ಉಡುಪಿ: ಇಂದು 182 ಮಂದಿಗೆ ಕೊರೊನಾ ಪಾಸಿಟಿವ್: 54 ವರ್ಷದ ಮಹಿಳೆ ಕೊರೊನಾಗೆ ಬಲಿ

ಉಡುಪಿ: ಜಿಲ್ಲೆಯಲ್ಲಿ ಇಂದು 182 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4672ಕ್ಕೆ ಏರಿಕೆಯಾಗಿದೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ಉಡುಪಿ ತಾಲ್ಲೂಕಿನ 75, ಕುಂದಾಪುರ ತಾಲ್ಲೂಕಿನ 55 ಹಾಗೂ ಕಾರ್ಕಳ ತಾಲ್ಲೂಕಿನ 51 ಮಂದಿಗೆ ಸಹಿತ ಜಿಲ್ಲೆಯಲ್ಲಿ ಒಟ್ಟು 182 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಅದರಲ್ಲಿ 107 ಮಂದಿ ಪುರುಷರು ಹಾಗೂ 75 ಮಹಿಳೆಯರು ಒಳಗೊಂಡಿದ್ದಾರೆ. ಇಂದು 50 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. […]

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಕೊರೊನಾ ಪಾಸಿಟಿವ್

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಅಮಿತ್ ಷಾ ಅವರು ಟ್ವೀಟ್ ಮಾಡಿದ್ದು, ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಈಗಾಗಲೇ ಆಸ್ಪತ್ರೆಗೆ ದಾಖಲಾಗಿದ್ದೇನೆ. ಆರೋಗ್ಯವಾಗಿದ್ದೇನೆ. ಕಳೆದ ಕೆಲವು‌ ದಿನಗಳಿಂದ ನನ್ನ ಜತೆ ಸಂಪರ್ಕದಲ್ಲಿ ಇದ್ದವರು ಕೊರೊನಾ ಟೆಸ್ಟ್ ಮಾಡಿಸಿ ಜತೆಗೆ ಐಸೋಲೇಶನ್ ನಲ್ಲಿ ಇರುವಂತೆ ತಮ್ಮ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ಭಾರತ ಸಹಿತ 31 ದೇಶಗಳಿಗೆ ವಿಮಾನ ಹಾರಾಟ ರದ್ದುಗೊಳಿಸಿದ ಕುವೈತ್: ಸಂಕಷ್ಟದಲ್ಲಿರುವ ಭಾರತೀಯರನ್ನು ಕರೆತರಲು ಅಡ್ಡಿ

ಉಡುಪಿ: ಜಗತ್ತಿನ ಎಲ್ಲ ದೇಶಗಳಿಗೂ ಕೊರೊನಾ ಸೋಂಕು ಕಂಟಕವಾಗಿ ಪರಿಣಮಿಸಿದ್ದು, ಇದರಿಂದ ತಮ್ಮ ದೇಶವನ್ನು ರಕ್ಷಿಸಲು ಹಲವಾರು ಕ್ರಮಗಳನ್ನು ಕೈಗೊಳುತ್ತಿವೆ. ಅದರಂತೆ ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕುವೈತ್ ಭಾರತ ಸೇರಿದಂತೆ ಹೆಚ್ಚು ಸೋಂಕು ಪ್ರಕರಣಗಳಿರುವ 31  ‌ದೇಶಗಳಿಗೆ ವಿಮಾನ ಸಂಚಾರವನ್ನು ನಿಷೇಧಿಸಿದೆ. ಭಾರತ, ಸಿಂಗಾಪುರ, ಇಟಲಿ, ಸಪೇನ್, ಹಾಂಕಾಂಗ್, ಚೀನಾ, ಶ್ರೀಲಂಕಾ, ನೇಪಾಳ, ಮೆಕ್ಸಿಕೊ, ಇಂಡೋನೇಷ್ಯಾ, ಚಿಲಿ, ಪಾಕಿಸ್ತಾನ, ಈಜಿಪ್ಟ್‌, ಇರಾನ್‌, ಬ್ರೆಝಿಲ್‌, ಕೊಲಂಬಿಯಾ, ಬಾಂಗ್ಲಾದೇಶ ಹಾಗೂ ಫಿಲಿಫಿನ್ಸ್‌ ಸೇರಿದಂತೆ ಒಟ್ಟು 31 ದೇಶಗಳಿಗೆ ವಿಮಾನ […]

ಶಿರಿಯಾರ-ಕಲ್ಮರ್ಗಿ: ಜೆರಾಕ್ಸ್ ಸೇವಾ ಕೇಂದ್ರ ಉದ್ಘಾಟನೆ

ಉಡುಪಿ: ಶಿರಿಯಾರ-ಕಲ್ಮರ್ಗಿ ಶ್ರೀರಾಮ ಮಂದಿರದ ಬಳಿಯಲ್ಲಿ ಪ್ರೀತಿ ನಾಯಕ್ ಅವರ ಮಾಲಕತ್ವದಲ್ಲಿ ಸೇವಾ ಕೇಂದ್ರದ ಉದ್ಘಾಟನೆ ನಡೆಯಿತು. ಇಲ್ಲಿ ಕರೆಂಟ್ ಬಿಲ್, ಆರ್ಟಿಸಿ ಜೆರಾಕ್ಸ್, ಟಿವಿ, ಮೊಬೈಲ್ ರೀಚಾರ್ಜ್, ಎಲ್ಐಸಿ ಪ್ರೀಮಿಯಂ ಇತ್ಯಾದಿ ಸೇವೆಗಳು ಲಭ್ಯವಿದೆ ಎಂದು ಮಾಲಕಿ ಪ್ರೀತಿ ನಾಯಕ್ ತಿಳಿಸಿದರು. ಬ್ರಹ್ಮಾವರ, ಕುಂದಾಪುರ ತಾಲೂಕು ಕಚೇರಿ, ಕೋಟ ನಾಡಕಚೇರಿಗೆ ರೈತರ ಅಲೆದಾಟವನ್ನು ತಪ್ಪಿಸುವ ಉದ್ದೇಶದಿಂದ ಈ ಕೇಂದ್ರ ತೆರೆಯಲಾಗಿದೆ ಎಂದು ಉಡುಪಿಯ ನೋಟರಿ ಕಲ್ಮರ್ಗಿ ಶಿರಿಯಾರ ಪ್ರಭಾಕರ್ ನಾಯಕ್ ತಿಳಿಸಿದ್ದಾರೆ. ಉದ್ಯಮಿ ಕಲ್ಮರ್ಗಿ ಎಸ್. […]

ಕೊರೊನಾ ಭೀತಿ, ಕಾರ್ಮಿಕರ ಅಲಭ್ಯತೆ: ಉಡುಪಿ ಜಿಲ್ಲೆಯಲ್ಲಿ ಆರಂಭಗೊಳ್ಳದ ಯಾಂತ್ರೀಕೃತ ಮೀನುಗಾರಿಕೆ

ಉಡುಪಿ: ಜಿಲ್ಲೆಯಲ್ಲಿ ಆಗಸ್ಟ್ 1ರಿಂದ ಯಾಂತ್ರೀಕೃತ ಮೀನುಗಾರಿಕೆ ಆರಂಭವಾಗಬೇಕಿತ್ತು. ಆದರೆ ಕೊರೊನಾ ಸೋಂಕು ಇದಕ್ಕೆ ತಡೆಯೊಡ್ಡಿದ್ದು, ಮೀನುಗಾರರು ಸೋಂಕಿಗೆ ಭಯಗೊಂಡು ಕಡಲಿಗೆ ಇಳಿಯಲು ಹಿಂದೇಟು ಹಾಕುತ್ತಿದ್ದಾರೆ. ಮೀನುಗಾರರು ಅಥವಾ ಬಂದರಿನಲ್ಲಿ ದುಡಿಯುವ ಕಾರ್ಮಿಕರಿಗೆ ಒಂದು ವೇಳೆ ಕೊರೊನಾ ಸೋಂಕು ತಗುಲಿದರೆ, ಇಡೀ ಮೀನುಗಾರಿಕಾ ಬಂದರನ್ನು ಸೀಲ್ ಡೌನ್ ಮಾಡಬೇಕಾದ ಪ್ರಮೇಯ ಎದುರಾಗಬಹುದು ಎಂದು ಮೀನುಗಾರರು ಮೀನುಗಾರಿಕೆ ಹೋಗಲು ಹಿಂಜರಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮಲ್ಪೆ ಬಂದರಿನಲ್ಲಿ 1500ಕ್ಕೂ ಹೆಚ್ಚಿನ ಯಾಂತ್ರೀಕೃತ ಬೋಟಗಳು ಮೀನುಗಾರಿಕೆ ನಡೆಸುತ್ತಿವೆ. ಕರಾವಳಿ ತೀರದ ಜನರು […]