udupixpress
Home Trending ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆರೋಗ್ಯ ಹಸ್ತ ಕಾರ್ಯಕರ್ತರಿಗೆ ಆರೋಗ್ಯ ಕಿಟ್ ವಿತರಣೆ

ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆರೋಗ್ಯ ಹಸ್ತ ಕಾರ್ಯಕರ್ತರಿಗೆ ಆರೋಗ್ಯ ಕಿಟ್ ವಿತರಣೆ

ಉಡುಪಿ: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಕ್ಷದ ಆರೋಗ್ಯ ಹಸ್ತ ಕಾರ್ಯಕರ್ತರಿಗೆ ಆರೋಗ್ಯ ಕಿಟ್ ವಿತರಣೆ  ಹಾಗೂ ಮಾಹಿತಿ ಕಾರ್ಯಾಗಾರ ಇಂದು ನಡೆಯಿತು.
ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಮನೆ ಮನೆ ಭೇಟಿ ನೀಡಿ ಕೊರೊನಾ ಜಾಗೃತಿ ಮೂಡಿಸುತ್ತಿರುವ ಪಕ್ಷದ ಕೊರೊನಾ ವಾರಿಯರ್ಸ್ ಗಳ ಕಾರ್ಯ ಶ್ಲಾಘನೀಯವಾದುದು. ಕೊರೊನಾ ಲಕ್ಷಣ ಇರುವ ಜನರನ್ನು ವೈದ್ಯರನ್ನು ಸಂಪರ್ಕಿಸುವಂತೆ ಮಾಹಿತಿ ನೀಡುವುದರ ಮೂಲಕ ಕೊರೊನಾ ತಡೆಗಟ್ಟಲು ವಾರಿಯರ್ಸ್ ಗಳು ಶ್ರಮಿಸಬೇಕು ಎಂದರು.
ಕೆಪಿಸಿಸಿ ವೀಕ್ಷಕರಾದ ಪುರುಷೋತ್ತಮ ಚಿತ್ರ ಬೈಲು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವೀಕ್ಷಕರಾದ ಪ್ರಖ್ಯಾತ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಕೆಪಿಸಿಸಿ ಸದಸ್ಯೆ ವೆರೋನಿಕಾ ಕರ್ನೆಲಿಯೊ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ಕೀರ್ತಿ ಶೆಟ್ಟಿ, ಡಾ. ಸುನೀತಾ ಶೆಟ್ಟಿ, ರೋಶನಿ ಓಲಿವರ್, ಡಾ. ಗೋಪಾಲ ಪೂಜಾರಿ, ದಿನಕರ್ ಹೇರೂರು, ರಾಜೇಶ್ ಶೆಟ್ಟಿ, ನಿತ್ಯಾನಂದ ಕೆಮ್ಮಣ್ಣು, ರಘುರಾಮ್ ಶೆಟ್ಟಿ, ವೆಂಕಟೇಶ್ ಸುವರ್ಣ, ಹರೀಶ್ ಕೀಳಿಂಜೆ, ಉಮೇಶ್ ಶೆಟ್ಟಿ, ಮಹೇಶ್ ಮೊಯ್ಲಿ, ಸತೀಶ್ ಸಾಲಿಯಾನ್, ಪ್ರಶಾಂತ್ ಪೂಜಾರಿ, ಹರೀಶ್ ಶೆಟ್ಟಿ, ವಿವೇಕ್ ಶೆಟ್ಟಿ, ತಾಜುದ್ದೀನ್, ಸಂಪತ್ ಗುಜ್ಜರಬೆಟ್ಟು, ರಕ್ಷೀತ್, ಹರೀಶ್, ಶಬರೀಶ್, ಗುರುರಾಜ್ ಕುಮಾರ್ ಹಾರಾಡಿ, ಮೆಲ್ಕೋನ್ ಮೊಂತೆರೋ, ಮಹ್ಮದ್ ರಿಯಾಜ್ ಹಾಗೂ ಇತರರು ಉಪಸ್ಥಿತರಿದ್ದರು.
error: Content is protected !!