ಆ.5ರಂದು ವಿಶೇಷ ಸಂಭ್ರಮಾಚರಣೆಗೆ ಅವಕಾಶ ಇಲ್ಲ: ಗಂಗೊಳ್ಳಿ ಪೊಲೀಸ್ ಉಪನಿರೀಕ್ಷಕ ಭೀಮಾಶಂಕರ ಎಸ್ ಆದೇಶ

ಕುಂದಾಪುರ : ಅಯೋದ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯದ ಶಿಲಾನ್ಯಾಸ ಆ.5ರಂದು ನಡೆಯಲಿದ್ದು, ಅಂದು ಯಾವುದೇ ವಿಶೇಷ ಸಂಭ್ರಮಾಚರಣೆಗೆ ಅವಕಾಶ ಇಲ್ಲ. ದೇವಸ್ಥಾನ, ಮಂದಿರಗಳಲ್ಲಿ ಜನರು ಸೇರಿಕೊಂಡು ಯಾವುದೇ ರೀತಿಯ ವಿಶೇಷ ರೀತಿಯ ಆಚರಣೆ ಮಾಡಬಾರದು. ಸಾರ್ವಜನಿಕ ಸ್ಥಳಗಳಲ್ಲಿ, ಬೀದಿಗಳಲ್ಲಿ ಯಾವುದೇ ಪರ ವಿರೋಧ ಕಾರ್ಯಕ್ರಮಗಳನ್ನು ನಡೆಸಬಾರದು. ಕಾನೂನು ಉಲ್ಲಂಘಿಸಿ ಯಾವುದೇ ಕಾರ್ಯಕ್ರಮ, ಆಚರಣೆ ನಡೆಸಿದರೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಭೀಮಾಶಂಕರ ಎಸ್. ಹೇಳಿದರು. ಶ್ರೀ ರಾಮ ಮಂದಿರದ […]

ಸಂಸ್ಥೆಗಳು ಕೂಡಲೇ ಸಿಬಂದಿಗಳಿಗೆ ಕೋವಿಡ್ -19 ತಪಾಸಣೆ ಮಾಡಿಸಬೇಕು: ಜಿಲ್ಲಾಧಿಕಾರಿ ಜಿ ಜಗದೀಶ್

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆ ಯಾಗುತ್ತಿದ್ದು ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಮಾಲ್ ಗಳು,ಶಾಪಿಂಗ್ ಕಾಂಪ್ಲೆಕ್ಸ್ ಗಳು,ಅಂಗಡಿ ಮುಂಗಟ್ಟುಗಳು, Zomato , Swiggy  ಯಂತಹ ಆಹಾರ ವಿತರಕ ಸಂಸ್ಥೆಗಳು,ಹೊಟೇಲ್ ಮತ್ತು ರೆಸ್ಟೋರೆಂಟ್ ಗಳ ತಮ್ಮ ಸಂಸ್ಥೆಯ ಸಿಬ್ಬಂದಿಗಳಿಗೆ ಕೊವಿಡ್ ತಪಾಸಣೆ ಮಾಡಿಸುವಂತೆ ಆದೇಶ ನೀಡಲಾಗಿತ್ತು. ಆದರೆ ಕೆಲವು ಸಂಸ್ಥೆಗಳನ್ನು ಹೊರತುಪಡಿಸಿ ಹೆಚ್ಚಿನ ಸಂಸ್ಥೆಯವರು  ತಮ್ಮ ಸಿಬ್ಬಂದಿಯವರಿಗೆ ಕೋವಿಡ್ ಪರೀಕ್ಷೆ ಮಾಡಿಸದೇ ಇರುವುದು ಕಂಡುಬAದಿರುತ್ತದೆ. ಆದ್ದರಿಂದ ಜಿಲ್ಲೆಯಲ್ಲಿರುವ  ಎಲ್ಲಾ ಮಾಲ್ ಗಳು,ಶಾಪಿಂಗ್ ಕಾಂಪ್ಲೆಕ್ಸ್ ಗಳು,ಅಂಗಡಿ ಮುಂಗಟ್ಟುಗಳು, […]

ಪಂಜರ ಮೀನು ಕೃಷಿ ಮಾಡುವ ಆಸಕ್ತಿ ಇದ್ಯಾ? ಇಲ್ಲಿದೆ ತರಬೇತಿ

ಉಡುಪಿ :  ಮೀನುಗಾರಿಕೆ ಇಲಾಖೆ ವತಿಯಿಂದ ಪಂಜರ ಮೀನುಕೃಷಿ ತರಭೇತಿ ಕಾರ್ಯಾಗಾರವನ್ನು ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ  ಆಗಸ್ಟ್ 8 ರಂದು ಹಮ್ಮಿಕೊಂಡಿದ್ದು ಮೀನು ಕೃಷಿ ಕೈಗೊಳ್ಳಲು ಇಚ್ಚಿಸಿರುವ ಆಸಕ್ತರು ಮೀನುಗಾರಿಕೆ ಸಹಾಯಕ ನಿರ್ದೇಶಕರು,ಶ್ರೇಣಿ -2  ಕಛೇರಿ ಕುಂದಾಪುರ ಇಲ್ಲಿ ಆಗಸ್ಟ್ 6 ರಂದು ಅಪರಾಹ್ನ 4 ಘಂಟೆಯೊಳಗೆ ತಮ್ಮ ಹೆಸರನ್ನು ನೊಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು,ಶ್ರೇಣಿ -2 ರವರ ಕಛೇರಿ ಕುಂದಾಪರ ದೂರವಾಣಿ ಸಂಖ್ಯೆ -08254-230534 ಸಂಪರ್ಕಿಸಬಹುದು.

ಕೊರೊನಾ ಪರಿಕರಗಳ ಖರೀದಿ ಹಗರಣ ನ್ಯಾಯಾಂಗದ ತನಿಖೆಗೆ ಒಪ್ಪಿಸಿ: ದಿನೇಶ್ ಗುಂಡೂರಾವ್

ಉಡುಪಿ: ರಾಜ್ಯ ಬಿಜೆಪಿ ಸರ್ಕಾರ ಕೊರೊನಾ ನಿರ್ವಹಣಾ ಪರಿಕರಗಳ ಖರೀದಿಯಲ್ಲಿ ದೊಡ್ಡಮಟ್ಟದಲ್ಲಿ ಲೂಟಿ ಮಾಡಿದ್ದು, ವೆಂಟಿಲೇಟರ್, ಪಿಪಿ ಕಿಟ್, ಮಾಸ್ಕ್ ಹಾಗೂ ಸ್ಯಾನಿಟೈಸರ್ ಖರೀದಿಯಲ್ಲಿ ಸರ್ಕಾರ ಶೇ. 50ರಷ್ಟು ಭ್ರಷ್ಟಾಚಾರ ಎಸಗಿದೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಆರೋಪಿಸಿದರು. ಉಡುಪಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ವಿರೋಧ ಪಕ್ಷ ನಾಯಕ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೂಕ್ತ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಸಚಿವರು ಇದಕ್ಕೆ ಸೂಕ್ತ ಉತ್ತರ ನೀಡದೆ […]

ಮಲ್ಪೆ ಮೀನುಗಾರರ ಸಂಘದ ವತಿಯಿಂದ ಸಮುದ್ರ ಪೂಜೆ

ಮಲ್ಪೆ: ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಇಂದು ಮಲ್ಪೆಯ ಕಡಲ ತೀರದಲ್ಲಿ ಸಮುದ್ರ ಪೂಜೆ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಮೀನುಗಾರಿಕೆ, ಬಂದರು ಮತ್ತು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ. ರಘುಪತಿ ಭಟ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ, ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ಹಾಗೂ ಮೀನುಗಾರ ಸಂಘದ ಮುಖಂಡರು ಉಪಸ್ಥಿತರಿದ್ದರು.