ಉಡುಪಿ ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್ ಕೊರತೆ: ಸ್ವಯಂ ಸೇವಕರಾಗಿ ಬರುವಂತೆ ಯುವಕರಿಗೆ ಶಾಸಕ ರಘುಪತಿ ಭಟ್ ಕರೆ

ಉಡುಪಿ: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಇದರಿಂದ ಕೊರೊನಾ ವಿರುದ್ಧ ಹೋರಾಡುವ ವಾರಿಯರ್ಸ್ ಗಳ ಕೊರತೆ ಎದುರಾಗಿದೆ. ಜಿಲ್ಲೆಯಲ್ಲಿ 749 ವೈದ್ಯಕೀಯ ಸಿಬ್ಬಂದಿ ಹುದ್ದೆ ಖಾಲಿ ಇದೆ. ಹಾಗಾಗಿ ಆರೋಗ್ಯವಂತ ಯುವಕರು ಸ್ವಯಂ ಸೇವಕರಾಗಿ ಬರುವಂತೆ ಉಡುಪಿ ಶಾಸಕ ಕೆ. ರಘುಪತಿ ಭಟ್ ಮನವಿ ಮಾಡಿದ್ದಾರೆ.

ಉಡುಪಿ ನಗರದ ವಿವಿಧ ಭಾಗಗಳಲ್ಲಿ ವನಮಹೋತ್ಸವ

ಉಡುಪಿ: ಉಡುಪಿ ನಗರ ಬಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ವನಮಹೋತ್ಸವದ ಅಂಗವಾಗಿ ವಿವಿಧ ಭಾಗದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಕರಂಬಳ್ಳಿ ವಾರ್ಡಿನ ವೆಂಕಟರಮಣ ದೇವಸ್ಥಾನದ ಬಳಿ, ಮೂಡು ಸಗ್ರಿ ವಾರ್ಡಿನ ಬಾಲಾಜಿ ಲೇ ಔಟ್ ಬಳಿ, ಒಳಕಾಡು ವಾರ್ಡಿನ ಪಾಂಡು ಶೇರಿಗಾರ್ ಮನೆ ಬಳಿ, ಕಡಿಯಾಳಿ ವಾರ್ಡಿನ ಕಾತ್ಯಾಯಿನಿ ನಗರದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಡುಪಿ ನಗರ ಬಿಜೆಪಿ ವತಿಯಿಂದ […]

ದ.ಕ.‌ಜಿಲ್ಲೆ: ಕೊರೊನಾಗೆ 10 ಮಂದಿ ಬಲಿ; 169ಕ್ಕೇರಿದ ಸಾವಿನ ಸಂಖ್ಯೆ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇಂದು  ಬರೋಬ್ಬರಿ 10 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಆ ಮೂಲಕ ಕೊರೊನಾಗೆ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 169ಕ್ಕೆ ಏರಿಕೆಯಾಗಿದೆ. ಇಂದು 167 ಮಂದಿಗೆ ಪಾಸಿಟಿವ್ ಇಂದು ಮಂಗಳೂರು ತಾಲೂಕಿನ‌ 107 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಬೆಳ್ತಂಗಡಿಯ 19, ಬಂಟ್ವಾಳದ 13, ಪುತ್ತೂರಿನ 11 ಹಾಗೂ ಸುಳ್ಯ ತಾಲೂಕಿನ ಓರ್ವ ವ್ಯಕ್ತಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಹೊರ ಜಿಲ್ಲೆಯಿಂದ ಬಂದ 9 ಮಂದಿಗೆ ಕೊರೋನಾ ಪಾಸಿಟಿವ್, ಹೊರ ರಾಜ್ಯದಿಂದ ಬಂದ ಮೂವರಿಗೆ ಕೊರೋನಾ […]

ರಾತ್ರಿ 8ರಿಂದ 4ರ ವರೆಗೆ ರಾಷ್ಟ್ರೀಯ ವಿಶ್ರಾಂತಿ ಸಮಯವೆಂದು ಘೋಷಿಸಿ: ಕೊರೊನಾ‌ ಮಣಿಸಲು ಪುತ್ತಿಗೆ ಶ್ರೀ‌ ಸಲಹೆ

ಉಡುಪಿ: ಕೊರೊನಾ ಸೋಂಕನ್ನು ಸಂಪೂರ್ಣವಾಗಿ ತಡೆಗಟ್ಟಲು ಲಾಕ್ ಡೌನ್ ಅಂಥ ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕು. ಮನುಷ್ಯನ ಪ್ರತಿರೋಧ ಶಕ್ತಿ ಹೆಚ್ಚಿಸಲು ಪೂರಕವಾಗುವಂತೆ ರಾತ್ರಿ 8 ರಿಂದ ಬೆಳಗ್ಗೆ 4ರವರೆಗೆ ರಾಷ್ಟ್ರೀಯ ವಿಶ್ರಾಂತಿ ಸಮಯವೆಂದು ಘೋಷಿಸಬೇಕು ಎಂದು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕೇಂದ್ರ ಸರಕಾರವನ್ನು ಅಗ್ರಹಿಸಿದ್ದಾರೆ. ಕೊರೊನಾ ಸೋಂಕಿನಿಂದ ದೇಶದ ಆರೋಗ್ಯ ರಕ್ಷಣೆಗಾಗಿ ಈ ವಿಶ್ರಾಂತಿ ಸಮಯದಲ್ಲಿ ಯಾವುದೇ ಟಿವಿ ಪ್ರಸಾರ, ಮನೋರಂಜನಾ ಕಾರ್ಯಕ್ರಮಗಳನ್ನೆಲ್ಲಾ ನಿರ್ಬಂಧಿಸಬೇಕು. ವಿಶ್ರಾಂತಿ ಸಮಯಕ್ಕೆ ತೊಂದರೆಯಾಗುವ ರಾತ್ರಿ ಪ್ರಯಾಣಗಳನ್ನು ನಿಷೇಧಿಸಬೇಕು […]

ವಿಶ್ವಪ್ರಸನ್ನ ತೀರ್ಥ ಶ್ರೀಗಳ ಆಶೀರ್ವಾದ ಪಡೆದ ಕೋಟ: ಗೋ ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕು: ವಿಶ್ವಪ್ರಸನ್ನ ಶ್ರೀ

ಉಡುಪಿ: ಬ್ರಹ್ಮಾವರದ ನೀಲಾವರ  ಗೋಶಾಲೆ‌ಯಲ್ಲಿರುವ ಶಾಖಾ ಮಠದಲ್ಲಿ ಚಾತುರ್ಮಾಸ್ಯ ವೃತ ಕೈಗೊಂಡಿರುವ ಅಯೋಧ್ಯೆಯ ಶ್ರೀರಾಮ ಮಂದಿರದ ಟ್ರಷ್ಟಿಗಳಲ್ಲಿ ಒಬ್ಬರಾದ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ರಾಜ್ಯ ಹಿಂದೂ ಧಾರ್ಮಿಕ ದತ್ತಿ, ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿಯಾಗಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ, ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಇರುವ ಗೋಶಾಲೆಗಳು ಸಂಕಷ್ಟಕ್ಕೆ ಒಳಗಾಗಿರುವುದರಿಂದ, ಗೋವುಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಧಾವಿಸಬೇಕು. ಈ ಕುರಿತು ತಾವು […]