ಸಿಎಂ ಯಡಿಯೂರಪ್ಪನವರ ಆರೋಗ್ಯ ಚೇತರಿಕೆಗೆ ಪೇಜಾವರ ಶ್ರೀಗಳಿಂದ ವಿಶೇಷ ಪ್ರಾರ್ಥನೆ

ಉಡುಪಿ: ಕೊರೊನಾ ಸೋಂಕಿಗೆ ತುತ್ತಾಗಿರುವ ರಾಜ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೂಡಲೇ ಗುಣಮುಖರಾಗಲಿ.‌ ಅವರು ಎಂದಿನಂತೆ ತಮ್ಮ ಉತ್ಸಾಹ -ಚೈತನ್ಯವನ್ನು ತುಂಬಿಕೊಂಡು ನಾಡಿಗೆ ಬಹುಕಾಲ ಸೇವೆ ಸಲ್ಲಿಸುವಂತಾಗಲಿ. ಅವರಿಗೆ ಉತ್ತಮ ಆಯುಷ್ಯ ಆರೋಗ್ಯವನ್ನು ಕರುಣಿಸುವಂತೆ ಉಡುಪಿ ಶ್ರೀ ಕೃಷ್ಣ ಮತ್ತು ನಮ್ಮ ಆರಾಧ್ಯಮೂರ್ತಿ ಶ್ರೀರಾಮ ದೇವರಲ್ಲಿ ವಿಶೇಷವಾಗಿ ಪ್ರಾರ್ಥಿಸುತ್ತೇವೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹಾರೈಸಿದ್ದಾರೆ.

ಆ. 5ರಂದು ಉಡುಪಿಯ ಪೇಜಾವರ ಮಠದಲ್ಲಿ ಸಂಭ್ರಮಾಚರಣೆ, ವಿಶ್ವೇಶತೀರ್ಥ ಶ್ರೀಗಳಿಗೆ ಗೌರವ ಸಮರ್ಪಣೆ

ಉಡುಪಿ: ಆ. 5ರ ಬುಧವಾರದಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲಿದ್ದು, ಅಂದು ಉಡುಪಿಯ ಪೇಜಾವರ ಮಠದಲ್ಲೂ ಸಂಭ್ರಮಾಚರಣೆ ಹಾಗೂ ವಿಶ್ವೇಶತೀರ್ಥ ಶ್ರೀಪಾದರಿಗೆ ಭಕ್ತಿ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಮಠದ ವಾಸುದೇವ ಭಟ್ ತಿಳಿಸಿದ್ದಾರೆ. ರಾಮಮಂದಿರ ನಿರ್ಮಾಣ ಆಂದೋಲನದಲ್ಲಿ ವಿಶ್ವೇಶತೀರ್ಥ ಶ್ರೀಪಾದರ ಕೊಡುಗೆ ಅಪಾರವಾಗಿದೆ. ಅವರು ನೀಡಿರುವ ಮಾರ್ಗದರ್ಶನ, ಸ್ಫೂರ್ತಿ, ನೇತೃತ್ವ ಎಲ್ಲವನ್ನೂ ಸ್ಮರಿಸಿಕೊಂಡು ಅವರ ಭಾವಚಿತ್ರ ಹಾಗೂ ಪೀಠಕ್ಕೆ ವಿಶೇಷ ಅಲಂಕಾರ ಮಾಡಿ ಬೆಳಿಗ್ಗೆ 11.45ರ ವೇಳೆಗೆ ಮಂಗಳಾರತಿ ಬೆಳಗಿಸಲಾಗುವುದು. ಬಳಿಕ ಮಠದ […]

ರಾಮಮಂದಿರ ನಿರ್ಮಾಣವನ್ನು ರಾಜಕೀಯ ದುರುದ್ದೇಶಕ್ಕೆ ಬಳಸಬೇಡಿ: ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್

ಉಡುಪಿ: ರಾಮಮಂದಿರ ನಿರ್ಮಾಣಕ್ಕೆ ಯಾರ ವಿರೋಧವೂ ಇಲ್ಲ. ಭವ್ಯವಾದ ರಾಮಮಂದಿರ ನಿರ್ಮಾಣ ಆಗಬೇಕು. ಅದನ್ನು ಎಲ್ಲರೂ ಸ್ವಾಗತಿಸುತ್ತೇವೆ. ಆದರೆ ದೇವರ ಕೆಲಸ ಆ ಧಾರ್ಮಿಕ ಕ್ಷೇತ್ರಕ್ಕೆ ಸೀಮಿತವಾಗಿರಬೇಕು. ಅದನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುವ ಕೆಲಸ ಆಗಬಾರದು ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಹೇಳಿದರು. ಉಡುಪಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೇಂದ್ರ ಸರ್ಕಾರ ಎಲ್ಲ ರಂಗದಲ್ಲೂ ವಿಫಲವಾಗಿದೆ. ಮೋದಿ ಸರ್ಕಾರ ಆರ್ಥಿಕ ನೀತಿ, ವಿದೇಶಿ ನೀತಿಗಳಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ. ರಾಜ್ಯಗಳನ್ನು ಒಗ್ಗೂಡಿಸಿಕೊಂಡು ದೇಶ ಮುನ್ನಡೆಸುವುದರಲ್ಲಿ ವಿಫಲವಾಗಿದೆ […]

ವಿಶ್ವಕರ್ಮ ಕಲಾ ಸಂಗಮ ವತಿಯಿಂದ ಪಿಯುಸಿ ಸಾಧಕಿ ಶ್ರೀಲಕ್ಷ್ಮೀ ಆಚಾರ್ಯಗೆ ಸನ್ಮಾನ

ಉಡುಪಿ: ಹಿರಿಯ್ಕಡ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ‌ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಶ್ರೀಲಕ್ಷ್ಮೀ ಆಚಾರ್ಯ ಪೆರ್ಡೂರು ಅವರನ್ನು ವಿಶ್ವಕರ್ಮ ಕಲಾ ಸಂಗಮ ಫೇಸ್ಬುಕ್ ಪೇಜ್ ವತಿಯಿಂದ ಭಾನುವಾರ ಪರ್ಕಳದಲ್ಲಿ ಸನ್ಮಾನಿಸಲಾಯಿತು. ಶ್ರೀ ಲಕ್ಷ್ಮೀ ವಾಣಿಜ್ಯ ವಿಭಾಗದಲ್ಲಿ 587 ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದರು. ವಿಶ್ವಕರ್ಮ ಕಲಾ ಸಂಗಮದ ದೀಪಿಕಾ ಗಣೇಶ್ ಆಚಾರ್ಯ ಇವರು ಸನ್ಮಾನಿ ಗೌರವಿಸಿದರು. ಈ ಸಂದರ್ಭದಲ್ಲಿ ಸಾಧನೆಗೈದ ಶ್ರೀಲಕ್ಷ್ಮೀ ಆಚಾರ್ಯ ತಂದೆ […]

ರಾಮಮಂದಿರಕ್ಕೆ ಅಂಜನಾದ್ರಿ ಬೆಟ್ಟದ ಶಿಲೆ: ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ ಮೂಲಕ ಅಯೋಧ್ಯೆಗೆ ರವಾನೆ

ಬೆಂಗಳೂರು: ಶ್ರೀರಾಮಸೇನೆ ಕರ್ನಾಟಕದ ವತಿಯಿಂದ ಹನುಮನ ಜನ್ಮಸ್ಥಳವಾದ ಅಂಜನಾದ್ರಿಯಲ್ಲಿ ತೆಗೆದ ಶಿಲೆಯನ್ನು ಅಯೋಧ್ಯೆಗೆ ಕೊಂಡೊಯ್ಯಲು ರಾಮಮಂದಿರ ನಿರ್ಮಾಣದ ಟ್ರಸ್ಟಿಯು ಆಗುರುವ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಈಚೆಗೆ ಹಸ್ತಾಂತರಿಸಲಾಗಿತ್ತು. ಪೇಜಾವರ ಶ್ರೀಪಾದರು ನೀಲಾವರದ ಶಾಖಾ ಮಠದಲ್ಲಿ ಚಾತುರ್ಮಾಸ್ಯದ ವ್ರತದಲ್ಲಿದ್ದು, ಇದರಿಂದ ಆಗಸ್ಟ್ 5ರಂದು ನಡೆಯುವ ರಾಮಮಂದಿರ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ತೆರಳುತ್ತಿಲ್ಲ. ಹಾಗಾಗಿ ಶ್ರೀಗಳ ಸೂಚನೆಯಂತೆ ಶಿಲೆಯನ್ನು ಕರ್ನಾಟಕದಿಂದ ಅಯೋಧ್ಯೆಗೆ ತೆರಳುತ್ತಿರುವ ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದ ಸ್ವಾಮೀಜಿಗೆ ಭಾನುವಾರ […]