಿವಾಲಯ ಸಿಬ್ಬಂದಿ, ಸಂಸದರು ಕೆಲವು ರೌಡಿಶೀಟರ್ ಗಳು ಸೇರಿದಂತೆ ಪ್ರತಿದಿನ ಭಾರತದ 150 ದಶಲಕ್ಷಗಳ ಆನ್ ಲೈನ್ ಡೇಟಾವನ್ನು ಚೀನಾ ಮೂಲದ ಸಂಸ್ಥೆ ಕಲೆಹಾಕಿರುವ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಭಾರತದೊಂದಿಗೆ ಪೂರ್ವ ಲಡಾಖ್ ಗಡಿಯಲ್ಲಿ ಸಂಘರ್ಷಕ್ಕೆ ಇಳಿದಿರುವ ಚೀನಾ ಇದೀಗ ದೇಶದ ಪ್ರತಿಷ್ಠಿತ ವ್ಯಕ್ತಿಗಳ ಮೇಲೆ ಕಳ್ಳಗಣ್ಣು ನೆಟ್ಟಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸೇರಿದಂತೆ ಬರೋಬ್ಬರಿ 1,350ಕ್ಕೂ […]

ಅಮಾಸೆಬೈಲು: ಎರಡು ಈಚರ್ ವಾಹನಗಳಲ್ಲಿ 52 ಕೋಣಗಳ ಅಕ್ರಮ ಸಾಗಾಟ; ನಾಲ್ಕು ಆರೋಪಿಗಳ ಬಂಧನ

ಕುಂದಾಪುರ: ಕುಂದಾಪುರ ತಾಲ್ಲೂಕಿನ ಅಮಾಸೆಬೈಲು ಠಾಣಾ ವ್ಯಾಪ್ತಿಯ ಹೊಸಂಗಡಿ ಚೆಕ್ ಪೋಸ್ಟ್ ನಲ್ಲಿ ಇಂದು ಬೆಳಿಗ್ಗೆ 9.30 ಸುಮಾರಿಗೆ 52 ಕೋಣಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಈಚರ್ ವಾಹನಗಳನ್ನು ಪೊಲೀಸರು ತಡೆದು ವಶಕ್ಕೆ ಪಡೆದಿದ್ದು, ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಮೆಹಬೂಬ್ ಪ್ರಾಯ (27), ಬೈಲಹೊಂಗಲ ತಾಲ್ಲೂಕಿನ ಬೆಳವಾಡಿಯ ಬಾಪು ಸಾಹೇಬ್ ( 46), ದಾವಣಗೆರೆ ಜಿಲ್ಲೆಯ ಚಿಕ್ಕನಹಳ್ಳಿ ಹೊಸ ಬಡಾವಣೆ ಇಮ್ರಾನ್ ( 29 ) ಹಾಗೂ ಬೈಲಹೊಂಗಲ […]