ನೀಲಾವರ ಗೋಶಾಲೆಯಲ್ಲಿ ವೈಭವದ ಮೊಸರು ಕುಡಿಕೆ ಉತ್ಸವ

ಉಡುಪಿ: ನೀಲಾವರ ಗೋಶಾಲೆಯಲ್ಲಿ ಇದೇ ಪ್ರಥಮ ಬಾರಿಗೆ ಶ್ರೀಕೃಷ್ಣಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವ ಶುಕ್ರವಾರ ಸಂಭ್ರಮದಿಂದ ನಡೆಯಿತು. ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಶ್ರೀಕೃಷ್ಣನ ಉತ್ಸವ ಮೂರ್ತಿ ಪೂಜೆ ಸಲ್ಲಿಸಿದರು. ಮಧ್ಯಾಹ್ನ ನಡೆದ ಕೃಷ್ಣಲೀಲೋತ್ಸವವನ್ನು ಶ್ರೀಗಳ ವಿದ್ಯಾರ್ಥಿಗಳು ಮತ್ತು ಸಿಬಂದಿ ವರ್ಗ  ಅತ್ಯಂತ ವಿಶಿಷ್ಟವಾಗಿ ಸಂಯೋಜಿಸಿದರು. ಹತ್ತಾರು ವಿದ್ಯಾರ್ಥಿಗಳು ತಾವೇ ಸ್ವಯಂ ಗೋಪಾಲಕರಾಗಿ ಗೋಶಾಲೆಯ ಆವರಣದಲ್ಲಿ ನಡೆದ ಮೆರವಣಿಗೆಯಲ್ಲಿ ಭಾಹವಹಿಸಿ,  ಅಲ್ಲಲ್ಲಿ ತೂಗು ಹಾಕಿದ್ದ  ಬಣ್ಣದ ಓಕುಳಿ , ಮೊಸರು , ಚಕ್ಕುಲಿ ಉಂಡೆ  ಬೆಣ್ಣೆ […]

ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆರೋಗ್ಯ ಹಸ್ತ ಕಾರ್ಯಕರ್ತರಿಗೆ ಆರೋಗ್ಯ ಕಿಟ್ ವಿತರಣೆ

ಉಡುಪಿ: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಕ್ಷದ ಆರೋಗ್ಯ ಹಸ್ತ ಕಾರ್ಯಕರ್ತರಿಗೆ ಆರೋಗ್ಯ ಕಿಟ್ ವಿತರಣೆ  ಹಾಗೂ ಮಾಹಿತಿ ಕಾರ್ಯಾಗಾರ ಇಂದು ನಡೆಯಿತು. ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಮನೆ ಮನೆ ಭೇಟಿ ನೀಡಿ ಕೊರೊನಾ ಜಾಗೃತಿ ಮೂಡಿಸುತ್ತಿರುವ ಪಕ್ಷದ ಕೊರೊನಾ ವಾರಿಯರ್ಸ್ ಗಳ ಕಾರ್ಯ ಶ್ಲಾಘನೀಯವಾದುದು. ಕೊರೊನಾ ಲಕ್ಷಣ ಇರುವ ಜನರನ್ನು ವೈದ್ಯರನ್ನು ಸಂಪರ್ಕಿಸುವಂತೆ ಮಾಹಿತಿ ನೀಡುವುದರ ಮೂಲಕ ಕೊರೊನಾ ತಡೆಗಟ್ಟಲು ವಾರಿಯರ್ಸ್ ಗಳು ಶ್ರಮಿಸಬೇಕು ಎಂದರು. ಕೆಪಿಸಿಸಿ ವೀಕ್ಷಕರಾದ ಪುರುಷೋತ್ತಮ […]

ಮಂಡ್ಯ ದೇವಳದಲ್ಲಿ ಅರ್ಚಕರ ಹತ್ಯೆ: ಪೇಜಾವರ ಶ್ರೀ ಖಂಡನೆ 

ಉಡುಪಿ: ಮಂಡ್ಯದ ಪ್ರಾಚೀನ ಅರ್ಕೇಶ್ವರ ಸ್ವಾಮೀ ದೇವಸ್ಥಾನದಲ್ಲಿ ಮೂವರು ಅರ್ಚಕರನ್ನು ಬರ್ಬರವಾಗಿ ಹತ್ಯೆಗೈದು, ಬೆಲೆಬಾಳುವ ಸೊತ್ತುಗಳನ್ನು ದೋಚಿರುವ ಪೈಶಾಚಿಕ ಕೃತ್ಯವನ್ನು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರವಾಗಿ ಖಂಡಿಸಿದ್ದಾರೆ. ಪವಿತ್ರ ಸ್ಥಳದಲ್ಲಿ ನಡೆದಿರುವ ಈ ದುಷ್ಕೃತ್ಯದಿಂದ ಅತ್ಯಂತ ವಿಷಾದವಾಗಿದೆ. ಈ ಕೃತ್ಯವನ್ನು ನಡೆಸಿದ ದುರುಳರನ್ನು ಸರಕಾರ ಶೀಘ್ರ ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಮೃತ ಅರ್ಚಕರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು. ನಾಡಿನಲ್ಲಿ ಇಂತಹ ಅಮಾನವೀಯ ಘಟನೆಗಳು ಮುಂದೆಂದೂ ನಡೆಯದಂತೆ ಸಮಾಜ ಮತ್ತು […]

ಡ್ರಗ್ಸ್ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಡಿಸಿಗೆ ಮನವಿ

ಉಡುಪಿ: ಮಾದಕ ವಸ್ತುಗಳ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ಅವರ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಇಂದು ಮನವಿ ಸಲ್ಲಿಸಲಿಸಿತು. ಮಾದಕ ವಸ್ತುಗಳ ಮಾರಾಟ, ಬಳಕೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಮೂಲಕ ಉಡುಪಿಯನ್ನು ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕು ಎಂದು ನಿಯೋಗವು ಆಗ್ರಹಿಸಿದೆ. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಅಕ್ಷಿತ್ […]

ಉಡುಪಿ ಕೃಷ್ಣಮಠ: ಮಳೆಯ ನಡುವೆಯೇ ವಿಟ್ಲಪಿಂಡಿ ಉತ್ಸವ ಸಂಪನ್ನ

ಉಡುಪಿ: ಕೊರೊನಾ ಕಾರಣದಿಂದ ಇದೇ ಮೊದಲ ಬಾರಿಗೆ ಭಕ್ತ ಸಮೂಹದ ಅನುಪಸ್ಥಿತಿಯಲ್ಲಿ ಶ್ರೀಕೃಷ್ಣನ ಜನ್ಮವನ್ನು ಸ್ಮರಿಸುವ, ಸಂಭ್ರಮಿಸುವ ವಿಟ್ಲಪಿಂಡಿ ಉತ್ಸವ ಉಡುಪಿ ಕೃಷ್ಣಮಠದಲ್ಲಿ ಇಂದು ಮಳೆಯ ಜೊತೆಯಲ್ಲಿ ಸರಳ ರೀತಿಯಲ್ಲಿ ಸಂಪ್ರದಾಯದಂತೆ ನೆರವೇರಿತು. ಶ್ರೀಕೃಷ್ಣ ಮುಖ್ಯಪ್ರಾಣರಿಗೆ ಪರ್ಯಾಯ ಈಶಪ್ರಿಯತೀರ್ಥ ಶ್ರೀಪಾದರು ಪೂಜೆ ಸಲ್ಲಿಸಿದರು. ಬಳಿಕ ರಥಬೀದಿಯಲ್ಲಿ ವೈಭವದ ವಿಟ್ಲಪಿಂಡಿ ಮೆರವಣಿಗೆ ನಡೆಯಿತು. ಕೊರೊನಾ ಬಿಕ್ಕಟ್ಟಿನ ನಡುವೆ ಉತ್ಸವಕ್ಕೆ ಸುಮಾರು ನೂರರ ಆಸುಪಾಸಿನ ಸಂಖ್ಯೆಯಲ್ಲಿ ಭಕ್ತರು ಸಾಕ್ಷಿಯಾದರು.   ವಿಟ್ಲಪಿಂಡಿ ಉತ್ಸವದ ಅಂಗವಾಗಿ ಮಣ್ಣಿನಿಂದ ತಯಾರಿಸಿದ ಶ್ರೀಕೃಷ್ಣನ ಮೂರ್ತಿಯನ್ನು […]