ಈ ಕಪ್ಪೆ ಆಹಾರಕ್ಕಾಗಿ ಮಾಡಿದ ಕಸರತ್ತನ್ನು ನೋಡಿದ್ರೆ ನೀವು ಬೆಚ್ಚಿ ಬೀಳುತ್ತೀರಾ.!

ಕಾರವಾರ: ಪ್ರಾಣಿ, ಪಕ್ಷಿಗಳು ಹೊಟ್ಟೆ ಪಾಡಿಗಾಗಿ ನಿತ್ಯ ಸಂಘರ್ಷ ನಡೆಸುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಕಾರವಾರ ತಾಲ್ಲೂಕಿನ ಕಡವಾಡ ಸಮೀಪದ ಹಳೆಕೋಟೆ ಎಂಬಲ್ಲಿ ‘ಗೊಂಕರ ಕಪ್ಪೆ’ಯೊಂದು (ಇಂಡಿಯನ್ ಬುಲ್‌ಫ್ರಾಗ್) ಮರಕಪ್ಪೆಯನ್ನು (ಟ್ರೀ ಫ್ರಾಗ್) ಬೇಟೆಯಾಡಿ ನುಂಗಿದ ವಿಚಿತ್ರ ಘಟನೆ ಭಾರೀ ವೈರಲ್ ಆಗಿದೆ. ಕಾಳಿಂಗ ಸರ್ಪವು ಕೇರೆ ಸಹಿತ ಇನ್ನಿತರ ಹಾವುಗಳನ್ನು ಬೇಟೆಯಾಡುತ್ತವೆ. ಯಾವುದೇ ಆಹಾರ ಸಿಗದಿದ್ದಾಗ ಕಾಳಿಂಗ ಸರ್ಪವನ್ನೇ ತಿನ್ನುತ್ತವೆ. ಅದೇ ರೀತಿಯಲ್ಲಿ ಗೋಂಕರ ಕಪ್ಪೆಯು ಸಣ್ಣ ಕಪ್ಪೆಗಳನ್ನು ಬೇಟೆಯಾಡುತ್ತದೆ. ಕಪ್ಪೆಗಳು ತಮಗೆ ಸಿಗುವ […]

ಮರಣೋತ್ತರ ಪರೀಕ್ಷೆ ಬಗ್ಗೆ ಸಂಶಯ: ನಟ ಸುಶಾಂತ್ ಸಿಂಗ್ ಗೆ ವಿಷಕೊಟ್ಟು ಕೊಲೆ ಮಾಡಿದ್ರಾ.?

ಮುಂಬೈ: ನಟ ಸುಶಾಂತ್ ಸಿಂಗ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ನಟನ ಮರಣೋತ್ತರ ಪರೀಕ್ಷೆಯ ಬಗ್ಗೆಯೂ ಸಾಕಷ್ಟು ಅನುಮಾನಗಳು ವ್ಯಕ್ಯವಾಗಿದೆ. ಸುಶಾಂತ್ ಸಿಂಗ್ ಕುತ್ತಿಗೆಯ ಹಗ್ಗದ ಗುರುತು ಬಗ್ಗೆ ಸಾಕಷ್ಟು ಸಂಶಯ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಯ ಪ್ರಯೋಗಾಲಯದ ವೈದ್ಯ ಸುಧೀರ್ ಗುಪ್ತಾ ನೇತೃತ್ವದ ತಜ್ಞ ವೈದ್ಯರ ತಂಡವು ತನಿಖೆ ನಡೆಸುತ್ತಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಮುಂಬೈನ ಕೂಪರ್ ಆಸ್ಪತ್ರೆಯ ವೈದ್ಯರ ತೀವ್ರ ವಿಚಾರಣೆ ನಡೆಸುತ್ತಿದೆ. ಮರಣೋತ್ತರ ಪರೀಕ್ಷೆಯಲ್ಲಿ ಕೂಪರ್ ಆಸ್ಪತ್ರೆಯ ವೈದ್ಯರು […]

ಉಡುಪಿಯಲ್ಲಿ ಇಂದು 113 ಮಂದಿಗೆ ಕೊರೊನಾ ಪಾಸಿಟಿವ್: 21 ವರ್ಷದ ಯುವಕ ಸಹಿತ ಇಬ್ಬರು ಕೊರೊನಾಗೆ ಬಲಿ

ಉಡುಪಿ: ಜಿಲ್ಲೆಯಲ್ಲಿ ಇಂದು 113 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 12840 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇನ್ನೂ 1780 ಸಕ್ರಿಯ ಕೊರೊನಾ ಸೋಂಕಿತರಿದ್ದು, 882 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 898 ಮಂದಿ ಸೋಂಕಿತರು ಹೋಮ್ ಐಸೋಲೇಷನ್ ನಿಗಾದಲ್ಲಿದ್ದಾರೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. *183 ಮಂದಿ ಗುಣಮುಖ* ಜಿಲ್ಲೆಯಲ್ಲಿ ಇಂದು 183 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 74 […]

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ: ಮಂಗಳೂರಿನ ಪೃಥ್ವಿ ಶೆಟ್ಟಿ ಬಂಧನ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆಯ ಜತೆಗೆ ನಂಟು ಹೊಂದಿರುವ ಆರೋಪದಡಿ ಮಂಗಳೂರಿನ ಪೃಥ್ವಿ ಶೆಟ್ಟಿ‌ ಎಂಬಾಕೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈಕೆ ನಟಿ ಸಂಜನಾ ಗಲ್ರಾನಿ ಹಾಗೂ ಆಕೆಯ ಆಪ್ತ ರಾಹುಲ್ (ಡ್ರಗ್ಸ್ ಪೆಡ್ಲರ್) ನೊಂದಿಗೆ ಸಂಪರ್ಕ ಹೊಂದಿದ್ದರು. 2015ರಿಂದ ಇವರೊಂದಿಗೆ ಸಂಪರ್ಕದಲ್ಲಿದ್ದಳು ಎಂದು ತಿಳಿದುಬಂದಿದೆ. ಪೃಥ್ವಿ ಇವೆನ್ಟ್ ಮ್ಯಾನೇಜ್ಮೆಂಟ್ ನಡೆಸುತ್ತಿದ್ದು, ಈ ವ್ಯವಹಾರದೊಂದಿಗೆ ಸಂಜನಾಳ ಪರಿಚಯವಾಗಿದೆ ಎನ್ನಲಾಗಿದೆ. ಇವರ ನಡುವೆ ಇವೆನ್ಟ್ ಮ್ಯಾನೇಜ್ಮೆಂಟ್ ಸೇರಿದಂತೆ ಇತರ ವ್ಯವಹಾರಗಳಿವೆ ಎನ್ನುವುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. […]

ಉಡುಪಿ, ದ.ಕ. ಜಿಲ್ಲೆಯ ಐದು ಟೋಲ್ ಗೇಟ್ ಗಳಲ್ಲಿ ಹಗಲು ದರೋಡೆ: ಯೋಗೀಶ್ ಶೆಟ್ಟಿ

ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೇವಲ 93 ಕಿ.ಮೀ. ಅಂತರದಲ್ಲಿ ಇರುವ ಐದು ಟೋಲ್ ಗಳಲ್ಲಿ ಪ್ರತಿದಿನ ಹಗಲು ದರೋಡೆ ನಡೆಯುತ್ತಿದೆ ಎಂದು ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಆರೋಪಿಸಿದ್ದಾರೆ. ಕಾನೂನು ಪ್ರಕಾರ ರಸ್ತೆ ನಿರ್ವಹಣಾ ಶುಲ್ಕ ಸಂಗ್ರಹಿಸುವ ಟೋಲ್ ಗೇಟ್ ಗಳು ಕನಿಷ್ಠ 60 ಕಿ.ಮೀ. ಅಂತರದಲ್ಲಿ ಇರಬೇಕು. ಆದರೆ ಉಭಯ ಜಿಲ್ಲೆಗಳಲ್ಲಿ ಕೇವಲ 93 ಕಿ.ಮೀ. ಅಂತರದಲ್ಲಿ ಐದು ಟೋಲ್ ಗಳಿವೆ. ಇದರ ಮೂಲಕ ವಾಹನ ಚಾಲಕರನ್ನು ಲೂಟಿ ಮಾಡುವ […]