ಬಿಗ್ ಬಜಾರ್ ಉಡುಪಿ ವತಿಯಿಂದ ಮುದ್ದುಕೃಷ್ಣ ಸ್ಪರ್ಧೆ:
ಉಡುಪಿ: ಬಿಗ್ ಬಜಾರ್ ಉಡುಪಿ ವತಿಯಿಂದ ಹತ್ತನೇ ವರ್ಷದ ಮುದ್ದುಕೃಷ್ಣ ಸ್ಪರ್ಧೆಯು ಆನ್ಲೈನ್ ಮೂಲಕ ನಡೆಯಲಿದ್ದು ಉಡುಪಿXPRESS ಈ ಸ್ಪರ್ಧೆಗೆ ಮಾಧ್ಯಮ ಸಹಯೋಗ ನೀಡಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವವರು ಸೆ. 6 ರೊಳಗೆ 2 ನಿಮಿಷದ ಈ ಹಿಂದಿನ ವೇದಿಕೆ ವಿಡಿಯೋಗಳನ್ನು ಹೊರತುಪಡಿಸಿ ಉತ್ತಮ ಗುಣಮಟ್ಟದ ವಿಡಿಯೋ ಮಾಡಿ ಮಕ್ಕಳ ಆಧಾರ ಕಾರ್ಡ್ ಅಥವಾ ಜನನ ಪ್ರಮಾಣ ಪತ್ರದೊಂದಿಗೆ ಈ ಕೆಳಗಿನ ವಾಟ್ಸಪ್ ನಂಬರಿಗೆ ಕಳುಹಿಸಿಕೊಡಬೇಕು ಒಬ್ಬರಿಗೆ ಒಂದು ವೀಡಿಯೋ ಮಾತ್ರ ಕಳುಹಿಸಲು ಅವಕಾಶವಿರುತ್ತದೆ ಸ್ಪರ್ಧೆಯಲ್ಲಿ ತೀರ್ಪುಗಾರರ […]
ಉಡುಪಿಯಲ್ಲಿ ಇಂದು 250 ಮಂದಿ ಕೊರೊನಾದಿಂದ ಗುಣಮುಖ: ಇಬ್ಬರು ಕೊರೊನಾಗೆ ಬಲಿ
ಉಡುಪಿ: ಜಿಲ್ಲೆಯಲ್ಲಿ ಇಂದು 250 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 65 ಮಂದಿ ಹಾಗೂ ಹೋಮ್ ಐಸೋಲೇಷನ್ ನಲ್ಲಿದ್ದ 185 ಮಂದಿ ಸಹಿತ 250 ಸೋಂಕಿತರು ಇಂದು ಗುಣಮುಖರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ 9351 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ಇಂದು ಜಿಲ್ಲೆಯಲ್ಲಿ 161 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 11757ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇನ್ನೂ […]
ಗಾಂಜಾ ತುಳಸಿಯಷ್ಟೇ ಶ್ರೇಷ್ಠ, ಅದರಲ್ಲಿ ಔಷಧಿಯ ಗುಣವಿದೆ: ನಟಿ ನಿವೇದಿತಾ
ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾದ ಕಳಂಕ ಮೆತ್ತಿಕೊಂಡಿದ್ದು, ಇದಕ್ಕೆ ಸಂಬಂಧಿಸಿ ನಟ ನಟಿಯರು ಒಂದೊಂದು ರೀತಿಯ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದೀಗ ನಟಿ ನಿವೇದಿತಾ ಗಾಂಜಾ ಕುರಿತು ನೀಡಿರುವ ಹೇಳಿಕೆ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ‘ದೇಶದಲ್ಲಿ ಸಾಕಷ್ಟು ಔಷಧೀಯ ಗುಣಗಳಿರುವ ಗಿಡಗಳಿವೆ. ಅದರಲ್ಲಿ ಗಾಂಜಾ ಕೂಡ ಒಂದಾಗಿದ್ದು, ಆಯುರ್ವೇದದಲ್ಲಿ ಅದಕ್ಕೆ ಒಳ್ಳೆಯ ಸ್ಥಾನವಿದೆ. ಅದು ತುಳಸಿಯಷ್ಟೆ ಶ್ರೇಷ್ಠವಾದದ್ದು’ ಎಂಬ ನಿವೇದಿತಾರ ಹೇಳಿಕೆಯೂ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಗೆ ಎಡೆಮಾಡಿಕೊಟ್ಟಿದೆ. ಸನಾತನ ಧರ್ಮದಲ್ಲಿ ಗಾಂಜಾಗೆ […]
ಮುಂದಿನ 5 ದಿನ ಕರಾವಳಿಯಲ್ಲಿ ಭಾರೀ ಮಳೆಯ ನಿರೀಕ್ಷೆ
ಕರಾವಳಿ: ಮುಂದಿನ ಐದು ದಿನಗಳ ಕಾಲ ಕರಾವಳಿಯಲ್ಲಿ ಭಾರೀ ಗಾಳಿ-ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಕಳೆದ ಕೆಲವು ದಿನಗಳಿಂದ ಕರಾವಳಿಯಲ್ಲಿ ಮಳೆ ಕ್ಷೀಣಿಸಿತ್ತು.ಆಗಸ್ಟ್ ತಿಂಗಳ ಕೊನೆಗೆ ಕಡಿಮೆಯಾಗಿದ್ದ ಮಳೆ ಮಂಗಳವಾರದಿಂದ ಮತ್ತೆ ಸುರಿಯಲಿದೆ ಎಂದು ಇಲಾಖೆ ತಿಳಿಸಿದೆ.
ಮುಂಬೈ ತುಂಗಾ ಆಸ್ಪತ್ರೆಯ ಸ್ಥಾಪಕ, ಕಂಬಳ ಪ್ರೇಮಿ ಮಧ್ವಗುತ್ತು ಭೋಜ ಮೋಹನ್ ಶೆಟ್ಟಿ ವಿಧಿವಶ
ಮುಂಬೈ: ಮುಂಬೈ ತುಂಗಾ ಆಸ್ಪತ್ರೆಗಳ ಸ್ಥಾಪಕ, ಕಂಬಳ ಪ್ರೇಮಿ ಮಧ್ವಗುತ್ತು ಭೋಜ ಮೋಹನ್ ಶೆಟ್ಟಿ(72) ಅವರು ಆ. 31ರಂದು ನಿಧನ ಹೊಂದಿದರು. ಮೃತರು ಪತ್ನಿ ವಸಂತಿ ಭೋಜ ಶೆಟ್ಟಿ (ಬೈಲು ಶೆಟ್ಟಿಪಾಲು ಕೊಳಂಬೆ) ಮಕ್ಕಳಾದ ಹರಿಪ್ರಸಾದ್ ಶೆಟ್ಟಿ, ರಾಜೇಶ್ ಶೆಟ್ಟಿ, ಡಾ, ಸತೀಶ್ ಶೆಟ್ಟಿ, ಪೂಜಾ ಉಮೇಶ್ ಶೆಟ್ಟಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಭೋಜ ಶೆಟ್ಟಿ ಮೂಲತಃ ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಸಮೀಪದ ಮಾಲಾಡಿ ಹೊಸಮನೆಯವರು. ಮಡಂತ್ಯಾರು ವಲಯದ ಬಂಟರ ಸಂಘವನ್ನು ಸ್ಥಾಪಿಸಿ ಅದರ […]