udupixpress
Home Trending ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ: ಮಂಗಳೂರಿನ ಪೃಥ್ವಿ ಶೆಟ್ಟಿ ಬಂಧನ

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ: ಮಂಗಳೂರಿನ ಪೃಥ್ವಿ ಶೆಟ್ಟಿ ಬಂಧನ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆಯ ಜತೆಗೆ ನಂಟು ಹೊಂದಿರುವ ಆರೋಪದಡಿ ಮಂಗಳೂರಿನ ಪೃಥ್ವಿ ಶೆಟ್ಟಿ‌ ಎಂಬಾಕೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಈಕೆ ನಟಿ ಸಂಜನಾ ಗಲ್ರಾನಿ ಹಾಗೂ ಆಕೆಯ ಆಪ್ತ ರಾಹುಲ್ (ಡ್ರಗ್ಸ್ ಪೆಡ್ಲರ್) ನೊಂದಿಗೆ ಸಂಪರ್ಕ ಹೊಂದಿದ್ದರು. 2015ರಿಂದ ಇವರೊಂದಿಗೆ ಸಂಪರ್ಕದಲ್ಲಿದ್ದಳು ಎಂದು ತಿಳಿದುಬಂದಿದೆ.

ಪೃಥ್ವಿ ಇವೆನ್ಟ್ ಮ್ಯಾನೇಜ್ಮೆಂಟ್ ನಡೆಸುತ್ತಿದ್ದು, ಈ ವ್ಯವಹಾರದೊಂದಿಗೆ ಸಂಜನಾಳ ಪರಿಚಯವಾಗಿದೆ ಎನ್ನಲಾಗಿದೆ. ಇವರ ನಡುವೆ ಇವೆನ್ಟ್ ಮ್ಯಾನೇಜ್ಮೆಂಟ್ ಸೇರಿದಂತೆ ಇತರ ವ್ಯವಹಾರಗಳಿವೆ ಎನ್ನುವುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈಕೆ ಹಾಗೂ ಸಂಜನಾಳ ನಡುವೆ ಡ್ರಗ್ಸ್ ಖರೀದಿ, ಮಾರಾಟದ ವ್ಯವಹಾರ ಇತ್ತಾ ಎಂಬುವುದರ ಬಗ್ಗೆಯೂ‌ ತನಿಖೆ ನಡೆಯಲಿದೆ. ಒಂದು ವೇಳೆ ಡ್ರಗ್ಸ್ ನಂಟು ಇರುವುದು ಸಾಬೀತಾದರೆ ಈಕೆಯೊಂದಿಗೆ ನಟಿ ಸಂಜನಾಳನ್ನು ಕೂಡ ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.