ಈ ಕಪ್ಪೆ ಆಹಾರಕ್ಕಾಗಿ ಮಾಡಿದ ಕಸರತ್ತನ್ನು ನೋಡಿದ್ರೆ ನೀವು ಬೆಚ್ಚಿ ಬೀಳುತ್ತೀರಾ.!

ಕಾರವಾರ: ಪ್ರಾಣಿ, ಪಕ್ಷಿಗಳು ಹೊಟ್ಟೆ ಪಾಡಿಗಾಗಿ ನಿತ್ಯ ಸಂಘರ್ಷ ನಡೆಸುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಕಾರವಾರ ತಾಲ್ಲೂಕಿನ ಕಡವಾಡ ಸಮೀಪದ ಹಳೆಕೋಟೆ ಎಂಬಲ್ಲಿ ‘ಗೊಂಕರ ಕಪ್ಪೆ’ಯೊಂದು (ಇಂಡಿಯನ್ ಬುಲ್‌ಫ್ರಾಗ್) ಮರಕಪ್ಪೆಯನ್ನು (ಟ್ರೀ ಫ್ರಾಗ್) ಬೇಟೆಯಾಡಿ ನುಂಗಿದ ವಿಚಿತ್ರ ಘಟನೆ ಭಾರೀ ವೈರಲ್ ಆಗಿದೆ.

ಕಾಳಿಂಗ ಸರ್ಪವು ಕೇರೆ ಸಹಿತ ಇನ್ನಿತರ ಹಾವುಗಳನ್ನು ಬೇಟೆಯಾಡುತ್ತವೆ. ಯಾವುದೇ ಆಹಾರ ಸಿಗದಿದ್ದಾಗ ಕಾಳಿಂಗ ಸರ್ಪವನ್ನೇ ತಿನ್ನುತ್ತವೆ. ಅದೇ ರೀತಿಯಲ್ಲಿ ಗೋಂಕರ ಕಪ್ಪೆಯು ಸಣ್ಣ ಕಪ್ಪೆಗಳನ್ನು ಬೇಟೆಯಾಡುತ್ತದೆ. ಕಪ್ಪೆಗಳು ತಮಗೆ ಸಿಗುವ ಸಣ್ಣ ಜೀವಿಗಳನ್ನು ಹಿಡಿದು ನುಂಗುತ್ತವೆ. ಇದು ಸಹಜ ಪ್ರಕ್ರಿಯೆ ಆಗಿದೆ ಎನ್ನುತ್ತಾರೆ ಸಂಶೋಧಕರು.

ಕ‍ಪ್ಪೆಗಳಿಗೆ ಏನೇ ತಿಂದರೂ ಜೀರ್ಣಿಸಿಕೊಳ್ಳುವ ಸಾಮರ್ಥ್ಯವಿದೆ. ಇದು ನಿಸರ್ಗದಲ್ಲಿ ಸಮತೋಲನ ಕಾಪಾಡಲು ಇರುವ ಮಾರ್ಗವು ಆಗಿದೆ. ಗೋಂಕರ ಕಪ್ಪೆಗಳು ಸರಿಸುಮಾರು ಏಳೆಂಟು ಕೆ.ಜಿ ತೂಕದವರೆಗೂ ಬೆಳೆಯುತ್ತವೆ. ಉಡುಪಿ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಈ ಪ್ರಭೇದದ ಕಪ್ಪೆಗಳು ಕಾಣಸಿಗುತ್ತವೆ. ಈ ಪ್ರಭೇದದ ಕಪ್ಪೆಗಳು, ಎಲ್ಲ ರೀತಿಯ ವಾತಾವರಣದಲ್ಲಿ ಜೀವಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.